ಹುಳಿಯಾರು: ಸಂಸತ್ ಚುನಾವಣೆಯಲ್ಲಿ ನಾನು ದಿಕ್ಕುತಪ್ಪಿದ್ದೆ. ಹೋದ ಕಡೆಯಲ್ಲ ನಾನು ಹೊರಗಿನವನು, ಗೆದ್ದ ಮೇಲೆ ಜಿಲ್ಲೆ ಕಡೆ ತಿರುಗಿ ನೋಡಲ್ಲ. ಹೀಗೆ ಒಂದೊAದು ಕಡೆ ಒಂದೊAದು ರೀತಿಯ ಜಾಪಾಳ್ ಮಾತ್ರೆ ಹಾಕುತ್ತಿದ್ದರು. ಈ ಅಪಪ್ರಚಾರಕ್ಕೆ ಕಿವಿ ಕೊಡದೆ ಪಕ್ಷ, ಜಾತಿ ನೋಡದೆ ಎಲ್ಲರೂ ಇವ ನಮ್ಮವ ಇವ ನಮ್ಮವ ಎಂದು ಮತ ಹಾಕಿದ್ದೀರಿ. ನಾನೂ ಕೂಡ ಜಾತಿ ಪಕ್ಷ ನೋಡದೆ ಜಿಲ್ಲೆಯ ಅಭಿವೃದ್ಧಿಗೆ ಅವಿರತವಾಗಿ ಶ್ರಮಿಸುತ್ತಿದ್ದೇವೆ. ದೇಶದಲ್ಲೇ ತುಮಕೂರು ಜಿಲ್ಲೆಯನ್ನು ಮಾದರಿ ಮಾಡುವ ಗುರಿ ಇಟ್ಟುಕೊಂಡಿದ್ದೇನೆ ಎಂದು ಕೇಂದ್ರ ಸರ್ಕಾರದ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು.
ಹುಳಿಯಾರು ಅಂಬೇಡ್ಕರ್ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಾರ್ವಜನಿಕ ಕುಂದುಕೊರತೆ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಇನ್ನೆರಡು ವರ್ಷದಲ್ಲಿ ಜಿಲ್ಲೆಯಲ್ಲಿ ಎಲ್ಲೂ ರೈಲ್ವೆ ಗೇಟ್ ಇಲ್ಲದಂತೆ ಮಾಡಿ ರೈಲು ಮತ್ತು ಇತರೆ ವಾಹನಗಳು ತಡೆರಹಿತವಾಗಿ ಓಡಾಡುವಂತೆ ಮಾಡತ್ತೇನೆ. ನೆನೆಗುದಿಗೆ ಬಿದ್ದಿರುವ ಜಿಲ್ಲೆಯಲ್ಲಿ ಹಾದು ಹೋಗುವ ರೈಲ್ವೆ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡಿಸಿದ್ದೇನೆ. ನಿಂತಿರುವ ರಾಷ್ಟಿçÃಯ ಹೆದ್ದಾರಿ ಕಾಮಗಾರಿಯನ್ನು ಆರಂಭಿಸಿದ್ದೇನೆ. ಗುಬ್ಬಿಯಿಂದ ತುಮಕೂರು ರಸ್ತೆಯನ್ನು ಬೆಂಗಳೂರಿನ ಎಂಜಿ ರಸ್ತೆ ರೀತಿ ಮಾಡುತ್ತೇನೆ. ಶಿರಾದಿಂದ ಕೆ.ಬಿ.ಕ್ರಾಸ್ ವರೆವಿಗೆ ಬುಕ್ಕಾಪಟ್ಟಣ ಮಾರ್ಗವಾಗಿ ರಸ್ತೆ ಅಭಿವೃದ್ಧಿಗೆ ಕೈ ಹಾಕಿದ್ದೇನೆ. ಹಾಸನದಿಂದ ಹಿರಿಯೂರಿಗೆ ಕೇವಲ 1 ಗಂಟೆಯಲ್ಲಿ ಪ್ರಯಾಣಿಸುವ ಎಕ್ಸ್ಪ್ರೆಸ್ ಹೈವೆಗೆ ಹಣ ಬಿಡುಗಡೆ ಮಾಡಿಸಿದ್ದೇನೆ. ಪೂಣೆಯಿಂದ ತುಮಕೂರು ಜಿಲ್ಲೆ ಮಾರ್ಗವಾಗಿ ಬೆಂಗಳೂರಿಗೆ 55 ಸಾವಿರ ಕೋಟಿ ರೂ. ವೆಚ್ಚದ ಹೈವೆ ಕಾಮಗಾರಿ ಮಂಜೂರು ಮಾಡಿಸಿದ್ದೇನೆ ಎಂದು ವಿವರಿಸಿದರು. ಶಾಸಕ ಸಿ.