ತುಮಕೂರು: ಹಿರಿಯ ಅಂತರರಾಷ್ಟಿçÃಯ ಅಥ್ಲೇಟಿಕ ಕ್ರೀಡಾಪಟು ಟಿ.ಕೆ.ಆನಂದ ಅವರ 77ನೇ ಹುಟ್ಟು ಹಬ್ಬದ ಅಂಗವಾಗಿ ಇಂದು ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಸನ್ಮಾನ ಮತ್ತು ದಾರಿ ದೀಪ ಚಾರಿಟಬಲ್ ಟ್ರಸ್ಟ್ಗೆ ಸಹಕಾರ ನೀಡಿದ ಹಿರಿಯರನ್ನು ಗೌರವಿಸುವ ಕಾರ್ಯಕ್ರಮ ಮುಂಜಾನೆ ಗೆಳೆಯರ ಬಳಗದಿಂದ ಹಮ್ಮಿಕೊಳ್ಳಲಾಗಿತ್ತು.
ಪ್ರೌಢಶಾಲಾ ವಿಧ್ಯಾರ್ಥಿಯಾಗಿದ್ದ ದಿನದಿಂದಲೂ ಕ್ರೀಡೆಯಲ್ಲಿ ಆಸಕ್ತಿ ಬೆಳೆಸಿಕೊಂಡು ಹಲವಾರು ರಾಜ್ಯ, ರಾಷ್ಟç ಮತ್ತು ಅಂತರರಾಷ್ಟಿçÃಯ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡು ಪದಕಗಳ ಪಡೆದಿರುವ ಟಿ.ಕೆ. ಆನಂದ, ತಮ್ಮಂತೆಯೇ ಕ್ರೀಡೆ, ಸಾಹಿತ್ಯ, ಸಹಕಾರ, ಸಮಾಜ ಸೇವೆಯಲ್ಲಿ ಸಾಧನೆ ಮಾಡಿದ ಹಿರಿಯ, ಕಿರಿಯ ಕ್ರೀಡಾಪಟುಗಳನ್ನು ಗುರುತಿಸಿ, ಪ್ರೋತ್ಸಾಹಿಸುತ್ತಾ, ಕ್ರೀಡಾ ವಾತಾರಣ ಸೃಷ್ಟಿಸಿ, ಹಲವರ ಸಾಧನೆಗೆ ಸ್ಪೂರ್ತಿ ನೀಡಿದ್ದಾರೆ. ಇಂತಹ ವ್ಯಕ್ತಿಯ 77ನೇ ಜನ್ಮ ದಿನವನ್ನು ಸಮಾಜದ ಎಲ್ಲ ವರ್ಗದವರು ಸೇರಿ ಆಚರಿಸುವ ಮೂಲಕ ಮತ್ತಷ್ಟು ಸ್ಪೂರ್ತಿದಾಯಕ ಕೆಲಸಗಳನ್ನು ಉತ್ತೇಜನ ನೀಡಿದರು.
ಹಿರಿಯ ಕ್ರೀಡಾಪಟು ಟಿ.ಕೆ.ಆನಂದ್ ಅವರನ್ನು ಅಭಿನಂದಿಸಿ ಮಾತನಾಡಿದ ಕನ್ನಡ ಸೇನೆಯ ಜಿಲ್ಲಾಧ್ಯಕ್ಷ ಧನಿಯಕುಮಾರ್,ವಿದ್ಯಾರ್ಥಿ ದಿಸೆಯಿಂದಲೂ ಇಂದಿನ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ಅವರ ಒಡನಾಡಿಯಾಗಿ, ಅವರ ಕ್ರೀಡಾ ಸಾಧನೆಯ ಜೊತೆ ಜೊತೆಗೆ, ತಾವು ಸಹ ಕ್ರೀಡೆಯಲ್ಲಿ ರಾಜ್ಯ, ರಾಷ್ಟಿçÃಯ ಮತ್ತು ಅಂತರರಾಷ್ಟಿçಯ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡು ಪದಕಗಳನ್ನು ಪಡೆದಿದ್ದಾರೆ. ತಮ್ಮ 76ನೇ ವಯಸ್ಸಿನಲ್ಲಿ ಯುವಕರನ್ನು ನಾಚಿಸುವಂತೆ ಪ್ರತಿದಿನವೂ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ನಿರಂತರ ಅಭ್ಯಾಸದಲ್ಲಿ ತೊಡಗಿ, ಇತರರನ್ನು ದೈಹಿಕ ಚಟುವಟಿಕೆಯಲ್ಲಿ ತೊಡಗುವಂತೆ ಮಾಡಿದ್ದಾರೆ ಎಂದರು.
