ತುಮಕೂರು: ಆರ್ಥಿಕ ಚಟುವಟಿಕೆ ವೃದ್ಧಿಸಿ, ತುಮಕೂರಿನ ಕಲಾ ಕೀರ್ತಿಯನ್ನು ಬೆಳಗಿದ್ದ ಹೆಚ್‌ಎಂಟಿ ಕೈಗಡಿಯಾರ ಕಾರ್ಯಾನೆಯ ವೈಭವದ ದಿನಗಳನ್ನು ಇಂದಿನ ತಲೆಮಾರಿಗೆ ಪರಿಚಯಿಸಲು ನಗರದಲ್ಲಿ ಹೆಚ್‌ಎಂಟಿಯ ಸ್ಮಾರಕ ನಿರ್ಮಾಣ ಮಾಡಬೇಕು, ಇದಕ್ಕಾಗಿ ಆಸಕ್ತರು ಕೈ ಜೋಡಿಸಬೇಕು ಎಂದು ನಗರ ಪಾಲಿಕೆ ಮಾಜಿ ಮೇಯರ್ ಹಾಗೂ ನುಡಿ ಕನ್ನಡ ಕಲಾ ಸಂಘದ ಅಧ್ಯಕ್ಷ ಬಿ.ಜಿ.ಕೃಷ್ಣಪ್ಪ ಹೇಳಿದರು.
ಕಲಾ ಸಂಘದಿAದ ಸೋಮವಾರ ಸಂಜೆ ಹೆಚ್‌ಎಂಟಿಯ ಹೆಸರಾಂತ ನಾಟಕ ನಿರ್ದೇಶಕ ತಿಪ್ಪೂರು ಕೃಷ್ಣಮೂರ್ತಿಯವರ ಸ್ಮರಣಾರ್ಥ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಪರಿಣತ ಕಲಾವಿದರನ್ನು ಒಳಗೊಂಡ ಹೆಚ್‌ಎಂಟಿಯ ಲಲಿತ ಕಲಾ ಸಂಘ ತನ್ನ ನಾಟಕಗಳ ಮೂಲಕ ನಾಡಿನಾದ್ಯಂತ ಹೆಸರಾಗಿತ್ತು. ತಂಡ ರಾಜ್ಯ, ರಾಷ್ಟç ಮಟ್ಟದ ನಾಟಕ ಸ್ಪರ್ಧೆಗಳಲ್ಲಿ ಬಹುಮಾನ ಪಡೆದು ತುಮಕೂರಿಗೆ ಕೀರ್ತಿ ತಂದಿತ್ತು. ಅಲ್ಲದೆ ನಗರದಲ್ಲಿ ಆರ್ಥಿಕ ಚಟುವಟಿಕೆ ವೃದ್ಧಿಯಾಗಲೂ ಹೆಚ್‌ಎಂಟಿ ಕಾರಣವಾಗಿತ್ತು ಎಂದರು.
ಇAತಹ ಹೆಚ್‌ಎಂಟಿ ಈಗ ಇಲ್ಲವಾಗಿರುವುದು ಆರ್ಥಿಕ, ಕಲಾ ಕ್ಷೇತ್ರಕ್ಕೆ ನಷ್ಟವೇ ಆಗಿದೆ. ಅಂತಹ ಹೆಚ್‌ಎಂಟಿಯ ವೈಭವದ ದಿನಗಳನ್ನು ಅಜರಾಮರವಾಗಿಸಬೇಕು, ನಗರದಲ್ಲಿ ಹೆಚ್‌ಎಂಟಿಯ ಸ್ಮಾರಕ ನಿರ್ಮಾಣ ಮಾಡಬೇಕು. ಅದಕ್ಕಾಗಿ ಪ್ರಯತ್ನ ನಡೆದಿದೆ. ಹಾಗೇ ಹೆಚ್‌ಎಂಟಿ ದಿನಗಳ ಕಾಲದ ನಾಟಕ ಚಟುವಟಿಕೆಗಳನ್ನು ಸಂಘಸAಸ್ಥೆಗಳು ಮುಂದುವರೆಸಬೇಕು ಎಂದು ಹೇಳಿದರು.
