ಪಾವಗಡ: ಅನ್ನದಾನಕ್ಕಿಂತ ಮಿಗಿಲಾದ ದಾನವಿಲ್ಲಾ, ಕಲಿತ ವಿದ್ಯೆಯನ್ನು ಇನ್ನೊಬ್ಬರಿಗೆ ಕಲಸಿದರೆ ವಿದ್ಯಾದಾನವಾಗುತ್ತದೆ, ಶಿಕ್ಷಣಜೊತೆಗೆ ಅನ್ನದಾನ ಮಾಡುವುದರ ಜೊತೆಗೆ ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ಮೂಲ ಸೌಕರ್ಯಗಳನ್ನು ವದಗಿಸಬೇಕು ಎಂದು ಮಾಜಿ ಸಚಿವರಾದ ವೆಂಕಟರವಣಪ್ಪ ತಿಳಿಸಿದರು. ಗುರುವಾರ ಶಾಂತಿ ಎಸ್.ಎಸ್.ಕೆ. ಕಾಲೇಜಿನ ಅವರಣದಲ್ಲಿ ಎಸ್.ಎಸ್.ಕೆ. ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಭಕ್ತಾಧಿಗಳಿಗೆ ಹೆಚ್ಚುವರಿ ಪ್ರಸಾದ ವಿತರಣೆ ಹಾಗೂ ಶ್ರಿ ಶನಿಮಹಾತ್ಮ ವಿದ್ಯಾ ಮತ್ತು ಔದಾರ್ಯ ದತ್ತಿಯ ವಿದ್ಯಾರ್ಥಿಗಳಿಗೆ ಮದ್ಯಾಹ್ನದ ಲಘು ಉಪಹಾರ ವಿತರಣಾ ಮತ್ತು ಶುದ್ದಕುಡಿಯುವ ನೀರಿನ ಘಟಕವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ, 90 ರ ದಶಕದಲ್ಲಿ ಪಾವಗಡದ ಶನಿಮಹಾತ್ಮ ದೇವಸ್ಥಾನವನ್ನು ಸರ್ಕಾರದ ಸುಪರ್ಧಿಗೆ ನೀಡಲು ಅಂದಿನ ಸರ್ಕಾರ ತಿರ್ಮಾನಿಸಿತ್ತು ಅದರೆ ನಾನು ಅದನ್ನು ತಡೆದು ಅಡಳಿತ ಮಂಡಳಿ ಮುಂದುವರೆಯಲು ಅವಕಾಶ ಮಾಡಿಕೊಟ್ಟಿದ್ದೆ, ಇಂದು ದೇವಸ್ಥಾನ ಸಾಕಷ್ಟು ಅಭಿವೃದ್ದಿ ಹೊಂದುತ್ತಿದ್ದು, ದೇವಸ್ಥಾನಕ್ಕೆ ಸಾಕಷ್ಟು ವರಮಾನ ಬರುತ್ತಿದ್ದು ಅಡಳಿತ ಮಂಡಳಿ ಯಾವುದೆ ಪ್ರತಿಪಲಾಪೇಕ್ಷೆ ಇಲ್ಲದೆ ಸೇವೆ ಮಾಡಬೇಕು ಎಂದು ಕಿವಿ ಮಾತು ಹೇಳಿದರು. ಅಲ್ಲದೆ ವಿದ್ಯಾರ್ಥಿಗಳು ಉತ್ತಮವಾಗಿ ಅಬ್ಯಾಸ ಮಾಡಿ ಕಾಲೇಜಿಗೂ ಹಾಗೂ ತಂದೆ-ತಾಯAದರಿಗೆ ಕಿರ್ತಿ ತರಬೇಕು ಎಂದು ತಿಳಿಸಿದರು. ಕಳೆದ ಐದು ವರ್ಷಗಳ ಹಿಂದೆ ಈ ಹಿಂದಿನ ಅಧ್ಯಕ್ಷರಾದ ದಿವಂಗತ ಜಿ.