ಕೊರಟಗೆರೆ: ತುಮಕೂರು ಅಥವಾ ನೆಲಮಂಗಲ ಸಮೀಪ ಅಂತರಾಷ್ಟಿçÃಯ ವಿಮಾನ ನಿಲ್ದಾಣ ಆಗ್ಬೇಕು. ಇದರ ಬಗ್ಗೆ ಗೃಹಸಚಿವ ಡಾ.ಜಿ.ಪರಮೇಶ್ವರ ಜೊತೆ ನಾನು ಈಗಾಗಲೇ ಚರ್ಚಿಸಿದ್ದೀನಿ. ನೀವೇನಾದ್ರು ಬೇರೆಕಡೆ ಮಾಡೋಕೆ ಪ್ರಯತ್ನ ಪಟ್ರೇ ನಮಗೇ ಹೆಚ್‌ಎಎಲ್ ನಿಲ್ದಾಣವೇ ಸಾಕು ಅಂತೀವಿ. ರಾಜ್ಯ ಸರಕಾರಕ್ಕೆ ನಾನು ಟ್ರಂಪ್‌ಕಾರ್ಡ್ ಕೊಟ್ಟಿದ್ದೀನಿ ಎಂದು ಕೇಂದ್ರ ರೈಲ್ವೆಖಾತೆ ಸಚಿವ ವಿ.ಸೋಮಣ್ಣ ತಿಳಿಸಿದರು.
ಕೊರಟಗೆರೆ ತಾಲೂಕು ಕೋಳಾಲದ 7ಗ್ರಾಪಂ ಮತ್ತು ಕಸಬಾ ಹೋಬಳಿಯ 6ಗ್ರಾಪಂ ವ್ಯಾಪ್ತಿಯ ಸಾರ್ವಜನಿಕರ ಕುಂದುಕೊರತೆ ಸಭೆ ಹಾಗೂ ಕೇಂದ್ರ ಸರಕಾರದ ಯೋಜನೆಯಡಿ ಬರುವ ಪಲಾನುಭವಿಗಳಿಗೆ ವಿವಿಧ ಇಲಾಖೆಯ ಸವಲತ್ತು ವಿತರಣೆ ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.
ಕೇಂದ್ರ ಹಣಕಾಸು ಮಂತ್ರಾಲಯ ರಾಜ್ಯ ಸರಕಾರಕ್ಕೆ 6310ಕೋಟಿ ಹಣ ಬಿಡುಗಡೆ ಮಾಡಿದೆ. ಭದ್ರಾಮೆಲ್ದಂಡೆ ಯೋಜನೆಯ ನೀರಾವರಿ ಯೋಜನೆಗೆ ನರೇಂದ್ರಮೋದಿ ಸರಕಾರ ಅಸ್ತು ಅಂದಿದೆ. ತುಮಕೂರು ಜಿಲ್ಲೆಯಲ್ಲಿ 4ದಿಕ್ಕಿನಲ್ಲಿಯು ಅಂತರಾಷ್ಟಿçÃಯ ಹೈವೇಗಳಿವೆ. 40ಸಾವಿರ ಎಕರೇ ಪ್ರದೇಶದಲ್ಲಿ ಇಂಡಸ್ಟಿçÃಯಲ್ ಏರಿಯಾ ಇದೆ. ತುಮಕೂರು ನಗರ ರಾಜಧಾನಿಗೆ ಹತ್ತಿರವಾಗಿ ಬೆಳೆಯುತ್ತೀದೆ. ಗೃಹಸಚಿವ ಡಾ.ಜಿ.ಪರಮೇಶ್ವರ ಹತ್ತಿರ ಇದರ ಬಗ್ಗೆ ಚರ್ಚೆ ಮಾಡಿದ್ದೀನಿ ಎಂದರು.
