ಹುಳಿಯಾರು: ಇತ್ತೀಚೆಗೆ ಮಹಿಳೆಯರು ಮೈಕ್ರೋ ಫೈನಾನ್ಸ್ಗಳಿಂದ ಹೆಚ್ಚಿನ ಬಡ್ಡಿಗೆ ಸಾಲ ಪಡೆದು ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ತುಂಬಾ ವಿಷಾದನೀಯ ಎಂದು ಚಿಕ್ಕನಾಯಕನಹಳ್ಳಿ ಕೆನರಾ ಬ್ಯಾಂಕಿನ ಕ್ಷೇತ್ರಧಿಕಾರಿಗಳಾದ ಎನ್.ಜಿ.ಮಧುಸೂದನ್ ಎಂದರು.
ಕೆನರಾ ಬ್ಯಾಂಕ್ ಹಾಗೂ ಆರ್ಥಿಕ ಸಾಕ್ಷರತಾ ಕೇಂದ್ರದಿAದ ಕುಪ್ಪೂರು ಗ್ರಾಮದಲ್ಲಿ ಶುಕ್ರವಾರ ಏರ್ಪಡಿಸಿದ್ದ ಜನ ಸುರಕ್ಷಾ ಅಭಿಯಾನ ಶಿಬಿರದಲ್ಲಿ ಅವರು ಮಾತನಾಡಿದರು.
ಮಹಿಳೆಯರು ಬ್ಯಾಂಕುಗಳಲ್ಲಿ ಸ್ವಸಹಾಯಗಳ ಮುಖಾಂತರ ಕಡಿಮೆ ಬಡ್ಡಿ ದರದಲ್ಲಿ ದೊರೆಯುವ ಸಾಲ ಪಡೆಯುವಂತೆ ಸಲಹೆ ನೀಡಿದರು.
ಆರ್ಥಿಕ ಸಾಕ್ಷರತಾ ಸಲಹೆಗಾರರಾದ ಆರ್.ಎಂ.ಕುಮಾರಸ್ವಾಮಿ ಮಾತನಾಡುತ್ತಾ ಹೊಸ ವರ್ಷದ ಪ್ರಯುಕ್ತ ಹಲವಾರು ಸಂದೇಶಗಳನ್ನು ಮೊಬೈಲ್ ಮುಖಾಂತರ ಸೈಬರ್ ಕಳ್ಳರು ಕಳುಹಿಸುತ್ತಿದ್ದು ಅವುಗಳನ್ನು ತಿರಸ್ಕರಿಸಬೇಕೆಂದು ಹಾಗೇನಾದರೂ ಆದಲ್ಲಿ 1930 ಕ್ಕೆ ಕರೆ ಮಾಡಬೇಕೆಂದು ತಿಳಿಸಿದರು,
ಕೆನರಾ ಬ್ಯಾಂಕಿನ ರಂಗಸ್ವಾಮಿ, ಸಂಜೀವಿನಿ ಒಕ್ಕೂಟದ ಅಧ್ಯಕ್ಷ ಹಾಗೂ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷಣಿಯಾದ ರೆಹನಾ ಬಾನು, ಸಂಜೀವಿನಿ ಒಕ್ಕೂಟದ ಎಲ್‌ಸಿಆರ್‌ಪಿ ಕಲ್ಪನ, ಆಶಾ ಕಾರ್ಯಕರ್ತೆ ಹೇಮಾವತಿ, ಪ್ರತಿನಿಧಿ ಮಂಜುಳಾ ಮುಂತಾದವರು ವೇದಿಕೆಯನ್ನು ಕುರಿತು ಮಾತನಾಡಿದರು. ಈ ಶಿಬಿರದಲ್ಲಿ ಕುಪ್ಪೂರು ಸ್ವಸಹಾಯ ಸಂಘದ ಸದಸ್ಯರು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

(Visited 1 times, 1 visits today)