ತುಮಕೂರು: ಅಮರ ಶಿಲ್ಪಿ ಜಕಣಾಚಾರಿ ಅವರು ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ವಿಶೇಷವಾದ ಕೌಶಲ್ಯವನ್ನು ತಮ್ಮ ಪ್ರತಿಭೆ ಮೂಲಕ ತೋರಿಸಿದ್ದಾರೆ. ಇಂದಿನ ಯುವ ಶಿಲ್ಪಿಗಳಿಗೆ ಅಮರಶಿಲ್ಪಿ ಜಕಣಾಚಾರಿ ಸ್ಫೂರ್ತಿಯಾಗಿದ್ದಾರೆ ಎಂದು ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್. ಸಿದ್ದಲಿಂಗಪ್ಪ ಹೇಳಿದರು.
ನಗರದ ಕನ್ನಡ ಮತ್ತು ಸಂಸ್ಕöÈತಿ ಇಲಾಖೆ ಕಚೇರಿ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕöÈತಿ ಇಲಾಖೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಜಿಲ್ಲಾ ವಿಶ್ವ ಕರ್ಮ ಸೇವಾ ಸಮಿತಿ ಸಹಯೋಗದಲ್ಲಿ ಅತ್ಯಂತ ಸರಳವಾಗಿ ಏರ್ಪಡಿಸಿದ್ದ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆಯಲ್ಲಿ ಅಮರಶಿಲ್ಪಿ ಜಕಣಾಚಾರಿ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಮರ್ಪಿಸಿ ಅವರು ಮಾತನಾಡಿದರು.
ಶಿಲ್ಪಿಗಳು ದೇಶದ ನಾಗರಿಕತೆಯ ರಾಯಭಾರಿಗಳು. ಶಿಲ್ಪಿಗಳು ಲೋಹದ ಜತೆ, ಮರಗಳ ಜತೆ, ಪ್ರಕೃತಿ ಜತೆ, ಭವಿಷ್ಯಕ್ಕೆ ಬೇಕಾಗಿರುವ ಕುರುಹುಗಳನ್ನು ಬಿಟ್ಟು ಹೋಗುವಂತಹ ಕೆಲಸ ಮಾಡಿ ಸಂಸ್ಕöÈತಿ, ಕಲೆಯನ್ನು ಜೀವಂತವಾಗಿಡುವ ಕೆಲಸವನ್ನು ಮಾಡುತ್ತಾರೆ ಎಂದರು.
ತುಮಕೂರು ಜಿಲ್ಲೆಯಲ್ಲಿ ಅನೇಕ ವರ್ಷಗಳಿಂದ ಕೈದಾಳವನ್ನು ಅಮರಶಿಲ್ಪಿ ಜಕಣಾಚಾರಿಗಳ ಪ್ರವಾಸಿ ತಾಣವಾಗಿಸಬೇಕು ಹಾಗೂ ನಾಡಿನ ಆಕರ್ಷಕ ಕೇಂದ್ರವಾಗಿಸಬೇಕು ಎಂಬ ಬೇಡಿಕೆ ಇದೆ. ಆದರೆ ಈ ಬೇಡಿಕೆ ಇದುವರೆಗೂ ಈಡೇರಿಲ್ಲ. 2025ರ ನೂತನ ವರ್ಷದಲ್ಲಾದರೂ ಈ ಕನಸು ನನಸಾಗಲಿ ಎಂದು ಆಶಿಸಿದರು.
ಶಿಲ್ಪಿಗಳ ಪ್ರತಿಭೆ ಜಗತ್ತಿಗೆ ಗೊತ್ತಾಗಬೇಕಾದರೆ ಕೌಶಲ್ಯ ಬಹಳ ಮುಖ್ಯ. ಪ್ರಸ್ತುತ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೌಶಲ್ಯ ಜ್ಞಾನವನ್ನು ಯುವಕರಿಗೆ ಹೆಚ್ಚು ಹೆಚ್ಚು ಬೋಧನೆ ಮಾಡುವ ಮೂಲಕ ವಿದ್ಯಾವಂತರನ್ನಾಗಿಸಲು ಮುಂದಾಗಿದೆ. ಶಿಲ್ಪಿಗಳ ಶ್ರಮವನ್ನು, ಕೌಶಲ್ಯವನ್ನು ಗೌರವಿಸುವ ದಿನವನ್ನಾಗಿ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನವನ್ನು ಆಚರಿಸೋಣ ಎಂದರು.
ಚಿನ್ನ-ಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷ ರವಿಕುಮಾರ್ ಆನಂದರಾಮ್ ಟಿ.ಎ. ಮಾತನಾಡಿ, ತುಮಕೂರಿನಲ್ಲಿ ಶಿಲ್ಪಕಲಾ ಕೇಂದ್ರವನ್ನು ಸ್ಥಾಪಿಸಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕöÈತಿ ಇಲಾಖೆಯ ಮೇಲ್ವಿಚಾರಕರಾದ ಸುರೇಶ್‌ಕುಮಾರ್, ವಿಶ್ವಕರ್ಮ ನಿಗಮದ ಸದಸ್ಯ ಡಮರುಗೇಶ್, ಚಿನ್ನ-ಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷ ರವಿ ಆನಂದರಾಮ್ ಟಿ.ಎ., ಗೌರವಾಧ್ಯಕ್ಷ ಎನ್.ಎಸ್. ರವಿಕುಮಾರ್, ವೆಂಕಟೇಶಾಚಾರ್, ಚಂದ್ರಶೇಖರ್, ಹರೀಶಾಚಾರ್ಯ, ಉಪಸ್ಥಿತರಿದ್ದರು.
(Visited 1 times, 1 visits today)