ತುಮಕೂರು : ದೂರು ನೀಡಲು ಬಂದ ಮಹಿಳೆಯನ್ನು ಪುಸಲಾಯಿಸಿ ತನ್ನ ಕಚೇರಿಯಲ್ಲೇ ಲೈಂಗಿಕ ದೌರ್ಜನ್ಯವನ್ನು ಹೆಸಗಿದ ಮಧುಗಿರಿ ಡಿವೈಎಸ್ಪಿ ರಾಮಚಂದ್ರಪ್ಪನವರು ವಿರುದ್ಧ ಭೀಮ್ ಆರ್ಮಿ ತುಮಕೂರು ಜಿಲ್ಲಾ ಘಟಕದ ವತಿಯಿಂದ ಇಂದು ಜಿಲ್ಲಾ ಪೊಲಿಸ್ ವರಿಷ್ಠಾಧಿ ಕಾರಿಗಳಿಗೆ ಮನವಿಯನ್ನು ಸಲ್ಲಿಸಿದ್ದಾರೆ.
ಭೀಮ್ ಆರ್ಮಿ ಜಿಲ್ಲಾಧ್ಯಕ್ಷರಾದ ಅಯ್ಯನಪಾಳ್ಯ ಶ್ರೀನಿವಾಸ ಮೂರ್ತಿ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡುತ್ತಾ ಮಹಿಳೆಯೊಬ್ಬರು ತಮ್ಮ ಜಮೀನು ವಿಚಾರವಾಗಿ ದೂರು ನೀಡಲು ಮಧುಗಿರಿ ಡಿ.ವೈ.ಎಸ್.ಪಿ. ಕಛೇರಿಗೆ ಆಗಮಿಸಿದ್ದಂತಹ ಸಂದರ್ಭದಲ್ಲಿ ಡಿ.ವೈ.ಎಸ್.ಪಿ. ರಾಮಚಂದ್ರಪ್ಪನವರು ಲೈಂಗಿಕ ದೌರ್ಜನ್ಯವನ್ನು ಮಾಡಿದ್ದಾರೆ ಎಂದು ಹೇಳಲಾಗಿ ಸುದ್ಧಿ ಪ್ರಸಾರವಾಗಿದ್ದ ಹಿನ್ನಲೆಯಲ್ಲಿ ಈ ಒಂದು ಅಮಾನುಷ ಘಟನೆಯಿಂದ ಪೊಲೀಸ್ ಇಲಾಖೆ ಮತ್ತು ವ್ಯವಸ್ಥೆಯ ಮೇಲೆ ಸಾರ್ವಜನಿಕರಿಗೆ ಬೇಸರ ಮೂಡಿಸಿರುವುದಲ್ಲದೇ, ಸಾರ್ವಜನಿಕರಲ್ಲಿ ಪೊಲೀಸ್ ಇಲಾಖೆಯ ಮೇಲೆ ವಿಶ್ವಾಸ ಕಳೆದು ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು ರಾಮಚಂದ್ರಪ್ಪನವರು ಪೊಲೀಸ್ ಇಲಾಖೆಯ ಉನ್ನತ ಹುದ್ದೆಯಾದ ಡಿ.ವೈ.ಎಸ್.ಪಿ. ಸ್ಥಾನದಲ್ಲಿದ್ದಾರೆ ತಮ್ಮ ಸನ್ನಿಧಾನಕ್ಕೆ ದೂರದ ಪಾವಗಡದಿಂದ ಜಮೀನು ವ್ಯಾಜ್ಯದ ಬಗ್ಗೆ ದೂರು ಕೊಡಲು ಬಂದAತಹ ಮಹಿಳೆಯನ್ನು ತನ್ನ ಕಚೇರಿಯಲ್ಲಿನ ಏಕಾಂತ ಗೃಹ ಅಥವಾ ಶೌಚಾಲಯದಲ್ಲಿ ಕರೆದುಕೊಂಡು ಹೋಗಿ ಅಲ್ಲಿ ಲೈಂಗಿಕ / ಅನೈತಿಕ ಚಟುವಟಿಕೆ ಮಾಡಲು