ತುಮಕೂರು: ರಾಜ್ಯ ಸರ್ಕಾರಿ ನಿವೃತ್ತ ನೌಕರರು ಆರೋಗ್ಯ ಕಾಪಾಡಿಕೊಂಡು ಸಾಮಾಜಿಕ ಚಟಿವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಸಂಘದ ಜಿಲ್ಲಾ ಶಾಖೆಯ ಕಟ್ಟಡ ನಿರ್ಮಾಣಕ್ಕೆ ಅಗತ್ಯ ನಿವೇಶನ, ಅನುದಾನ ಪಡೆಯಲು ಜಿಲ್ಲಾ ಸಚಿವ ಡಾ.ಪರಮೇಶ್ವರ್ ಹಾಗೂ ಕೇಂದ್ರ ಸಚಿವ ವಿ.ಸೋಮಣ್ಣ ಅವರ ಬಳಿಗೆ ನಿಯೋಗ ತೆರಳಿ ಅನುಕೂಲ ಪಡೆಯಬೇಕು, ನಿಮ್ಮ ನಿಯೋಗಕ್ಕೆ ತಾವೂ ಕೈ ಜೋಡಿಸುವುದಾಗಿ ಕೌಶಲ್ಯಾಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರಳಿಧರ ಹಾಲಪ್ಪ ಹೇಳಿದರು.
ನಗರದ ಬಾಲಭವನದಲ್ಲಿ ಮಂಗಳವಾರ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಜಿಲ್ಲಾ ಶಾಖೆ ಹಮ್ಮಿಕೊಂಡಿದ್ದ ನಿವೃತ್ತ ನೌಕರರ ದಿನಾಚರಣೆ ಹಾಗೂ ಹಿರಿಯ ಚೇತನಗಳಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸಾಕಷ್ಟು ಕಾರ್ಖಾನೆಗಳು ಇವೆ, ಅವುಗಳ ಸಿಎಸ್‌ಆರ್ ಫಂಡ್ ಅನ್ನು ಕೇಳಿ ಪಡೆದು ಬಳಕೆ ಮಾಡಿಕೊಳ್ಳಿ ಎಂದು ಸಲಹೆ ಮಾಡಿದರು.
ಹಲವು ವರ್ಷ ಕಾಲ ಸರ್ಕಾರಿ ಸೇವೆ ಸಲ್ಲಿಸಿ ಅನುಭವ, ಆಡಳಿತ ಸಾಮರ್ಥ್ಯ ಹೊಂದಿರುವ ನಿವೃತ್ತ ನೌಕರರನ್ನು ಜಿಲ್ಲಾಡಳಿತದ ವಿವಿಧ ಸಮಿತಿಗಳಿಗೆ ನೇಮಕ ಮಾಡುವಂತೆ ಮನವಿ ಮಾಡಿ, ನಿವೃತ್ತ ನೌಕರರ ಸಲಹೆ ಮಾರ್ಗದರ್ಶನ ಬಳಿಸಿಕೊಳ್ಳುವ ಜೊತೆಗೆ ನಿವೃತ್ರನ್ನು ಕ್ರಿಯಾಶೀಲಗೊಳಿಸುವ ಜೊತೆಗೆ ಅವರು ಸಾಮಾಜಿಕ ಸೇವೆಯಲ್ಲಿ ತೊಡಗಿಕೊಳ್ಳಲು ಸಹಾಯವಾಗುತ್ತದೆ ಎಂದು ಜಿಲ್ಲಾ ಶಾಖೆ ಮುಖಂಡರಿಗೆ ತಿಳಿಸಿದರು.ಅಪರ ಜಿಲ್ಲಾಧಿಕಾರಿ ಡಾ.ತಿಪ್ಪೇಸ್ವಾಮಿ ಮಾತನಾಡಿದರು. ನಿವೃತ್ತ ನೌಕರರು ಸರ್ಕಾನಿವೃತ್ತ ಇಂಜಿನಿಯರ್ ಬಿ.ಆರ್.ನಟರಾಜಶೆಟ್ಟಿ, ಸಂಘದ ಉಪಾಧ್ಯಕ್ಷ ಎನ್.ಜಿ.ಚನ್ನರಾಯಪ್ಪ, ಸಂಘಟನಾ ಕಾರ್ಯದರ್ಶಿಗಳಾದ ಅನಂತರಾಜು, ಮಂಜುಳಾದೇವಿ, ಹೆಚ್.ಪ್ರಕಾಶ್, ಜಂಟಿ ಕಾರ್ಯದರ್ಶಿಗಳಾದ ಹೆಚ್.ಶಂಕರಪ್ಪ, ಎಂ.ಎಸ್.ರವೀAದ್ರನಾಥ್, ಅಲ್ಲದೆ ವಿವಿಧ ತಾಲ್ಲೂಕು ಸಂಘಗಳ ಅಧ್ಯಕ್ಷರಾದ ವೆಂಕಟಾಚಲಶೆಟ್ಟಿ, ಆರ್.ಬಿ.ಜಯಣ್ಣ, ಜಿ.ಟಿ.ಶಂಕರೇಗೌಡ, ಡಿ.ಎಸ್.ಸಿದ್ದಪ್ಪ, ಶಿವಯ್ಯ, ಮೈಲಪ್ಪ, ಪ್ರೊ.ಕೆ.ಹನುಮಂತರಾಯಪ್ಪ, ಭಾಗವಹಿಸಿದ್ದರು.

(Visited 1 times, 1 visits today)