ತುಮಕೂರು: ರಾಜ್ಯದಲ್ಲಿ ಶೇಕಡ 33ರಷ್ಟು ನಿರ್ಣಾಯಕ ಸಂಖ್ಯೆಯಲ್ಲಿರುವ ಹಿಂದುಳಿದ ವರ್ಗದ ಸಮಾಜದವರು ಸಂಘಟಿತರಾಗದ ಕಾರಣ ರಾಜಕೀಯ, ಸಾಮಾಜಿಕ ಶಕ್ತಿ ಇಲ್ಲದಂತಾಗಿದೆ. ಇನ್ನುಮುಂದೆ ಹಿಂದುಳಿದ ವರ್ಗದವರು ಒಗ್ಗಟ್ಟಾಗಿ ತಮ್ಮ ಪಾಲು ಕೇಳುವಷ್ಟು ಶಕ್ತಿ ಬೆಳೆಸಿಕೊಳ್ಳಬೇಕು ಎಂದು ಬಿಜೆಪಿ ನಾಯಕ, ತಿರುಪತಿ ತಿರುಮಲ ದೇವಸ್ಥಾನ ಟ್ರಸ್ಟ್ನ ನಿರ್ದೇಶಕ ಎನ್.ನರೇಶ್‌ಕುಮಾರ್ ಹೇಳಿದರು.
ಬಿಜೆಪಿ ಹಿಂದುಳಿದ ಮೋರ್ಚಾ ನಾಯಕ ಸ್ಪೂರ್ತಿ ಚಿದಾನಂದ ಆವರ ನಗರದ ನಿವಾಸಕ್ಕೆ ಆಗಮಿಸಿದ ಸಂದರ್ಭದಲ್ಲಿ ಅಭಿನಂದನೆ ಸ್ವೀಕರಿಸಿ ಸ್ಥಳಿಯ ಮುಂಡರರೊAದಿಗೆ ಮಾತನಾಡಿದ ಅವರು, ಹಿಂದುಳಿದ ವರ್ಗಗಳಿಗೆ ಹಲವು ವರ್ಷಗಳಿಂದ ಅವಕಾಶ ವಂಚಿತರಾಗುತ್ತಲೇ ಬಂದಿದ್ದಾರೆ. ಹಿಂದುಳಿದ ವರ್ಗಗಳ ಸಣ್ಣಪುಟ್ಟ ಸಮಾಜಗಳು ಒಂದುಗೂಡಬೇಕು. ರಾಜಕೀಯ ಸಮಾವೇಶ ಮಾಡಿ ರಾಜಕೀಯ ಪಕ್ಷಗಳ ರಾಜ್ಯ, ರಾಷ್ಟಿçÃಯ ನಾಯಕರಿಗೆ ತಮ್ಮ ಶಕ್ತಿ ತೋರಿಸಿ ಸಂದೇಶ ನೀಡಿ ರಾಜಕೀಯ ಅವಕಾಶ ಪಡೆಯಬೇಕು, ಇಲ್ಲವಾದರೆ ನಿರ್ಲಕ್ಷö್ಯಕ್ಕೀಡಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸಂಘಟನೆಯಾಗಿಲ್ಲ ಎನ್ನುವ ಕಾರಣಕ್ಕೆ ಹಿಂದುಳಿದ ವರ್ಗಗಳ ಮುಖಂಡರು ಚುನಾವಣೆಗಳಲ್ಲಿ ಸ್ಪರ್ಧೆ ಮಾಡಲು ರಾಜಕೀಯ ಪಕ್ಷಗಳು ಅವಕಾಶ ನೀಡುತ್ತಿಲ್ಲ, ಸರ್ಕಾರದ ನೇಮಕಾತಿಗಳಲ್ಲೂ ಈ ವರ್ಗಗಳು ಅವಕಾಶ ವಂಚಿತವಾಗುತ್ತಿವೆ. ಇನ್ನು ಮುಂದೆ ಹಾಗಾಗುವುದು ಬೇಡ, ಇಡೀ ಹಿಂದುಳಿದ ವರ್ಗ ಒಂದಾಗಿ ದೊಡ್ಡ ಶಕ್ತಿಯಾಗಿ ರೂಪುಗೊಂಡು ಅಧಿಕಾರ, ಅವಕಾಶಗಳನ್ನು ತಮ್ಮದಾಗಿಸಿಕೊಳ್ಳಬೇಕು ಎಂದು ನರೇಶ್‌ಕುಮಾರ್ ಹೇಳಿದರು.
ಬಿಜೆಪಿ ಮುಖಂಡ ಎಸ್.ಪಿ.ಚಿದಾನಂದ್ ಮಾತನಾಡಿ, ಹಿಂದುಳಿದ ವರ್ಗಗಳ ಮುಖಂಡರು ರಾಜಕೀಯ ಅವಕಾಶ ಪಡೆಯುವುದು ಕಷ್ಟವಾಗಿದೆ. ಸಣ್ಣ ಜಾತಿ ಎನ್ನುವ ಕಾರಣಕ್ಕೆ ಈ ವರ್ಗವನ್ನು ರಾಜಕೀಯ ಪಕ್ಷಗಳು ಕಡೆಗಣಿಸುತ್ತಲೇ ಬಂದಿವೆ. ಹಿಂದುಳಿದ ವರ್ಗಗಳ ಸಮುದಾಯಗಳು ಒಗ್ಗಟ್ಟಾದರೆ ಅವಕಾಶಗಳು ನಮ್ಮ ಬಳಿಗೆ ಬರುತ್ತವೆ. ಸಂಘಟಿತರಾಗುವ ಮೂಲಕ ನಮ್ಮ ಹಕ್ಕು, ಅವಕಾಶಗಳನ್ನು ಪಡೆಯಬಹುದು ಎಂದು ಹೇಳಿದರು. ನಗರ ಪಾಲಿಕೆ ಮಾಜಿ ಸದಸ್ಯ ವಿಷ್ಣುವರ್ಧನ್, ಬಿಜೆಪಿ ಮುಖಂಡರಾದ ರುದ್ರೇಶ್, ಸಂದೀಪ್‌ಗೌಡ, ಹನುಮಂತರಾಜು, ಹಿಂದುಳಿದ ವರ್ಗಗಳ ಒಕ್ಕೂಟದ ಗೌರವಾಧ್ಯಕ್ಷ ಟಿ.ಎನ್.ಮಧುಕರ್, ಉಪಾಧ್ಯಕ್ಷ ಡಿ.ಎಂ.ಸತೀಶ್, ಸವಿತಾ ಸಮಾಜದ ಮುಖಂಡರಾದ ಮಂಜೇಶ್ ಒಲಿಂಪಿಕ್, ಕಟ್‌ವೆಲ್ ರಂಗನಾಥ್, ಓ.ಕೆ.ರಾಜು, ವೆಂಕಟರಾಮ್, ಹಾಜರಿದ್ದರು.
(Visited 1 times, 1 visits today)