ಚಿಕ್ಕನಾಯಕನಹಳ್ಳಿ: ಜ.18 ಮತ್ತು 19 ರಂದು ಬೆಂಗಳೂರಿನಲ್ಲಿ ನಡೆಯುವ ಅಖಿಲಕರ್ನಾಟಕ ಬ್ರಾಹ್ಮಣ ಮಹಾಸಭಾದ ಸುವರ್ಣ ಮಹೋತ್ಸವದ ಮಹಾ ಸಮ್ಮೇಳನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದ ಬಂಧುಗಳು ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ರಾಜ್ಯ ಸಂಘಟನಾ ಕಾರ್ಯದರ್ಶಿ ಎಚ್.ಎಸ್. ರಾಘವೇಂದ್ರ ತಿಳಿಸಿದರು.
ಪಟ್ಟಣದ ನಗರ ಬ್ರಾಹ್ಮಣ ಸಭಾದ ಉಪಾಧ್ಯಕ್ಷರಾದ ಕೆ.ಎಸ್. ಚಂದ್ರಶೇಖರಯ್ಯನವರ ಸ್ವಗೃಹದಲ್ಲಿ ನಡೆದ ಸಮಾಜಬಾಂಧವರ ಸಭೆಯಲ್ಲಿ ಮಾತನಾಡಿ ಜ.18 ಹಾಗೂ 19 ರಂದು ಬೆಂಗಳೂರನ ಅರಮನೆ ಮೈದಾನದ ತ್ರಿಪುರವಾಸಿನಿ ಸಭಾಂಗಣದಲ್ಲಿ 50ನೇವರ್ಷದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಮ್ಮೇಳನ “ವಿಶ್ವಾಮಿತ್ರ” ನಡೆಯಲಿದೆ. ಸಮ್ಮೇಳನದ ಉದ್ಘಾಟನೆ ಹಾಗೂ ಲಕ್ಷ ಗಾಯತ್ರಿ ಹೋಮದ ಪೂರ್ಣಾಹುತಿ ಯನ್ನು ಶ್ರೀ ಶೃಂಗೇರಿ ಶಾರದಾಪೀಠಾಧೀಶ್ವರರಾದ ಶ್ರೀವಿದುಶೇಖರ ಭಾರತೀಸ್ವಾಮಿಗಳು ನೆರವೇರಿಸುವರು. ಎರಡು ದಿನಗಳ ಕಾಲ ನಡೆಯುವ ಈ ಭವ್ಯಸಮ್ಮೇಳನದಲ್ಲಿ ತ್ರಿಮತಸ್ಥ ಮಠಾಧೀಶರು ಭಾಗವಹಿಸುವರು. ವಿಚಾರ ಗೋಷ್ಠಿ, ವಿಪ್ರಸಾಧಕರಿಗೆ ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮ ವೇದಾಪಾರಾಯಣ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಸಮ್ಮೇಳನಕ್ಕೆ ಲಕ್ಷಕ್ಕೂ ಮಿಗಿಲಾಗಿ ಸಮಾಜಬಾಂಧವರು ಭಾಗವಹಿಸಿಲಿದ್ದಾರೆ ಎಂದರು. ಎರಡು ದಿನದ ಈ ಸಮ್ಮೇಳನಕ್ಕೆ ತಾಲ್ಲೂಕು ಹಾಗೂ ಹೋಬಳಿ ಕೇಂದ್ರಗಳಿAದ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಅಖಿಲ ಕರ್ನಾಟಕ ಬಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ್ ಹಾರನಹಳ್ಳಿವರು ಕರೆ ನೀಡಿದ್ದಾರೆ. ಅವರ ಇಂಗಿತದAತೆ ತಾಲ್ಲೂಕಿನ ಸಮಾಜ ಬಾಂಧವರಿಗೆ ಆಹ್ವಾನ ನೀಡಲಾಗುತ್ತಿದೆ ಎಂದರು. ಈ ಸಂದರ್ಭದಲ್ಲಿ ಸಮ್ಮೇಳನ ಆಹ್ವಾನ ಪತ್ರಿಕೆ ಹಾಗೂ ಪ್ರಚಾರದ ಬ್ಯಾನರ್‌ನ್ನು ಬಿಡುಗಡೆಗೊಳಿಸಲಾಯಿತು. ಹಿರಿಯ ಸಾಹಿತಿ ಡಾ. ಎಂ.ವಿ.ನಾಗರಾಜರಾವ್ ಹಾಗೂ ನಾಗರತ್ನರಾವ್‌ರವರನ್ನು ಸಮ್ಮೇಳನಕ್ಕೆ ಆಹ್ವಾನಿಸಲಾಯಿತು.ರಾಜ್ಯ ಕಾರ್ಯಕಾರಿ ಮಂಡಳಿಯ ಸದಸ್ಯರಾದ ಶ್ರೀಮತಿ ಛಾಯಾ ರಾಮಶೇಷ, ಶುಭಾಶಿಣಿ, ನಗರ ಬ್ರಾಹ್ಮಣ ಸಭಾದ ಸದಸ್ಯರಾದ ರಾಜೀವ್ ಕೆ.ಜಿ. ಲಕ್ಷಿö್ಮ ಸುಬ್ರಹ್ಮಣ್ಯಸ್ವಾಮಿ, ಭಾರತಿ ಮಹಿಳಾ ಸಮಾಜದ ಶ್ರೀಮತಿ ನಾಗಮಣಿ, ಶ್ರೀಮತಿ ಆಶಾ, ರೂಪಶ್ರೀ, ನಿವೇದಿತಾ, ಉದ್ಯಮಿ ಚಿದಾನಂದ್ ಕೆ.ಜಿ. ಭಾಸ್ಕರ್, ಮುಂತಾದವರಿದ್ದರು.
(Visited 1 times, 1 visits today)