ಬಿ.ಸುರೇಶ್ ಬಾಬು ಅವರು ಮಾತನಾಡಿ ಹೋಬಳಿ ಮಟ್ಟದಲ್ಲಿ ಸಂಸದರೊಬ್ಬರು ಜನ ಸಂಪರ್ಕ ಸಭೆ ನಡೆಸುತ್ತಿರುವುದು ಇದೇ ಮೊದಲು. ಸಂಸದರು ಚಿಕ್ಕನಾಯಕನಹಳ್ಳಿ ಕ್ಷೇತ್ರದ ಮೇಲೆ ವಿಶೇಷ ಕಾಳಜಿ ಇಟ್ಟುಕೊಂಡಿರುವುದರಿAದ ಇಲ್ಲಿ ನೀರಿನ ಸಮಸ್ಯೆ ತಲೆದೂರಲಾರದು. ತಾಲೂಕಿನಲ್ಲಿ ಸಾಮಾಜಿಕ ಪಿಂಚಣಿಗೆ ಯಾವ ಅರ್ಜಿಗಳು ಬರುತ್ತಿಲ್ಲ. ಬಂದರೂ ಕೂಡ ವಾರದೊಳಗೆ ಮಂಜೂರು ಮಾಡಿಸುತ್ತಿದ್ದೇವೆ. ಬಗರ್ ಹುಕುಂನ 2 ಸಾವಿರ ಅರ್ಜಿಗಳನ್ನು ವಿಲೆ ಮಾಡಿದ್ದೇವೆ. ಇನ್ನೂ 27 ಸಾವಿರ ಅರ್ಜಿ ಬಾಕಿ ಇದ್ದು 6 ತಿಂಗಳೂಳಗೆ ಅರ್ಹರಿಗೆ ಸಾಗುವಳಿ ಚೀಟಿ ಕೊಡುತ್ತೇವೆ. ತಾಲೂಕಿಗೆ ಹರಿಯುತ್ತಿರುವ ಹೇಮಾವತಿ ನಾಲೆ ದುರಸ್ಥಿ ಮಾಡಲು 125 ಕೋಟಿ ರೂ. ಅಗತ್ಯವಿದ್ದು ಸಚಿವರು ಕೇಂದ್ರ ಸರ್ಕಾರದಿಂದ ಬಿಡುಗಡೆ ಮಾಡಿಸಬೇಕು ಎಂದು ಮನವಿ ಮಾಡಿದರು. ಶಾಸಕರ ಜನಸ್ಪಂದನೆಗೆ ಶ್ಲಾಘನೆ: ಮಧುಗಿರಿಯಲ್ಲಿ ಜನಸ್ಪಂದನಾ ಸಭೆ ಮಾಡಿದ್ದಾಗ ಸಾವಿರಾರು ಜನರು ತಮ್ಮ ಸಮಸ್ಯೆ ಹೇಳಿಕೊಂಡು ಬಂದಿದ್ದರು. ಆದರೆ ಇಲ್ಲಿ ಜನರೇ ಇಲ್ಲ. ಕಾರಣ ಕೇಳಿದರೆ ಶಾಸಕರು ಪ್ರತಿ ವಾರ ಜನಸ್ಪಂದನಾ ಸಭೆ ನಡೆಸುತ್ತಿದ್ದು ಇಲ್ಲಿಯವರೆವಿಗೆ 52 ಸಭೆ ಮಾಡಿ ಜನರ ಸಮಸ್ಯೆ
ಬಗೆಹರಿಸುತ್ತಿದ್ದಾರೆ. ಹಾಗಾಗಿ ಹುಳಿಯಾರು ಜನಸ್ಪಂದನಕ್ಕೆ ಜನ ಬಂದಿಲ್ಲ ಎಂದರು. ಎಲ್ಲಾ ಎಂಎಲ್‌ಎಗಳೂ ಬಾಬಣ್ಣನ ರೀತಿ ಕೆಲಸ ಮಾಡಿದರೆ ರಾಜ್ಯದಲ್ಲಿ ಸಮಸ್ಯೆಗಳೇ ಇರುವುದಿಲ್ಲ. ಅಲ್ಲದೆ ಅಧಿಕಾರಿಗಳು, ಜನರು ಹಾಗೂ ಜನಪ್ರತಿನಿಧಿಗಳ ನಡುವೆ ಕಂದಕ ಸೃಷ್ಠಿಯಾಗುವುದಿಲ್ಲ. ಮುಖ್ಯಾವಾಗಿ ಮಧ್ಯವರ್ತಿ ಹಾಗೂ ಲಂಚ ತಡೆಯಲು ಸಾಧ್ಯವಾಗುತ್ತದೆ ಎಂದು ಶಾಸಕ ಸಿ.ಬಿ.