ಚಿಕ್ಕನಾಯಕನಹಳ್ಳಿ: ಪಟ್ಟಣದ ಬಹುತೇಕ ರಸ್ತೆಗಳಲ್ಲಿ ನೀರಿನಪೈಪ್ ಒಡೆದು ಅಪಾರ ಪ್ರಮಾಣದ ನೀರು ಪೋಲಾಗುತ್ತಿದ್ದರು ಸಂಬAಧಿಸಿದ ಪುರಸಭೆ ಗಮನ ಹರಿಸದೆ ನಿರ್ಲ್ಯಕ್ಷಿಸಿರುವುದು ನಾಗರೀಕರ ಆಕ್ರೋಶಕ್ಕೆ ಕಾರಣವಾಗಿದೆ.
ಪಟ್ಟಣದಲ್ಲಿ ಒಳಚರಂಡಿ ಕಾಮಗಾರಿ ಆರಂಭಗೊAಡಿದ್ದೇ ತಡ ಪಟ್ಟಣದ ತುಂಬೆಲ್ಲಾ ಉತ್ತಮ ಸ್ಥಿತಿಯಲ್ಲಿದ್ದ ರಸ್ತೆಗಳನ್ನು ಅಗೆದು ಜನ ಹಾಗೂ ವಾಹನಗಳು ಓಡಾಡದಂತೆ ಮಾಡಿ ಎರಡುವರ್ಷ ಕಳೆದರೂ ನಾಗರೀಕರು ಈ ದುರ್ವ್ಯೆವಸ್ಥೆಗೆ ಹಿಡಿಶಾಪ ಹಾಕುತ್ತಾ ಓಡಾಡುತ್ತಿದ್ದಾರೆ. ಇದರ ಜೊತೆಗೆ ಮತ್ತೊಂದು ಅಧ್ವಾನವೆಂಬAತೆ ಬುಹುತೇಕ ರಸ್ತೆಗಳಲ್ಲಿ ಕುಡಿಯುವ ನೀರಿನ ಪೈಪ್‌ಲೈನ್ ಒಡೆದು ಪ್ರವಾಹೋಪಾದಿಯಲ್ಲಿ ಅಮೂಲ್ಯ ನೀರು ವ್ಯರ್ಥವಾಗುತ್ತಿರುವುದು. ಟ್ಯಾಂಕ್ ನಿಂದ ನಾಗರೀಕರಿಗೆ ಕೊಳಾಯಿ ಮೂಲಕ ನೀರು ಬಿಟ್ಟಾಗ ಪಟ್ಟಣದ ಹೆದ್ದಾರಿಯ ನೆಹರೂ ವೃತ್ತ, ಸರ್ಕಾರಿ ಬಸ್ ನಿಲ್ದಾಣ, ಪೊಲೀಸ್‌ಠಾಣೆ ಮುಂಬಾಗ ಇನ್ನು ಹಲವೆಡೆ ಟಾರ್ ರಸ್ತೆಯ ಕೆಳಗಿನಿಂದ ಒಡೆದ ಪೈಪ್ ಮೂಲಕ ಅಪಾರ ಪ್ರಮಾಣದ ನೀರು ಪೋಲಾಗುತ್ತಿದೆ. ಇನ್ನೂ ಪಟ್ಟಣದ ಬ್ರಾಹ್ಮಣರ ಬೀದಿ, ಅಡ್ಡರಸ್ತೆ, ಹಳ್ಳಿಕಾರರ ಬೀದಿ, ಮಾರುಕಟ್ಟೆ ರಸ್ತೆ ಮುಂತಾದೆಡೆ ಒಡೆದ ಪೈಪ್ ಮೂಲಕ ಹಳ್ಳದೋಪಾದಿಯಲ್ಲಿ ನೀರು ರಸ್ತೆಯ ತುಂಬೆಲ್ಲಾ ಹರಿದಾಡುತ್ತಿದೆ. ಕಳೆದ ಒಂದುವರ್ಷದಿAದ ಇದೇ ಸ್ಥಿತಿ ಮುಂದುವರೆದಿದ್ದರೂ ಸಂಬAಧಿಸಿದ ಪುರಸಭೆಯಾಗಲಿ, ಲೋಕೋಪಯೋಗಿ ಇಲಾಖೆಯಾಗಲಿ ಹಾಗೂ ಒಳ ಚರಂಡಿ ಸಿಬ್ಬಂದಿಯಾಗಲಿ ಗಮನಹರಿಸದ ಕಾರಣ ದಿನೇ ದಿನೇ ರಸ್ತೆಗಳಲ್ಲಿ ಹೊಸದಾಗಿ ಒಡೆದ ಪೈಪ್‌ಲೈನ್ ಪ್ರಕರಣಗಳು ಹೆಚ್ಚಾಗುತ್ತಿದೆ. ಒಳಚರಂಡಿ ನಿರ್ಮಾಣದ ಸಂದರ್ಭದಲ್ಲಿ ಒಡೆದ ನೀರಿನ ಪೈಪ್‌ಗಳನ್ನು ಸರಿಪಡಿಸುವುದು ಅವರ ಜವಾಬ್ದಾರಿಯಾಗಿದ್ದು ಅವರು ಕಾಟಾಚಾರವೆಂಬAತೆ ಮಾಡಿದ ಕಾರಣ ಮತ್ತೆ ಮತ್ತೆ ಪೈಪ್‌ಗಳು ಒಡೆದು ಹೋಗುತ್ತಿದೆ. ಹೆದ್ದಾರಿ ಪ್ರಾಧಿಕಾರದವರು ಟಾರ್ ರಸ್ತೆಮಾಡುವ ಸಂದರ್ಭದಲ್ಲಿ ಪೈಪ್‌ಲೈನ್‌ಗಳ ಸುವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳದೆ ಟಾರ್ ಹಾಕಿದ ಕಾರಣ ಎರಡೆ ದಿನದಲ್ಲಿ ಟಾರ್‌ರಸ್ತೆಯ ಒಳಭಾಗದಿಂದ ನೀರುಕ್ಕಿದ್ದು ದಿನ ಕಳೆದಂತೆ ಪೋಲಾಗುವ ನೀರಿನ ಪ್ರಮಾಣ ಹೆಚ್ಚಾಗುತ್ತಿದೆ. ಮುಂದೆ ಬೇಸಿಗೆ ಆರಂಭವಾಗಲಿದ್ದು ಕುಡಿಯುವ ನೀರಿನ ಅಭಾವ ಕಂಡುವರುವ ಮುನ್ನ ಪುರಸಭೆ ಈ ನೀರಿನ ಪೋಲನ್ನು ತಡೆಯಬೇಕೆನ್ನುವುದು ನಾಗರೀಕರ ಬೇಡಿಕೆಯಾಗಿದೆ.
ಉಪಾಧ್ಯಕ್ಷರ ಅಸಹಾಯಕತೆ: ಪಟ್ಟಣದ ತುಂಬೆಲ್ಲಾ ಪೈಪ್‌ಗಳು ಒಡೆದು ಅಪಾರ ಪ್ರಮಾಣದಲ್ಲಿ ನೀರು ಪೋಲಾಗುತ್ತಿರುವುದನ್ನು ಒಪ್ಪಿಕೊಂಡ ಪುರಸಭಾ ಉಪಾಧ್ಯಕ್ಷ ರಾಜಶೇಖರ್ ಈ ಕುರಿತು ಮಾತನಾಡಿ ಹೆದ್ದಾರಿಯಲ್ಲಿ , ಪಟ್ಟಣದ ಒಳಭಾಗದ ಪುರಸಭೆ ರಸ್ತೆಗಳಲ್ಲಿ ಒಡೆದ ಪೈಪ್‌ಗಳ ಮೂಲಕ ಅಪಾರ ಪ್ರಮಾಣದಲ್ಲಿ ನೀರು ಪೋಲಾಗುತ್ತಿದೆ. ಆದರೆ ಹೆದ್ದಾರಿಯಲ್ಲಿ ಒಡೆದಿರುವ ಪೈಪ್ ರಿಪೇರಿ ಮಾಡಲು ಲೋಕೋಪಯೋಗಿ ಇಲಾಖೆಯ ಗಮನಕ್ಕೆ ತಂದು ಸರಿಪಡಿಸಬೇಕು, ಈ ರಸ್ತೆಯ ನಿರ್ವಹಣೆ ಹೆದ್ದಾರಿಯವರದ್ದಾಗಿದ್ದು ಅರ‍್ಯಾರು ಸ್ಪಂದಿಸುತ್ತಿಲ್ಲ ಎಂದರು. ಉಳಿದಂತೆ ಪಟ್ಟಣದ ಒಳಗಡೆ ಆಗಿರುವ ಸಮಸ್ಯೆಯನ್ನು ಸಧ್ಯದಲ್ಲಿಯೇ ಸರಿಪಡಿಸಲಾಗುವುದು, ನಮ್ಮಲ್ಲಿ ಸಿಬ್ಬಂದಿಯ ಕೊರತೆಯಿದೆ ಎಂದರು.

(Visited 1 times, 1 visits today)