ತಿಪಟೂರು: ಸರಗಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.
ಬoಧಿತರು ಅಸ್ಟರ್ ಅಲಿ ಮತ್ತು ಮತ್ತೊಬ್ಬ ಆರೋಪಿ ಮಹಾರಾಷ್ಟ್ರದ ಹೈದರ್ ಅಲಿ ಎಂಬಾತನನ್ನು ದಸ್ತಗಿರಿ ಮಾಡಿದ್ದಾರೆ. ಬಂಧಿತರಿoದ ಒಟ್ಟು 05 ಪ್ರಕರಣಗಳಲ್ಲಿ 7 ಲಕ್ಷ ರೂ ಬೆಲೆ ಬಾಳುವ 100 ಗ್ರಾಂ ತೂಕದ ಚಿನ್ನದ ಒಡವೆಗಳನ್ನು ಹಾಗೂ 1 ಲಕ್ಷ ರೂ ಬೆಲೆ ಬಾಳುವ ಬಜಾಜ್ ಪಲ್ಸರ್ ಬೈಕ್‌ನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ.
ಡಿ. 17 ರಂದು ತಿಪಟೂರು ಟೌನ್ ಮಂಜುಳಮ್ಮ ಗಾರ್ಡನ್ ಏರಿಯಾ ವಾಸಿಯಾದ ವೆಂಕಟಮ್ಮ ಕೊರಳಿನಲ್ಲಿದ್ದ ಚಿನ್ನದ ಸರವನ್ನು ಬೈಕ್ ನ ಹಿಂಬದಿ ಸವಾರ ಕಿತ್ತುಕೊಳ್ಳಲು ಹೋದಾಗ ಆಕೆ ಬಿಗಿಯಾಗಿ ಹಿಡಿದುಕೊಂಡಿದ್ದರಿoದ ಅರ್ಧ ಚಿನ್ನದ ಸರವನ್ನು ಕಿತ್ತುಕೊಂಡು ಹೋಗಿರುವ ಸಂಬoಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಈ ಪ್ರಕರಣಗಳ ಆರೋಪಿ ಮತ್ತು ಮಾಲನ್ನು ಪತ್ತೆ ಹಚ್ಚಲು ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳಾದ ವಿ ಮರಿಯಪ್ಪ, ಅಬ್ದುಲ್ ಖಾದರ್ ರವರ ಮಾರ್ಗದರ್ಶನದಲ್ಲಿ ವಿಶೇಷ ತಂಡವನ್ನು ರಚನೆ ಮಾಡಿದ್ದು ತಂಡದಲ್ಲಿ ತಿಪಟೂರು ಉಪ ವಿಭಾಗದ ವಿನಾಯಕ ಎನ್ ಶೆಟಿಗೆರಿ ರವರ ನೇತೃತ್ವದಲ್ಲಿ, ತಿಪಟೂರು ನಗರ ಪೊಲೀಸ್ ಠಾಣೆಯ ಪಿ ಐ ಸಿ ವೆಂಕಟೇಶ್ ರವರು ಪಿ ಎಸ್ ಐ ಕೃಷ್ಣಪ್ಪ ಹಾಗೂ ಎ ಎಸ್ ಐ ರವರುಗಳಾದ ಚಿಕ್ಕಲಕ್ಕೇಗೌಡ, ಉಸ್ಮಾನ್ ಸಾಬ್ ಸಿಬ್ಬಂದಿಗಳಾದ ಮೋಹನ್ ಕುಮಾರ್, ಲೋಕೇಶ್, ಯತೀಶ್, ಮಂಜುನಾಥ್, ಸಾಗರ್, ಚಿರಂಜೀವಿ, ವಸೀಂ ಜಭೀ, ಕಿರಣ್ ಮಹಿಳಾ ಸಿಬ್ಬಂದಿಗಳಾದ ಪಲ್ಲವಿ, ಸುಮಾ, ತನಿಖಾ ಸಹಾಯಕರಾಗಿ ಬೋರಲಿಂಗಯ್ಯ, ಹಾಗೂ ಚಾಲಕರುಗಳಾದ ಸಂತೋಷ್, ಮನೋಜ್ ರವರುಗಳನ್ನು ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅಶೋಕ್ ಕೆ ವಿ ಐ.ಪಿ.ಎಸ್ ರವರು ಶ್ಲಾಘಿಸಿರುತ್ತಾರೆ.
(Visited 1 times, 1 visits today)