ಮಧುಗಿರಿ : ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬರುವುದಿಲ್ಲ ಎಂಬ ಗಾದೆ ಮಾತಿನಂತೆ ಸಮಾಜದಲ್ಲಿ ಪ್ರಜ್ಞಾವಂತರೆನಿಕೊAಡ ಸರ್ಕಾರಿ ನೌಕರರ ಪದಾಧಿಕಾರಿಗಳು ಮದ್ಯದ ಅಮಲಿನಲ್ಲಿ ಬಾಟಲಿಗಳಿಂದ ಹೊಡೆದಾಡಿಕೊಂಡಿರುವ ಘಟನೆ ಪಟ್ಟಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ನೌಕರರ ಸಂಘದ ಚುನಾವಣೆ ಸಂಪೂರ್ಣಗೊAಡಿದ್ದರೂ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಸರ್ಕಾರಿ ನೌಕರ ಸಂಘದ ಪದಾಧಿಕಾರಿಗಳು ಪರಸ್ಪರ ನಿಂದನೆಗಳನ್ನು ಮಾಡಿಕೊಳ್ಳುವುದರ ಜೊತೆಗೆ ಚಪ್ಪಲಿಗಳಲ್ಲಿ ಹೊಡೆದಾಡಿಕೊಂಡು ಕುಡಿದ ಅಮಲಿನಲ್ಲಿ ಮಧ್ಯದ ಬಾಟಲ್ ಗಳಿಂದ ಕೊಲೆ ಯತ್ನಕ್ಕೆ ಪ್ರಯತ್ನಿಸಿರುವ ಘಟನೆ ನೆಲಮಂಗಲ ಸಮೀಪದ ಡಾಬಾದಲ್ಲಿ ನಡೆದಿರುವ ಬಗ್ಗೆ ಮದುಗಿರಿಯಲ್ಲಿ ಬೆಳ್ಳಂ ಬೆಳಗ್ಗೆ “”ಟಾಕ್ ಆಫ್ ದಿ ಟೌನ್’’ ಆಗಿದೆ.
ಶನಿವಾರ ಬೆಂಗಳೂರಿನಲ್ಲಿ ರಾಜ್ಯಾಧ್ಯಕ್ಷರ ಚುನಾವಣೆ ನಡೆದು ಷಡಾಕ್ಷರಿ ಅವರು ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ನಂತರ ಮಧುಗಿರಿಯ ಸರ್ಕಾರಿ ನೌಕರರ ಸಂಘದವರು ಮಧುಗಿರಿಗೆ ವಾಪಾಸ್ಸಾಗುತ್ತಿದ್ದಾಗ, ಘಟನೆ ನಡೆದಿದ್ದು, ಷಡಾಕ್ಷರಿ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಕೆಲವರಿಗೆ ಇಷ್ಟವಾಗಿಲ್ಲ. ಈ ವಿಷಯವೇ ಈ ಎಲ್ಲಾ ಘಟನಾವಳಿಗಳಿಗೆ ಕಾರಣವಾಗಿದೆ.
ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕೃಷ್ಣೆಗೌಡರಿಗೆ ಬೆಂಬಲ ನೀಡಿದ್ದ ಲಿಂಗಾಯಿತ ಸಮುದಾಯಕ್ಕೆ ಸೇರಿದ ಜಿಲ್ಲಾ ಸರ್ಕಾರಿ ನೌಕರರ ಸಂಘದವರೊಬ್ಬರನ್ನು ಶಿಕ್ಷಕರ ಸಂಘದವರೊಬ್ಬರು ಲಿಂಗಾಯತ ಸಮುದಾಯಕ್ಕೆ ಸೇರಿದ ನೀನು ನಿಮ್ಮ ಜಾತಿಯವರಿಗೆ ಬೆಂಬಲಿಸಿದ್ದೀಯಾ ,,ಮತ ಹಾಕಿದ್ದೀಯಾ ಎಂದು ಕಾರಿನಲ್ಲಿ ಬೆಂಗಳೂರಿನಿAದ ನೆಲಮಂಗಲಕ್ಕೆ ಬರುವವರೆಗೂ ಕೆಟ್ಟ ಪದಗಳಲ್ಲಿ ನಿಂದಿಸುತ್ತಾ ಬಂದಿದ್ದಾರೆ .
ನಂತರ ಡಾಬಾದಲ್ಲಿ ಮಧ್ಯ ಸೇವನೆ ಮಾಡಿದ ನಂತರ ಪರಸ್ಪರ ಕಚ್ಚಾಡಿಕೊಂಡು ಅವ್ಯಚ್ಯ ಶಬ್ದಗಳಿಂದ ನಿಂದಿಸಿಕೊAಡು ಚಪ್ಪಲಿಗಳಿಂದ ಬಡಿದಾಡಿಕೊಂಡಿದ್ದಾರೆ. ಒಂದು ಹಂತಕ್ಕೆ ಮುಂದೆ ಹೋಗಿ ಟೇಬಲ್ ಮೇಲಿದ್ದ ಮಧ್ಯದ ಬಾಟಲನ್ನು ಒಡೆದು ಹಾಕಿ ಖಜಾಂಚಿಯ ಮೇಲೆ ಮಾರಣಾಂತಿಕ ಹಲ್ಲೆಗೆ ಮುಂದಾಗಿದ್ದಾಗ ಅಲ್ಲಿದ್ದ ಡಾಬಾದ ಕೆಲಸಗಾರರು ಮತ್ತು ಸಂಘದ ಇತರೆ ಪದಾಧಿಕಾರಿಗಳು ಬಿಡಿಸಿಕೊಂಡಿದ್ದಾರೆ ಎನ್ನಲಾಗಿದೆ.
ನಂತರ ಇವರ ವರ್ತನೆಗಳಿಂದ ಬೇಸತ್ತ ಸಂಘದ ಕೆಲವರು ಇವರ ಜೊತೆ ಮಧುಗಿರಿಗೆ ಬಾರದೆ ನೆಲಮಂಗಲ ಟೋಲ್ ನಿಂದ ಬಸ್ಸಿನಲ್ಲಿ ಮಧುಗಿರಿಗೆ ವಾಪಸ್ ಆಗಿದ್ದಾರೆ. ಈ ಎಲ್ಲಾ ಘಟನಾವಳಿಗಳು ರಾತ್ರಿ ಎಂಟರಿAದ ಎಂಟು ಒಂಬತ್ತು ರವರೆಗೆ ನಡೆದಿದೆ.
ಘಟನೆಗೆ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಅಧ್ಯಕ್ಷರು, ರಾಜ್ಯ ಪರಿಷತ್ ಸದಸ್ಯರು ಹಾಗೂ ಐಟಿಐ ಕಾಲೇಜಿನ ಉಪನ್ಯಾಸಕರೊರು ಎನ್ನಲಾಗಿದೆ.

(Visited 1 times, 1 visits today)