ಹುಳಿಯಾರು: ಹುಳಿಯಾರು ಹೋಬಳಿಯ ಹೊಯ್ಸಳಕಟ್ಟೆಯಲ್ಲಿ ಮಹಿಳೆಯರಿಗೆ ಬುಧವಾರ ಯುವ ಉದ್ಯಮಿ ತರಬೇತಿ ಆರಂಭವಾಯಿತು. ನವದಿಶಾ ವತಿಯಿಂದ ಒಂದು ವಾರ ಕಾಲ ನಡೆಯುವ ತರಬೇತಿಯಲ್ಲಿ ಮಹಿಳೆಯರು ಬಯಸುವ ವಿವಿಧ ಉದ್ಯಮಗಳ ಬಗ್ಗೆ ತರತಿಯನ್ನು ನೀಡಲಾಗುವುದು. ತರಬೇತಿಯ ನಂತರ ಉದ್ಯಮ ಆರಂಭಿಸಲು ಆಕತ್ಯವಿರುವವರಿಗೆ ಹಣಕಾಸು ದೊರೆಯುವ ಸಂಸ್ಥೆ ಅಥವಾ ಸಬ್ಸಿಡಿ ಯೋಜನೆಯ ಬಗ್ಗೆ ಪೂರ್ಣ ಮಾಹಿತಿ ನೀಡಲಾಗುವುದು. ಉದ್ಯಮ ಆರಂಭಿಸಿದ ಮೇಲೆ ಉತ್ಪನ್ನಗಳ ಮಾರಾಟಕ್ಕೆ ಅಗತ್ಯ ಮಾರುಕಟ್ಟೆಯ ಸೌಲಭ್ಯದ ಬಗ್ಗೆ ಮಾಹಿತಿ ನೀಡಲಾಗುವುದು.ಮಹಿಳೆಯು ಯಶಸ್ವಿ ಉದ್ಯಮಿಯಾಗಲು ಅಗತ್ಯ ಮೂರು ವರ್ಷಗಳ ಕಾಲ ಅಗತ್ಯ ಮಾರ್ಗದರ್ಶನವನ್ನು ಪೂರೈಸಲಾಗುವುದು ಎಂದು ತರಬೇತುದಾರರಾದ ಅಶ್ವಿನಿ ಮತ್ತು ಸಿ.ಎಂ.ಎಸ್ ಗೌಡ ತಿಳಿಸಿದರು.
ತರಬೇತಿಯನ್ನು ಉದ್ಘಾಟಿಸಿದ ಸೃಜನ ಮಹಿಳಾ ಸಂಘಟನೆಯ ಅಧ್ಯಕ್ಷೆ
ಇಂದಿರಮ್ಮನವರು ಮಹಿಳೆಯರು ಉದ್ಯಮಿಯಾಗಿ ಆರ್ಥಿಕ ಸಬಲೀಕರಣ ಗೊಳ್ಳಬೇಕೆಂದರು. ಸುವರ್ಣ ವಿದ್ಯಾಚೇತನದ ರಾಮಕೃಷ್ಣಪ್ಪ ಮಹಿಳೆಯರಿಗೆ ಬದ್ಧತೆ ಆತ್ಮವಿಶ್ವಾಸ ಮತ್ತು ಜನರ ಒಡನಾಟ ಉದ್ಯಮಿಯಾಗಲು ಮುಖ್ಯ ಎಂದು ಹೇಳಿದರು. ಸಂಪನ್ಮೂಲ ವ್ಯಕ್ತಿ ಕೆಂಪಯ್ಯ ಮಾತನಾಡಿ ಪ್ರತಿಯೊಬ್ಬರಿಗೂ ವಿಶೇಷವಾದ ಶಕ್ತಿ ಮತ್ತು ಕುಶಲತೆ ಇದೆ. ಅದನ್ನು ಬಳಸಿಕೊಂಡು ಉದ್ಯಮಿಗಳಾಗಬೇಕೆಂಬ ಆಶಯವನ್ನು ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಸಂಜೀವಿನಿ ಒಕ್ಕೂಟದ ಶಶಿಕಲಾ, ತನುಜಾ, ಶ್ರೀದೇವಿ, ಕಾವ್ಯ ಮತ್ತು ಪವಿತ್ರ, ಹೊಯ್ಸಳಕಟ್ಟೆ ಗ್ರಾಮ ಪಂಚಾಯಿತಿ ಮಹಿಳೆಯರು ಹಾಗೂ ಗ್ರಂಥಪಾಲಕ ನಾಗರಾಜು ಹಾಜರಿದ್ದರು.

(Visited 1 times, 1 visits today)