ಕೇಂದ್ರ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ರಂಗ ಕಲಾವಿದ ಡಾ.ಲಕ್ಷö್ಮಣದಾಸ್ ಕಾರ್ಯಕ್ರಮ ಉದ್ಘಾಟಿಸಿ, ತುಮಕೂರಿಗೆ ದೊಡ್ಡ ಕೊಡುಗೆ ಕೊಟ್ಟ ಹೆಚ್‌ಎಂಟಿಯನ್ನು ನಾವೆಲ್ಲಾ ಧ್ಯಾನಿಸಬೇಕು, ಸಂಭ್ರಮಿಸಬೇಕು. ಹೆಚ್‌ಎಂಟಿ ಕೇವಲ ಕೈಗಡಿಯಾರಗಳನ್ನು ಉತ್ಪಾದನೆ ಮಾಡಲಿಲ್ಲ, ಪ್ರಬುದ್ಧ ಕಲಾವಿದರನ್ನೂ ಸೃಷ್ಟಿ ಮಾಡಿತು. ಇದಕ್ಕೆ ತಿಪ್ಪೂರು ಕೃಷ್ಣಮೂರ್ತಿಯವರಂತಹ ರಂಗನಿರ್ದೇಶಕರು ಕಾರಣ. ಅವರ ನಿರ್ದೇಶನದ ನಾಟಕಗಳು ನಾಡಿನಾದ್ಯಂತ ಹೆಸರಾಗಿದ್ದವು, ಪ್ರಸಿದ್ಧ ನಾಟಕಗಳನ್ನು ರಂಗಕ್ಕೆ ತಂದಿದ್ದರು ಎಂದರು.
ಶಬರಿಮಲೈ ಅಯ್ಯಪ್ಪ ಸೇವಾ ಸಮಾಜಂನ ರಾಷ್ಟಿçÃಯ ಅಧ್ಯಕ್ಷ ಟಿ.ಬಿ.ಶೇಖರ್ ಮಾತನಾಡಿ, ಹೆಚ್‌ಎಂಟಿ ಹಾಗೂ ಅಲ್ಲಿನ ಲಲಿತ ಕಲಾ ಸಂಘದ ಕಲಾ ಸೇವೆ ಸ್ಮರಿಸಿದರು. ಹೆಚ್‌ಎಂಟಿಯಲ್ಲಿ ಸೇವೆ ಸಲ್ಲಿಸಿದ್ದ ಹಿರಿಯ ಕಲಾವಿದ, ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಎ.ಎಸ್.ಎ.ಖಾನ್, ಹೆಚ್‌ಎಂಟಿ ಸೇವೆ ನಂತರ ಸಹಕಾರ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ, ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರದ ಪಿ.ಮೂರ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ನಿವೃತ್ತ ಪ್ರಾಂಶುಪಾಲರಾದ ಡಾ.ಲೀಲಾವತಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ನುಡಿ ಕನ್ನಡ ಕಲಾ ಸಂಘದ ಉಪಾಧ್ಯಕ್ಷ ರಾಮಲಿಂಗೇಗೌಡ, ಕಾರ್ಯದರ್ಶಿ ಎನ್.ಎಸ್.ಕೃಷ್ಣಯ್ಯ, ಹಾಸ್ಯಲೋಕದ ಅಧ್ಯಕ್ಷ ಶಂಕರಯ್ಯ, ಹಿರಿಯ ಕಲಾವಿದರಾದ ರಮಾನಂದ್, ರೇವಣಸಿದ್ದಯ್ಯ, ಹಲವರು ಭಾಗವಹಿಸಿದ್ದರು.

(Visited 1 times, 1 visits today)