ವಿದ್ಯಾವಾಹಿನಿಯ ಪ್ರದೀಪಕುಮಾರ್ ಮಾತನಾಡಿ,ನಗರದಲ್ಲಿ ಪಿಟ್ನೇಸ್ ಎಂದರೆ ಆನಂದ್, ನಮಗೆಲ್ಲರಿಗೂ ಪಿಟ್ನೆಸ್ ಮಾರ್ಗದರ್ಶಕರು, ಬೆಳಗಿನ ಹೊತ್ತು ಭೇಟಿಯಾದ ಟಿ.ಕೆ.ಆನಂದ ಅವರು ಕೇಳುವ ಮೊದಲ ಪ್ರಶ್ನಯೇ ವಾಕ್ ಮಾಡಿದರಾ ?, ಅವರ ಆರೋಗ್ಯದ ಜೊತೆಗೆ, ನಮ್ಮೆಲ್ಲರ ಆರೋಗ್ಯದ ಬಗ್ಗೆ ಅವರಿಗೆ ಕಾಳಜಿ ಇದೆ.ಅಲ್ಲದೆ ಜಯತೇಷ್ಣ ರಂತಹ ಕಿರಿಯ ಆಟಗಾರರ ಸಾಧನೆಯನ್ನು ಗುರುತಿಸಿ, ಅವರನ್ನು ಅಭಿನಂದಿಸುವ ಮೂಲಕ ಇತರರ ಕ್ರೀಡಾಪಟುಗಳ ಸಾಧನೆಗೆ ಸ್ಪೂರ್ತಿ ನೀಡಿದ್ದಾರೆ ಎಂದರು. ಚೆಸ್ ಅಕಾಡೆಮಿಯ ರಾಜ್ಯಾಧ್ಯಕ್ಷ ಟಿ.ಎನ್.ಮಧುಕರ್ ಮಾತನಾಡಿದರು. ಕೌಶಲ್ಯಾಭಿವೃದ್ದಿ ಮಂಡಳಿ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ ಮಾತನಾಡಿ,ನಿಜವಾದ ಕ್ರೀಡಾಸ್ಪೂರ್ತಿ ಇರುವ ವ್ಯಕ್ತಿ ಎಂದರೆ ಟಿ.ಕೆ.ಆನಂದ, ತಮ್ಮಂತೆ ರಾಜ್ಯ ಮತ್ತು ರಾಷ್ಟçಮಟ್ಟದ ಕ್ರೀಡಾಕೂಟಗಳಲ್ಲಿ ಮೆಡಲ್ ಗಳಿಸಿದವರನ್ನು ಗೌರವಿಸಿ, ಅವರಿಗೆ ಉತ್ತೇಜನ ನೀಡುತ್ತಿದ್ದಾರೆ ಎಂದರು. ಈ ವೇಳೆ ಆಂಧರ ಬಾಳಿಗೆ ಬೆಳಕಾಗಿರುವ ದಾರಿದೀಪ ಚಾರಿಟಬಲ್ ಟ್ರಸ್ಟ್ನ ಸ್ವಂತ ಕಟ್ಟಡ ಹೊಂದುವ ಕನಸಿನ ಸಹಾಯ ಹಸ್ತ ಚಾಚಿ 1 ಲಕ್ಷ ರೂ ನೀಡಿದ ವೆಂಕಟಸ್ವಾಮಿ ಅವರನ್ನು ಅಭಿನಂದಿಸಲಾಯಿತು. ವಿವಿಧ ಕ್ಷೇತ್ರಗಳ ಗಣ್ಯರು ಟಿ.ಕೆ.ಆನಂದ ಅವರ ಹುಟ್ಟ ಹಬ್ಬಕ್ಕೆ ಶುಭ ಕೋರಿದರು.
(Visited 1 times, 1 visits today)