ಸುರೇಶ್‌ಬಾಬು ಅವರು ಜನಸ್ಪಂದನಾ ಕಾರ್ಯಕ್ರಮವನ್ನು ಸಚಿವರು ಶ್ಲಾಘಿಸಿದರು. ಜೆಜೆಎಂ ಬಗ್ಗೆ ಕಂಪ್ಲೇಟ್ ಬಂದರೆ ಸುಮ್ಮನಿರಲ್ಲ: ದೇಶದ ಪ್ರಧಾನಿ ಮೋದಿ ಅವರು ನನ್ನ ಮೇಲೆ ನಂಬಿಕೆ ಇಟ್ಟು ರಾಜ್ಯದ ನೀರಾವರಿ ಅನುಷ್ಟಾನದ ಹೊಣೆ ಹಾಗೂ ದೇಶದ ಜೆಜೆಎಂ ಅನುಷ್ಟಾನದ ಜವಾಬ್ದಾರಿಯನ್ನು ಕೊಟ್ಟಿದ್ದಾರೆ. ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಅನೇಕ ಜೆಜೆಎಂ ಕಾಮಗಾರಿಗಳ ಬಗ್ಗೆ ದೂರು ಬರುತ್ತಿದೆ. ಪೈಪ್ ಲೈನೆ ಅಳವಡಿಸಲು ಸಿಸಿ ರೋಡ್ ಅಗೆದಿದ್ದನ್ನು ಮುಚ್ಚದಿರುವುದು, ಹಳೆಕಾಲದ ಕೊಳವೆಬಾವಿ, ಟ್ಯಾಂಕ್‌ಗೆ ಇದಕ್ಕೂ ಬಳಕೆ ಮಾಡಿಕೊಳ್ಳುತ್ತಿರುವ ಆರೋಪ ಇದೆ. ಹಳ್ಳಿಹಳ್ಳಿ ಖುದ್ದು ತೆರಳಿ ಕಾಮಗಾರಿ ಗುಣಮಟ್ಟ ವೀಕ್ಷಿಸಿ. ಇನ್ನು ಮುಂದೆ ಕಂಪ್ಲೇಟ್ ಬಂದರೆ ಸುಮ್ಮನಿರಲ್ಲ. ತಾಲೂಕಿಗೆ ನೀರು ಕೊಡುವ ಪುಣ್ಯದ ಕೆಲಸ ಸಿಕ್ಕಿದೆ ಶ್ರದ್ಧೆಯಿಂದ ಮಾಡಿ ಎಂದು ತಮ್ಮ ಭಾಷಣದ ಮದ್ಯೆ ಸಚಿವರು ಇಒ ಡಿವೈಡರ್ ಲೈಟ್ ಆಫ್ ಆದರೆ ಎತ್ತಂಗಡಿ: ಹುಳಿಯಾರು ಪಟ್ಟಣದಲ್ಲಿ ನೆನೆಗುದಿಗೆ ಬಿದ್ದಿದ್ದ ಹೈವೆ ಡಿವೈಡರ್ ನಲ್ಲಿ ಸ್ಟಿçÃಟ್ ಲೈಟ್ ಅಳವಡಿಸುವ ಕಾಮಗಾರಿ ಮುಗಿಸಿ ಇಂದು ನಾನೇ ಉದ್ಘಾಟಿಸಿದ್ದೇನೆ. ತಿಂಗಳಿಗೆ ಒಂದರಿAದ ಒಂದೂವರೆ ಲಕ್ಷ ಬಿಲ್ ಬರುತ್ತದೆ. ಪಟ್ಟಣ ಪಂಚಾಯ್ತಿಗೆ ಇದೇನು ಹೊರೆಯಲ್ಲ. ನಿಮಗೆ ಕಟ್ಟಲು ಸಾಧ್ಯವಾಗಲಿಲ್ಲ ಎಂದರೆ ನನ್ನನ್ನು ಕೇಳಿ ಕೊಡುತ್ತೇನೆ. ಆದರೆ ಯಾವ ಕಾರಣಕ್ಕೂ ಸ್ಟಿçÃಟ್ ಲೈಟ್ ಆಫ್ ಮಾಡಲು ಬಿಡಬೇಡಿ. ಒಂದು ವೇಳೆ ಆಫ್ ಆದರೆ ದೇವರಾಣೆ ಹೇಳ್ತಿನಿ ಕೇಳಿ ನಿಮ್ಮನ್ನು ಎತ್ತಂಗಡಿ ಮಾಡಿಸುತ್ತೇನೆ ಎಂದು ತಮ್ಮ ಭಾಷಣದಲ್ಲಿ ಸಚಿವರು ಪಪಂ ಮುಖ್ಯಾಧಿಕಾರಿ ನಾಗಭೂಷಣ್ ಅವರಿಗೆ ಎಚ್ಚರಿಕೆ ನೀಡಿದರು. ಉಪವಿಭಾಗಾಧಿಕಾರಿ ಸಪ್ತಶ್ರೀ, ತಹಸೀಲ್ದಾರ್ ಕೆ.ಪುರಂದರ, ತಾಪಂ ಇಒ ದೊಡ್ಡಸಿದ್ಧಯ್ಯ, ಪಪಂ ಅದ್ಯಕ್ಷೆ ರತ್ನಮ್ಮ, ಇನ್ನಿತರರು ಉಪಸ್ಥಿತರಿದ್ದರು.
(Visited 1 times, 1 visits today)