ಹುಳಿಯಾರು: ಭಾರತದ ಮೊದಲ ಶಿಕ್ಷಕಿ ಸಾವಿತ್ರಿ ಬಾಯಿ ಪುಲೆಯವರ 193 ನೇ ಜನ್ಮ ದಿನಾಚರಣೆಯನ್ನು ಹುಳಿಯಾರು ಪಟ್ಟಣ ಪಂಚಾಯ್ತಿಯ ಸೋಮಜ್ಜನಪಾಳ್ಯ ಶಾಲೆಯಲ್ಲಿ ಶುಕ್ರವಾರ ಆಚರಣೆ ಮಾಡಲಾಯಿತು.
ಶಾಲಾ ಹಿರಿಯ ಶಿಕ್ಷಕಿಯಾದ ಓಂಕಾರಮ್ಮ ಹೆಚ್ ಸಿ ರವರು ಮಾತನಾಡಿ, ಸಾವಿತ್ರಿ ಬಾಯಿ ಪುಲೆಯವರು ಹೆಣ್ಣು ಮಕ್ಕಳಿಗೆ ಮೊದಲು ಅಕ್ಷರ ಬಿತ್ತಿದ ಅಕ್ಷರದವ್ವ. ತಳಸಮುದಾಯ ಹೆಣ್ಣು ಮಕ್ಕಳಿಗೆ 18 ಶಾಲೆಗಳನ್ನು ತೆರೆದು ಮೇಲುಜಾತಿ ಗಂಡಸರಿಗೆ ಮಾತ್ರ ಮೀಸಲಾಗಿದ್ದ ವಿದ್ಯೆಯನ್ನು ಹೆಣ್ಣು ಮಕ್ಕಳಿಗೆ ತಲುಪಿಸಿದವರು ಎಂದು ಹೇಳಿದರು.
ಕೆಸರು, ಸಗಣಿ ಎರಚಿ ಕೇಕೆ ಹಾಕಿದ ಜನರೆದುರು ಹಠವಾದಿಯಾಗಿ ಅಕ್ಷರ ಕಾಯಕ ಮಾಡಿದರು. ಮುಸ್ಲಿಂ, ದಲಿತ, ಹಿಂದುಳಿದ ಹಾಗೂ ಬ್ರಾಹ್ಮಣ ವಿಧವೆಯರ ಮಕ್ಕಳಿಗೂ ಶಿಕ್ಷಣದ ಹಕ್ಕು ದೊರಕಿಸಿ ಕೊಡಲು ಮುನ್ನುಡಿ ಬರೆದ ಮಹಾ ತಾಯಿ. ಅಂದು ಪ್ಲೇಗ್ ಪೀಡಿತ ಪ್ರದೇಶದಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾಗ ಅದೇ ರೋಗಕ್ಕೆ ತುತ್ತಾಗಿ ಅಸುನೀಗಿದರು. ಇವರ ಹೋರಾಟಕ್ಕೆ ಬೆಂಬಲವಾಗಿ ನಿಂತವರು ಅವರ ಪತಿ ಜ್ಯೋತಿ ಬಾಪುಲೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ಚಿಕ್ಕಣ್ಣ, ಜ್ಞಾನೇಶ್ವರಿ ಎಸ್ ಎಸ್, ಅಂಗನವಾಡಿ ಶಿಕ್ಷಕಿ ನಾಗರತ್ನಮ್ಮ, ಭವ್ಯ, ಅಡುಗೆಯವರಾದ ಉಮಾದೇವಿ, ನೀಲಮ್ಮ ಭಾಗವಹಿಸಿದ್ದರು.
(Visited 1 times, 1 visits today)