ತುಮಕೂರು: ಇಪಿಎಸ್-95 ಪಿಂಚಿಣಿದಾರರ ಸಮಸ್ಯೆಗಳ ಕುರಿತು ಪ್ರಧಾನಿ ಮತ್ತು ವಿತ್ತ ಸಚಿವರ ಜೊತೆ ಎರಡರೆಡು ಬಾರಿ ಚರ್ಚೆ ನಡೆಸಿದ್ದು, ಸುಪ್ರಿಂಕೋರ್ಟಿನ ಆದೇಶದಂತೆ ಕನಿಷ್ಠ 7500 ರೂ ಮಾಸಿಕ ಪಿಂಚಿಣಿ ನೀಡುವ ಭರವಸೆಯನ್ನು ನೀಡಿದ್ದಾರೆ. ಒಂದು ವೇಳೆ ಸರಕಾರ ಮಾತಿಗೆ ತಪ್ಪಿದರೆ, ದೇಶದ 78 ಲಕ್ಷ ನಿವೃತ್ತ ನೌಕರರು ತಮ್ಮ ಹಕ್ಕುಗಳಿಗಾಗಿ ಬೀದಿಗಿಳಿಯುವುದು ಅನಿವಾರ್ಯವಾಗಲಿದೆ ಎಂದು ಎನ್.ಎ.ಸಿ. ರಾಷ್ಟಿçÃಯ ಅಧ್ಯಕ್ಷರಾದ ಕಮಾಂಡರ್ ಅಶೋಕ್ ರಾವುತ್ ತಿಳಿಸಿದ್ದಾರೆ.
ನಗರದ ಕೊಲ್ಲಾಪುರದಮ್ಮ ಸಮುದಾಯ ಭವನದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ತುಮಕೂರು ವಿಭಾಗ, ನಿವೃತ್ತ ನೌಕರರ ಕ್ಷೇಮಾಭಿವೃದ್ದಿ ಟ್ರಸ್ಟ್ (ರಿ) ವತಿಯಿಂದ ನಿವೃತ್ತ ನೌಕರರ ಕ್ಷೇಮಾಭಿವೃದ್ದಿ ಟ್ರಸ್ಟ್ಗೆ ಚಾಲನೆ ನೀಡಿ ಮಾತನಾಡುತಿದ್ದ ಅವರು,ತಮ್ಮ ಜೀವಿತಾವಧಿಯನ್ನು ಜನರ ಸೇವೆಗೆ ಮುಡಿಪಾಗಿಟ್ಟಿರುವ ನಾವುಗಳು ಮಾಸಿಕ 800 ರೂಗಳಿಂದ 1800ವರೆಗೆ ಮಾತ್ರ ಪಿಂಚಿಣಿ ಪಡೆಯುತ್ತಿದ್ದು,ಇಂದಿನ ಬೆಲೆ ಹೆಚ್ಚಳದಲ್ಲಿ ಯಾವುದಕ್ಕೂ ಸಾಲದಾಗಿದೆ. ಹಾಗಾಗಿ ಸುಪ್ರಿಂಕೋರ್ಟಿನ ಆದೇಶದಂತೆ ಕನಿಷ್ಠ ಮಾಸಿಕ 7500 ರೂ ಪಿಂಚಿಣಿ ಮತ್ತು ಡಿ.ಎ. ನೀಡಬೇಕೆಂಬುದು ನಮ್ಮ ಬೇಡಿಕೆಯಾಗಿದೆ ಎಂದರು.
ನಮ್ಮ ಸೇವಾವಧಿಯಲ್ಲಿ ಪಿಂಚಿಣಿಗೋಸ್ಕರವೇ ವೇತನದಿಂದ ಕಟಾಯಿಸಿದ ಹಣದಲ್ಲಿ ನಮಗೆ ಭೀಕ್ಷೆಯ ರೀತಿ ನೀಡುತ್ತಿದ್ದಾರೆ.35 ವರ್ಷ ಸೇವೆ ಸಲ್ಲಿಸಿದ ಓರ್ವ ನೌಕರರ ಇಪಿಎಫ್ ಹಣ ಕನಿಷ್ಟವೆಂದರೂ 12 ಲಕ್ಷ ಇರುತ್ತದೆ.ಇದೇ 12 ಲಕ್ಷ ಹಣವನ್ನು ಯಾವುದಾದರೂ ಸಹಕಾರಿ ಬ್ಯಾಂಕಿನಲ್ಲಿ ಎಫ್.ಡಿ. ಮಾಡಿದರೆ ಮಾಸಿಕ 15 ಸಾವಿರ ರೂ ಬಡ್ಡಿ ಬರುತ್ತದೆ.ಅದರೆ ಸರಕಾರ ಮಾತ್ರ ನಮಗೆ 800 ರಿಂದ 1500 ರೂ ವರೆಗೆ ಪಿಂಚಿಣಿ ನೀಡುತ್ತಿದೆ.ಇದು ಅನ್ಯಾಯ ಸರಿಪಡಿಸಬೇಕು ಎಂಬುದು ನಮ್ಮ ಒಕ್ಕೊರಲ ಆಗ್ರಹವಾಗಿದೆ.
ಸರಕಾರ ಇಪಿಎಸ್-95 ನೌಕರರ ಮೇಲಿರುವ ಮಲತಾಯಿ ಧೋರಣೆಯನ್ನು ಬಿಟ್ಟು ನಮ್ಮ ಮನವಿಗೆ ಸ್ಪಂದಿಸಬೇಕು ಎಂದು ಕಮಾಂಡರ್ ಅಶೋಕ್ ರಾವತ್ ತಿಳಿಸಿದರು. ಎನ್.ಎ.ಸಿ.ಯ ಮಹಿಳಾ ಘಟಕದ ಅಧ್ಯಕ್ಷೆ ಶೋಬಾ ಅರಸ್,ಮುಖಂಡರಾದ ಸರೀತಾ ನಾರ್ಕೇಡ್, ಕಾನೂನು ಉಪಸ್ಥಿತರಿದ್ದರು.
(Visited 1 times, 1 visits today)