ಚಿಕ್ಕನಾಯಕನಹಳ್ಳಿ: ಬರಶಿಡ್ಲಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯ ವ್ಯಾಪ್ತಿಯಲ್ಲಿ ಎಂಟು ಹಳ್ಳಿಯಿಂದ 710 ಕುಟುಂಬಗಳು ಒಂದಿದ್ದು ಸಂಘದ ಮೂಲಕ 272 ಕೇವಲ ಷೇರುದಾರರನ್ನು ಹೊಂದಿದ್ದರು 2024 ಹಾಗೂ 25ರ ಚುನಾವಣೆಗೆ ಸಾಲ ಪಡೆದಿರುವ ಕ್ಷೇತ್ರದಿಂದ 188 ಮಂದಿ ಸಾಲ ಪಡೆಯದವರ ಕ್ಷೇತ್ರದಿಂದ ಕೇವಲ 14 ಮಂದಿ ಉಳಿದ 70 ಮಂದಿಯ ಷೇರುಗಳು ಉದ್ದೇಶಪೂರ್ವಕವಾಗಿ ಮತದಾರರ ಪಟ್ಟಿಯಿಂದ ಕೈಬಿಟ್ಟಿದ್ದಾರೆ ಎಂದು ಹಾಗೂ ಅವರ ಸಂವಿಧಾನಿಹಕ್ಕನ್ನು ಮಟಗುಗೊಳಿಸಿದ್ದಾರೆ ಎಂದು ಬರ್ಶಿಡ್ಲಳ್ಳಿ ಗ್ರಾಮದ ಸಂಘದ ಉಪಾಧ್ಯಕ್ಷರಾದ ನಟರಾಜು ಹಾಗೂ ನಿರ್ದೇಶಕರಾದ ಉಮೇಶ್ ಮಾಜಿ ನಿರ್ದೇಶಕ ರಾಜಶೇಖರ್ ಇವರುಗಳು ಆರೋಪಿಸಿದ್ದರು. ಬರಶಿಡ್ಲಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಷೇರ್ ಲೆಡ್ಜರ್ ಪುಸ್ತಕದ ಪುಟ ಸಂಖ್ಯೆ 10 ಹಾಗೂ 7 ರ ಲೆಡ್ಜರ್ ಪುಸ್ತಕದಲ್ಲಿ ಸಭಾ ನಡಾವಳಿಗಳಲ್ಲಾಗಲಿ ಆಡಿಟ್ ವರದಿಯಲ್ಲಾಗಲಿ ಹೆಸರಿಲ್ಲದವರನ್ನ ಷೇರುದಾರರಿಗೆ ಮಾಡಿಕೊಂಡು ಅಲ್ಲದೆ ಕೇವಲ 100 ರೂಪಾಯಿ ಷೇರು ಹೊಂದಿರುವ ಸುಮಾರು 65 ಮಂದಿಗೂ ಹೆಚ್ಚಿದ್ದು ಲಕ್ಷ್ಮಿ ನಾಗರಾಜು ಕೋಟಿಗಲ್ಲು ಮಂಜಮ್ಮ ಕುಮಾರ್ ಗಂಗಯ್ಯ ಸೇರಿದಂತೆ ಜೀಪಂನ ಮಾಜಿ ಸದಸ್ಯ ಲೋಹಿತ ಬಾಯಿ ಹಾಗೂ ಕಮಲಮ್ಮ ರಾಜಕುಮಾರ್ ಇವರುಗಳು ಸಾಲ ಪಡೆಯದಿದ್ದರೂ ಸಾಲಗಾರರ ಪಟ್ಟಿಯಲ್ಲಿರುವುದು ಈ ಸಹಕಾರ ಸಂಘದ ಭ್ರಷ್ಟಾಚಾರದ ಕೂಪದ ಕೈಗನ್ನಡಿಯಾಗಿದೆ. ಸಹಕಾರ ಸಂಘದ ಮೂಲಕ ಗುಂಪು ಸಾಲ ನೀಡಿ ಗುಂಪುಗಳ ಅಭಿವೃದ್ಧಿಗೆ ಪ್ರೋತ್ಸಾಹಿಸಬೇಕಾದ ಸಹಕಾರ ಸಂಘ ಕೇವಲ 6 ಸಂಘಗಳಿಗೆ 1421505 ರೂಗಳಷ್ಟು ಸಾಲ ನೀಡಿದ್ದು ಯಾವುದೇ ಗುಂಪುಗಳು ಸಕ್ರಿಯ ಕಾರ್ಯ ಚಟುವಟಿಕೆಯಲ್ಲಿ ಇರುವುದು ದಾಖಲೆ ಮೂಲಕ ಕಂಡುಬAದಿಲ್ಲ ಈ ಸಂಘಗಳು ಅಸ್ತಿತ್ವದಲ್ಲಿವೆ ಇಲ್ಲವೇ ಎಂಬುದು ತನಿಖೆಯಿಂದ ಮಾತ್ರ ಸತ್ಯ ಹೊರಬೀಳಲಿದೆ ಎಂದರು. ರೈತರಿಗೆ ನೀಡುವ ಬೆಳೆ ಸಾಲ 2022 ರಲ್ಲಿ 117 ಸದಸ್ಯರಿಗೆ 53 ಲಕ್ಷ 15 ಸಾವಿರ ಮಾತ್ರ ಸಾಲ ನೀಡಿದ್ದು ಒಂದೇ ಕುಟುಂಬದವರಾದ ಎಸ್ ಆರ್ ರಾಜಕುಮಾರ್ ಎಸ್ ಆರ್ ರಂಗಸ್ವಾಮಿ ಎಸ್ಸಾರ್ ತೊರೆಯಪ್ಪ ಇವರುಗಳು
ತಲಾ ಮೂರು ಲಕ್ಷದಂತೆ ಒಟ್ಟಿಗೆ ಒಂಬತ್ತು ಲಕ್ಷ ಸಾಲ ಪಡೆದಿದ್ದರೂ ಸಹಕಾರಿ ಕಾಯ್ದೆ ಪ್ರಕಾರ ಅಡಿಷನಲ್ ಷೇರು ಶೇಕಡ 10 ರಷ್ಟು ಸಹಕಾರಿ ಸಂಘದಲ್ಲಿ ನಿಶ್ಚಿತ ಠೇವಣಿಯಾಗಿರಬೇಕು ಈ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ 90,000 ಅಡಿಷನಲ್ ಷೇರ್ ಬದಲಾಗಿ ಕೇವಲ ಒಂಬತ್ತು ಸಾವಿರ ಮಾತ್ರ ಅಡಿಷನಲ್ ಷೇರ್ ಇಟ್ಟಿದ್ದು ಇದೇ ಸಿಂಗದಳ್ಳಿ ಗ್ರಾಮದ ದೊಡ್ಡಮ್ಮ ಎಂಬವರಿಗೆ ಎರಡು ಲಕ್ಷ ಸಾಲ ನೀಡಿದ್ದು ಅವರ ಅಡಿಷನಲ್ ಷೇರನ್ನು 20 ಸಾವಿರಕ್ಕೆ ನಿಗದಿಗೊಳಿಸಿ ಸಹಕಾರ ಸಂಘದಲ್ಲಿ ನಿಶ್ಚಿತ ಠೇವಣಿಯಾಗಿ ಇರಿಸಿಕೊಂಡಿದ್ದಾರೆ ಸಾಮಾನ್ಯರಿಗೊಂದು ನ್ಯಾಯ ಅಧ್ಯಕ್ಷರಿಗೊಂದು ನ್ಯಾಯ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡದೆ ಇರದು. ಮರಣ ಹೊಂದಿರುವ ಮೂರು ಮಂದಿಗೆ 1,55, 000ಗಳು ಬೆಳೆ ಸಾಲ ಸುಸ್ತಿಯಾಗಿದ್ದರೂ ಅವರಿಗೆ ಯಾವುದೇ ಕಾನೂನು ರೀತಿಯನೋಟಿಸ್ ನೀಡಿರುವುದಿಲ್ಲ ಸದರಿ ಅಧ್ಯಕ್ಷರಾಗಿರುವ ಸಿಂಗ್ದಳ್ಳಿ ರಾಜಕುಮಾರ್ ಅವರು ಪಡೆದಿದ್ದ ಒಂದು ಲಕ್ಷ ರೂಪಾಯಿ ಸಾಲ ಪಡೆದಿದ್ದು ಸುಮಾರು ನಾಲ್ಕೈದು ವರ್ಷಗಳಿಂದ ಸುಸ್ತಿದಾರರಾಗಿದ್ದರು ಸದರಿ ಸಹಕಾರಿ ಸಂಘದಲ್ಲಿ ತನ್ನ ಅಧಿಕಾರ ದುರ್ಬಳಕೆ ಮಾಡಿಕೊಂಡು ಹೆಚ್ಚುವರಿಯಾಗಿ ಮೂರು ಲಕ್ಷ ಮತ್ತು ತಮ್ಮ ಸಂಬAಧಿಕರಿಗೆ ತಲಾ ಮೂರು ಮೂರು ಲಕ್ಷ ಸುಮಾರು ನಾಲ್ಕೈದು ಜನರಿಗೆ ಮತ್ತು ಅಡಿಕೆ ಅಡಮಾನ ಸಾಲ ಸುಮಾರು 34 ಲಕ್ಷಕ್ಕಿಂತ ಹೆಚ್ಚು ಹಣವನ್ನು ತನ್ನ ಅಧಿಕಾರ ದುರ್ಬಳಕೆ ಮತ್ತು ದುರಾಸೆಯಿಂದ ಪಡೆದುಕೊಂಡಿದ್ದು ಕಾನೂನು ರೀತಿಯಲ್ಲಿ ಸಂಪೂರ್ಣವಾಗಿ ವಿಫಲರಾಗಿರುತ್ತಾರೆ ಎಂದು ತಿಳಿದುಬಂದರೋ ಈ ಬಾರಿ ಚುನಾವಣೆಗೆ ಸ್ಪರ್ಧಿಸಲು ಯಾವುದೇ ಅರ್ಹತೆ ಇಲ್ಲದೆ ಹೋದವರು ಸರ್ಕಾರಿ ಅಧಿಕಾರಿಗಳ ಕುಮ್ಮಕ್ಕಿನಿಂದಾಗಿ ಮತ್ತು ಅವರ ಸಹಕಾರದೊಂದಿಗೆ ಸಹಕಾರಿ ಕ್ಷೇತ್ರದ ಹಗಲು ದರೋಡೆ ಮಾಡುವ ದುರುದ್ದೇಶ ಮತ್ತು ಚಿಕ್ಕನಾಯಕನಹಳ್ಳಿ ತಾಲೂಕು ಸಹಕಾರಿ ಕ್ಷೇತ್ರವನ್ನು ಸಂಪೂರ್ಣವಾಗಿ ಧ್ವಂಸಗೊಳಿಸಲು ದುಷ್ಟ ಆಲೋಚನೆಗಳೊಂದಿಗೆ ಮುನ್ನಡೆಯುತ್ತಿದ್ದಾರೆ ಆದರೆ ಸದರಿಯಲ್ಲಿ ಕಾನೂನಾತ್ಮಕ ಅಂಶಗಳು ತಾಲೂಕು ಹಾಗೂ ಜಿಲ್ಲಾ ನಿಬಂಧಕರುಗಳಿಗೆ ಸಂಪೂರ್ಣವಾಗಿ ತಿಳಿದಿದ್ದರೂ ಯಾವುದೋ ಕಾಣದ ಕೈಗಳ ಕೈವಾಡದಿಂದ ರಾಜಕುಮಾರ ಅವರ ರಕ್ಷಣೆ ಮಾಡುತ್ತಿರುವುದು ತಾಲೂಕಿನಾದ್ಯಂತ ಮಾಧ್ಯಮಗಳು ಹಾಗೂ ದಾಖಲಾತಿ ಮೂಲಕ ಜಗಜ್ಜಯಿರ ವಾಗಿರುತ್ತದೆ. ಸದರಿ ಸಹಕಾರ ಸಂಘದ ಬೈಲಾ ನಿಬಂಧನೆಯಲ್ಲಿ ಒಂದು ಕುಟುಂಬಕ್ಕೆ 20 ಲಕ್ಷ ರೂಗಳನ್ನು ಮೀರದಂತೆ ಯಾವುದೇ ಸಾಲ ಪಡೆಯಲು ಕಾನೂನಾತ್ಮಕವಾಗಿ ಅಧಿಕಾರ ಇಲ್ಲದಿದ್ದರೂ ತಾನು ಡಿ ಸಿ ಸಿ ಬ್ಯಾಂಕ್ ನಿರ್ದೇಶಕನಾಗಿರುವ ಅಧಿಕಾರವನ್ನು ಸಂಪೂರ್ಣವಾಗಿ ದುರುಪಯೋಗಪಡಿಸಿಕೊಂಡು ಸುಮಾರು 45 ಲಕ್ಷಕ್ಕೂ ಅಧಿಕ ಅವರ ಕುಟುಂಬದ ವರಿಗೆ ಸಾಲದ ಮೂಲಕ ಹಣ ಪಡೆದು ಸರ್ಕಾರದ ಸಹಕಾರಿ ಸಂಘದ ಸಂಪೂರ್ಣ ದುರ್ಬಳಕೆ ಆಗಿರುವುದು ದಾಖಲಾತಿ ಮೂಲಕ ದೃಢೀಕರಿಸಲ್ಪಟ್ಟಿದೆ. ಸದರಿ ಸಂಘದಲ್ಲಿ ಚುನಾವಣೆಗೆ ಮುಂಚಿತವಾಗಿ ಮತದಾರ ಪಟ್ಟಿ ತಯಾರಿಸಲು ಷಡ್ಯಂತರ ರೂಪಿಸಿ ತಲಾ ನೂರು ರೂಪಾಯಿ ಸಾಲಗಾರರಲ್ಲದ ಕ್ಷೇತ್ರದಿಂದ ಷೇರುದಾರರ 4 ಜನರನ್ನು ಮತ್ತು ಯಾವುದೇ ಷೇರು ಹಾಗೂ ನೋಂದಣಿ ವ್ಯವಹಾರ ಇತ್ಯಾದಿಗಳು ಇಲ್ಲದೆ ಇರುವಂತಹ 10 ಜನರ ಮತದಾರರ ಪಟ್ಟಿಗೆ ಮೋಸಗೊಳಿಸುವ ದುರುದ್ದೇಶದಿಂದ ಪೂರ್ವ ನಿಯೋಜಿತವಾಗಿ ಮತದಾರರ ಪಟ್ಟಿಯನ್ನು ತಯಾರಿಸಿದ್ದು ಅದಕ್ಕೆ ಸಹಕಾರಿ ಅಭಿವೃದ್ಧಿ ಅಧಿಕ್ಕಾರಿ ಆದಂತ ಶ್ರೀನಿವಾಸ್ ಶಿಫಾರಸ್ಸಿನ ಮೇರೆಗೆ ಜಿಲ್ಲಾ ಸಹಕಾರ ಸಂಘಗಳ ನಿಬಂಧಕರು ಯಾವುದೇ ಚಕಾರ ಮತ್ತು ಆಕ್ಷೇಪಣೆ ಮಾಡದೆ ಕಾಣದ ಕೈಗಳ ಕುಮ್ಮಕ್ಕಿನಿಂದ ಮತ್ತು ಹಣದ ಅಮಲಿನಿಂದ ಸದರಿ ಮತದಾರ ಪಟ್ಟಿಯನ್ನ ತಯಾರಿಸಿ ಸಂಘದ ಮೂಲ ಬೈಲಾ ಮತ್ತು ಸಹಕಾರಿ ನಿಯಮಗಳನ್ನು ಗಾಳಿಗೆ ತೂರಿ ಯಾವುದೇ ಅಂಕುಶವಿಲ್ಲದೆ ಸಹಕಾರಿ ಸಂಘವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಮತ್ತು ಸರ್ಕಾರದ ಯೋಜನೆಗಳ ಅಡ್ಡಿಪಡಿಸುವ ಉದ್ದೇಶಕ್ಕಾಗಿ ಮತ್ತು ತನ್ನ ವೈಯಕ್ತಿಕ ಲಾಭದ ಆಮಿಷಕ್ಕಾಗಿ ಅನುಮೋದನೆ ನೀಡಿರುತ್ತಾರೆ.

(Visited 1 times, 1 visits today)