ಯತ್ನಿಸಿದ್ದಾರೆ ಅದನ್ನು ಯಾರೋ ಕೆಲವರು ಕಿಟಕಿಯ ಮೂಲಕ ಚಿತ್ರೀಕರಣ ಮಾಡಿದ್ದು ಆ ವಿಡಿಯೋ ತುಣುಕು ಎಲ್ಲಾ ಕಡೆ ವೈರಲ್ ಆಗಿದೆ ಹಾಗಾಗಿ ನಾವು ಇಂದು ಮನವಿಯನ್ನು ಸಲ್ಲಿಸುತ್ತಿದ್ದು ಸಾರ್ವಜನಿಕರಿಗೆ ರಕ್ಷಣೆ ನೀಡಬೇಕಾಗಿರುವ ವ್ಯವಸ್ಥೆಯೇ ಈ ರೀತಿಯಾಗಿ ವರ್ತಿಸಿದರೆ ಸಾರ್ವಜನಿಕರಾದ ನಾವುಗಳು ಯಾರಲ್ಲಿ ರಕ್ಷಣೆ ಪಡೆಯಬೇಕು ಎಂಬ ಪ್ರಶ್ನೆಯನ್ನು ಮಾನ್ಯ ವರಿಷ್ಠಾಧಿಕಾರಿಗಳ ಮುಂದೆ ಇಟ್ಟಿದ್ದೇವೆ ಹಾಗೂ ಇಂತಹ ಘಟನೆ ಮತ್ತೊಮ್ಮೆ ಎಲ್ಲಿಯೂ ಮರುಕಳಿಸದಂತೆ ಆರೋಪಿತ ರಾಮಚಂದ್ರಪ್ಪನವರಿಗೆ ಕಾನೂನು ರೀತ್ಯ ಕಠಿಣ ಶಿಕ್ಷೆಯನ್ನು ವಿಧಿಸಲು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರ ಪರವಾಗಿ ನಮ್ಮ ಸಂಘಟನೆಯ ವತಿಯಿಂದ ಮನವಿಯನ್ನು ಮಾಡಿದ್ದು, ಅವರು ಸಹ ಈ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿರುತ್ತಾರೆ ಎಂದರು. ಈ ಸಂದರ್ಭದಲ್ಲಿ ಭೀಮ್ ಆರ್ಮಿ ಜಿಲ್ಲಾಧ್ಯಕ್ಷರಾದ ಅಯ್ಯನಪಾಳ್ಯ ಶ್ರೀನಿವಾಸ್ ಮೂರ್ತಿ, ಜಿಲ್ಲಾ ಉಪಾಧ್ಯಕ್ಷರಾದ ನವೀನ್ ಕುಮಾರ್ ಕೆ.ಎನ್, ಕೊರಟಗೆರೆ ತಾಲ್ಲೂಕು ಅಧ್ಯಕ್ಷರಾದ ಸುರೇಶ್ ಜಿ.ಹೆಚ್ ಗಟ್ಲಹಳ್ಳಿ, ಮಧುಗಿರಿ ತಾಲ್ಲೂಕು ಅಧ್ಯಕ್ಷರಾದ ನಟರಾಜ್ ಮೌರ್ಯ, ಮಧುಗಿರಿ ತಾಲ್ಲೂಕು ಉಪಾಧ್ಯಕ್ಷರಾದ ಪ್ರದೀಪ್ ಕುಮಾರ್, ಬೋವಿ ವಡ್ಡರ ಮಹಾಸಭಾ ಯುವ ಜಿಲ್ಲಾ ಉಪಾಧ್ಯಕ್ಷರಾದ ರಂಗನಾಥ್ ಎಸ್.ಆರ್, ಆಕಾಶ್, ಹರ್ಷವರ್ಧನ್ ಗುರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
(Visited 1 times, 1 visits today)