ಚಿಕ್ಕನಾಯಕನಹಳ್ಳಿ: ಶಂಬುಗಡಿಯಲ್ಲಿ 38ದಿನಗಳಿಂದ ಉಪವಾಸ ಸತ್ಯಾಗ್ರಹ ಕೈಗೊಂಡಿರುವ ರೈತನಾಯಕ ಜಗತ್‌ಸಿಂಗ್ ದಲ್ಗೆöÊವಾಲಾ ರ ಬೇಡಿಕೆ ಈಡೇರಿಸಿ ಸತ್ಯಾಗ್ರಹವನ್ನು ಅಂತ್ಯಗೊಳಿಸಲು ಕೇಂದ್ರ ಸರ್ಕಾರ ತಕ್ಷಣ ಮುಂದಾಗಬೇಕೆAದು ರೈತಸಂಘ ಹಾಗೂ ಹಸಿರುಸೇನೆ ಸದಸ್ಯರು ಮನವಿ ಸಲ್ಲಿಸಿದರು.
ತಾಲ್ಲೂಕು ರೈತಸಂಘ ಹಾಗೂ ಹಸಿರುಸೇನೆಯ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆಯೊಂದಿಗೆ ತಾಲ್ಲೂಕು ಕಚೇರಿಗೆ ಮಹಾತ್ಮ ಗಾಂಧೀಜಿಯ ಭಾವಚಿತ್ರದೊಂದಿಗೆ ಕೆಲನಿಮಿಷಗಳ ಕಾಲ ಧರಣಿ ನಡೆಸಿದರು. ಈ ಸಂದರ್ಭದಲ್ಲಿ ಅಧ್ಯಕ್ಷ ಸೀಬಿಲಿಂಗಯ್ಯ ಮಾತನಾಡಿ ಈ ಹಿಂದೆ ದೆಹಲಿಯಲ್ಲಿ ನಡೆದ ರೈತ ಚಳುವಳಿಯ ಸಂದರ್ಭದಲ್ಲಿ ಕೇಂದ್ರ ಸರ್ಕಾರ ರೈತರ ಬೇಡಿಕೆಗಳನ್ನು ಈಡೆರಿಸುವ ಭರವಸೆಯನ್ನು ನೀಡಿತ್ತು. ಆದರೆ ಎರಡುವರ್ಷ ಕಳೆದರೂ ಲಿಖಿತ ಬೇಡಿಕೆಯಂತೆ ಎಂಎಸ್‌ಪಿಯನ್ನು ಕಾನೂನಾತ್ಮಕವಾಗಿ ಜಾರಿ ಮಾಡಲಿಲ್ಲ, ವಿದ್ಯುತ್‌ನ್ನು ಖಾಸಗೀಕರಣ ಮಾಡಬಾರದೆಂಬ ನಮ್ಮ ಬೇಡಿಕೆ ಈಡೆರಿಸದ ಕಾರಣ ಪುನಃ ಹರಿಯಾಣದ ಶಂಭು ಗಡಿಯಲ್ಲಿ ರೈತನಾಯಕ ಜಗತ್‌ಸಿಂಗ್ ದಲ್ಗೆöÊವಾಲಾರವರು ಉಪವಾಸ ಸತ್ಯಾಗ್ರಹ ಕೈಗೊಂಡು 38ದಿನಗಳು ಕಳೆದು ಜೀವನ್ಮರಣದ ಸ್ಥಿತಿಯಲ್ಲಿದ್ದಾರೆ. ಈ ಬಗ್ಗೆ ಸುಪ್ರೀಂಕೋರ್ಟ್ ಕಳವಳವ್ಯಕ್ತಪಡಿಸಿ ಪಂಜಾಬ್ ಹಾಗೂ ಕೇಂದ್ರ ಸರ್ಕಾರಗಳು ತಕ್ಷಣ ಈ ಬಗ್ಗೆ ತೀರ್ಮಾನ ಕೈಗೊಳ್ಳುವಂತೆ ಸೂಚಿಸಿದರೂ ಪಾಲನೆಯಾಗಿಲ್ಲವೆಂದರು. ಕೇಂದ್ರ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಬೇಡಿಕೆಗಳನ್ನು ಈಡೇರಿಸುವ ಮೂಲಕ ರೈತನಾಯಕನ ಪ್ರಾಣವುಳಿಸಲು ಮುಂದಾಗಬೇಕೆAದರು. ನಿರ್ಲ್ಯಕ್ಷಿಸಿದರೆ ಪಂಚಾಬ್ ಹಾಗೂ ಹರಿಯಾಣದ ರೈತರ ಹೋರಾಟ ದೇಶಾದ್ಯಂತ ವಿಸ್ತಾರಗೊಳ್ಳಲಿದೆ ಎಂದರು. ಮನವಿಯನ್ನು ತಹಸೀಲ್ದಾರ್ ರಿಗೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಯದುಕುಮಾರ್ ಖಜಾಂಚಿ ನಟರಾಜ್, ವಿರೂಪಾಕ್ಷಪ್ಪ, ದೊಡ್ಡರಾಂಪುರ ಬಸವರಾಜು, ಪುಟ್ಟಯ್ಯ, ಜಗದೀಶ್, ಬಗ್ಗನಳ್ಳಿಬಸವರಾಜು ಮುಂತಾದವರಿದ್ದರು.
(Visited 1 times, 1 visits today)