ಎಸ್. ಧರ್ಮಪಾಲ್ ರವರು ಮದ್ಯಾಹದ ಉಪಹಾರ ಯೋಜನೆಯನ್ನು ಪ್ರಾರಂಭಿಸಲು ಯೋಚಿಸಿದ್ದರು , ಅದರೆ ಅವರ ಆಸೆ ಅಂದು ಈಡೇರಲಿಲ್ಲಾ, ಇಂದು ಅವರ ಆಸೆಯನ್ನು ಈಡೇರಿಸಿದಂತಾಯಿತು ಎಂದು ಎಸ್.ಎಸ್.ಕೆ. ಸಂಘದ ಅಧ್ಯಕ್ಷರಾದ ಸಿ.ಎನ್.ಅನಂದ್ ರಾವ್ ಹೇಳಿದರು. ಮಾಜಿ ಅಧ್ಯಕ್ಷರಾದ ಕೆ. ವಿ. ಶ್ರೀನಿವಾಸ್ ಮಾತನಾಡಿ, 1953 ರಲ್ಲಿ ಪ್ಲೇಗು, ಕಾಲರಾ ರೋಗಗಳಿಂದ ಸಾಕಷ್ಟು ಸಾವು- ನೋವುಗಳುಂಟಾದಾಗ ಪಾವಗಡ ದ ಗುತ್ತಿಗೆದಾರರಾದ ವೆಂಕಟಸುಬ್ಬಯ್ಯ ಶೆಟ್ಟರು ಮತ್ತು ಕಟ್ಟಾಕೃಷ್ಣಯ್ಯ ಶೆಟ್ಟಿ ನರಸಿಂಗರಾವ್ , ರಾಜಗೋಪಾಲಶೆಟ್ಟಿ, ವಿಶ್ವನಾಥಶೆಟ್ಟರು ಮತ್ತಿತರರು ಶನಿಮಹಾತ್ಮ ದೇವಸ್ಥಾನವನ್ನು ನಿರ್ಮಾಣ ಮಾಡಿ, ಎಸ್.ಎಸ್.ಕೆ. ಸಂಘವನ್ನು ನೊಂದಾಯಿಸಿದ್ದು, ಅಲ್ಲಿಂದ ಇಲ್ಲಿಯವರೆಗೂ ಎಲ್ಲಾ ಅಧ್ಯಕ್ಷರುಗಳು ದೇವಸ್ಥಾನವನ್ನು ಅಭಿವೃದ್ದಿಗೊಳಿಸುತ್ತಾ ಬಂದಿದ್ದಾರೆ ಎಂದು ದೇವಸ್ಥಾನದ ಇತಿಹಾಸವನ್ನು ಮೆಲುಕು ಹಾಕಿದರು. ಎಸ್.ಎಸ್.ಕೆ. ಸಂಘದ ಉಪಾದ್ಯಕ್ಷರಾದ ಜಿ.ಎಸ್. ಅನಿಲ್‌ಕುಮಾರ್, ಕಾರ್ಯದರ್ಶಿ ಸುಬ್ಬನರಸಿಂಹ ಮಾತನಾಡಿದರು, ಇದೇ ವೇಳೆ ರೈತ ಸಂಘದ ವಿ. ನಾಗಬೂಷಣರೆಡ್ಡಿ ಎಸ್.ಎಸ್.ಕೆ. ಸಂಘಕ್ಕೆ ಹೊಸದಾಗಿ ಸದಸ್ಯರನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಈ ವೇಳೆ ಖಜಾಂಚಿ ವೈ.ಆರ್. ಮೋಹನ್ ಕುಮಾರ್,ನಿದೇರ್ಶಕರಾದ ಸುದೇಶ್ ಕುಮಾರ್, ಮತ್ತು ಪದವಿಯ ವಿದ್ಯಾರ್ಥಿಗಳು ಹಾಜರಿದ್ದರು.
(Visited 1 times, 1 visits today)