ತುಮಕೂರು: ರಾಸಾಯನಿಕಗಳು ಮತ್ತು ಕೀಟನಾಶಕಗಳ ಬಳಕೆಯಿಂದ ಭೂಮಿ ತನ್ನ ಫಲವತ್ತತೆಯನ್ನು ಕಳೆದುಕೊಂಡಿದೆ. ಸಾವಯವ ಕೃಷಿಯಿಂದ ಮಾತ್ರ ಭೂಮಿ ಮತ್ತೊಮ್ಮೆ ಉಸಿರಾಡಲು ಸಾಧ್ಯ ಎಂದು ಉತ್ತರಪ್ರದೇಶ ರಾಜ್ಯ ಪರಿಸರ ಮೌಲ್ಯಮಾಪನ ಸಮಿತಿಯ ಅಧ್ಯಕ್ಷ ಪ್ರೊ. ಹರಿಕೇಶ್ ಬಹದ್ದೂರ್ ಸಿಂಗ್ ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯ ಜೀವತಂತ್ರಜ್ಞಾನ ಮತ್ತು ಸೂಕ್ಷö್ಮ ಜೀವವಿಜ್ಞಾನ ಅಧ್ಯಯನ ಮತ್ತು ಸಂಶೋಧನ ವಿಭಾಗವು ಗುರುವಾರ ಆಯೋಜಿಸಿದ್ದ ನೂತನ ಸ್ನಾತಕೋತ್ತರ ಮತ್ತು ಸಂಶೋಧನಾ ಪ್ರಯೋಗಾಲಯಗಳ ಉದ್ಘಾಟನೆ ಹಾಗೂ ಜೈವಿಕ ತಂತ್ರಜ್ಞಾನ ಮತ್ತು ಸೂಕ್ಷö್ಮ ಜೀವವಿಜ್ಞಾನ ಕೌಶಲ್ಯ ವಿಜ್ಞಾನ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಪ್ರಾಚೀನ ಇತಿಹಾಸದಲ್ಲಿ ವೈಜ್ಞಾನಿಕ ಬೀಜಗಳ ಅಭಿವೃದ್ಧಿಯನ್ನು ವೃಕ್ಷಾಯುರ್ವೇದದಿಂದ ಕಲಿಯಬಹುದು. ತಾಯಿಯ ಎದೆ ಹಾಲಿಗಿಂತ ಶ್ರೇಷ್ಠ ಹಸುವಿನ ಹಾಲೆಂದು ವೈಜ್ಞಾನಿಕವಾಗಿ ಪರಿಗಣಿಸಲಾಗಿತ್ತು. ರಾಸಾಯನಿಕ ಮಿಶ್ರಿತ ಕಳಪೆ ಗುಣಮಟ್ಟದ ಆಹಾರವನ್ನು ಸೇವಿಸುತ್ತಿರುವಾಗ ಹಾಲು ವಿಷವಾಗಿದೆ. ಇದರಿಂದ ಆನುವಂಶಿಕ ಸಮಸ್ಯೆಗಳನ್ನು ಎದುರಿಸುವ ಪರಿಸ್ಥಿತಿ ಉಂಟಾಗಲಿದೆ ಎಂದರು.
‘ಸುಸ್ಥಿರ ಕೃಷಿಯಲ್ಲಿ ಜೈವಿಕ ಕೀಟನಾಶಕಗಳ ಪಾತ್ರ: ಪ್ರಸ್ತುತ ಸನ್ನಿವೇಶ, ನಿಯಂತ್ರಕ ಅವಶ್ಯಕತೆಗಳು ಮತ್ತು ವಾಣಿಜ್ಯೀಕರಣ’ ಕುರಿತು ವಿಶೇಷ ಉಪನ್ಯಾಸ ನೀಡಿದರು. ‘ವಿಭಾಗದ ಸಾಮಾಜಿಕ ಮಾಧ್ಯಮ ಕೈಪಿಡಿ’ ಬಿಡುಗಡೆಗೊಳಿಸಿ ಮಾತನಾಡಿದ ಸಮರ್ಥ್ ಲೈಫ್ ಸೈನ್ಸಸ್ ಪ್ರೆöÊ.ಲಿ. ವ್ಯವಸ್ಥಾಪಕ ನಿರ್ದೇಶಕ ಡಾ. ನರಸಿಂಹ ಪ್ರಸಾದ್, ಮಾರುಕಟ್ಟೆಯಲ್ಲಿ ಇದುವರೆಗೂ ಲಭ್ಯವಿಲ್ಲದ ತಂತ್ರಜ್ಞಾನ ಮತ್ತು ಉತ್ಪನ್ನವನ್ನು ಪರಿಚಯಿಸಲು ಕಾರ್ಯನಿರ್ವಹಿಸಬೇಕು ಎಂದರು. ಕುಲಸಚಿವೆ ನಾಹಿದಾ ಜûಮ್ ಜûಮ್ ‘ಆರಂಭಿಕ ಉತ್ಪನ್ನಗಳ ವಿವರ’ ಕೈಪಿಡಿಯನ್ನು ಬಿಡುಗಡೆಗೊಳಿಸಿದರು. ವಿವಿಧ ಬಗೆಯ ಸಸಿಗಳನ್ನು ನೆಡಲಾಯಿತು. ಜೀವತಂತ್ರಜ್ಞಾನ ಮತ್ತು ಸೂಕ್ಷö್ಮ ಜೀವವಿಜ್ಞಾನ ವಿಭಾಗದ ಅಧ್ಯಕ್ಷ ಡಾ. ಶರತ್‌ಚಂದ್ರ ಉಪಸ್ಥಿತರಿದ್ದರು.
(Visited 1 times, 1 visits today)