ನರೇAದ್ರಮೋದಿ ನಮ್ಮ ರಾಜ್ಯದ ರೈಲ್ವೆ ಯೋಜನೆಗೆ 5300ಕೋಟಿ ಅನುಧಾನ ಬಿಡುಗಡೆ ಮಾಡಿದ್ದಾರೇ. 2400ಕೋಟಿ ವೆಚ್ಚದ ನೆಲಮಂಗಲ ತುಮಕೂರಿನ 45ಕೀಮೀ ರಾಷ್ಟಿçÃಯ ಹೆದ್ದಾರಿ ಕಾಮಗಾರಿ ಫೇಬ್ರವರಿಯಿಂದ ಪ್ರಾರಂಭ ಆಗುತ್ತೇ. ತುಮಕೂರು ಜಿಲ್ಲೆಯಲ್ಲಿ 46ಸಾವಿರ ಜನ ವಿಶೇಷ ಚೇತನರು ಇದಾರೇ. 29ಸರಕಾರಿ ಇಲಾಖೆಯಲ್ಲಿಯು ಸಹ ಕೇಂದ್ರ ಸರಕಾರದ ಯೋಜನೆಯಿದೆ. ಶಿರಾ, ಮಧುಗಿರಿ, ಕೊರಟಗೆರೆ, ಪಾವಗಡ ಕ್ಷೇತ್ರಕ್ಕೆ ರಾಷ್ಟಿçÃಯ ಹೆದ್ದಾರಿ ವಿಸ್ತಾರ ಆಗಲಿದೆ ಎಂದು ಮಾಹಿತಿ ನೀಡಿದರು.
ತುಮಕೂರು ಜಿಲ್ಲೆಯ ಕೊಳವೆಬಾವಿಗಳ ಪ್ಲೋರೇಡ್ ನೀರಿನ ಬಗ್ಗೆ 15ದಿನಗಳ ಒಳಗೆ ನನಗೇ ಮಾಹಿತಿ ನೀಡಿ. ಕೇಂದ್ರದಿAದ ನಾನು ಪ್ರತಿ ಗ್ರಾಮಕ್ಕೆ 2ಶುದ್ದ ಕುಡಿಯುವ ನೀರಿನ ಘಟಕ ತರ್ತೀನಿ. ಕೊಳವೆಬಾವಿಯ ನೀರಿನ ಗುಣಮಟ್ಟದ ಬಗ್ಗೆ ದಯವಿಟ್ಟು ಪರಿಶೀಲನೆ ನಡೆಸಿ. ಬಡಜನರ ಜೀವನದ ಜೊತೆ ಚೆಲ್ಲಾಟ ಮಾಡಬೇಡಿ. 45ವರ್ಷದ ರಾಜಕೀಯ ಅನುಭವ ಜಿಲ್ಲೆಯ ಅಭಿವೃದ್ದಿಗೆ
ಮಾತ್ರ ಮೀಸಲು. 2ವರ್ಷ ನನಗೇ ಅವಕಾಶ ನೀಡಿ ಅಭಿವೃದ್ದಿಯ ರೂಪುರೇಷು ಬದಲು
ಮಾಡ್ತೀವಿ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ತುಮಕೂರು ನಗರ ಶಾಸಕ ಜ್ಯೋತಿಗಣೇಶ್, ಗ್ರಾಮಾಂತರ ಶಾಸಕ ಸುರೇಶಗೌಡ, ಮಾಜಿ ಶಾಸಕ ಪಿ.ಆರ್.ಸುಧಾಕರಲಾಲ್, ಬಿಜೆಪಿ ಮುಖಂಡ ಬಿ.ಹೆಚ್.ಅನಿಲ್‌ಕುಮಾರ್, ಬಿಜೆಪಿ ಮಂಡಲ ಅಧ್ಯಕ್ಷ ದರ್ಶನ್, ತುಮುಲ್ ನಿರ್ದೇಶಕ ಸಿದ್ದಗಂಗಯ್ಯ, ಮಾಜಿ ಜಿಪಂ ಸದಸ್ಯ ಶಿವರಾಮಯ್ಯ, ಮಧುಗಿರಿ ಎಸಿ ಕೊಟ್ಟೂರು ಶಿವಪ್ಪ, ಕೊರಟಗೆರೆ ತಹಶೀಲ್ದಾರ್ ಮಂಜುನಾಥ.ಕೆ, ತಾಪಂ ಇಓ ಅಪೂರ್ವ, ಗ್ರಾಪಂ ಅಧ್ಯಕ್ಷ ನಟರಾಜ್, ಶ್ರೀನಿವಾಸಮೂರ್ತಿ,
ಮಾವತ್ತೂರು ಮಂಜುನಾಥ ಸೇರಿದಂತೆ ಇತರರು ಇದ್ದರು.
ನರೇಂದ್ರ ಮೋದಿಯ ಪೋಟೋ ಏಕಿಲ್ಲ..?; ಅಧಿಕಾರಿಗಳೇ ಜಲಜೀವನ್ ಮೀಷನ್ ಕೇಂದ್ರ ಸರಕಾರದ ಯೋಜನೆ ಅಲ್ಲವೇ. ನಾನು ಕೇಂದ್ರ ಜಲಶಕ್ತಿ ಮಂತ್ರಿ ಎಂಬುದೇ ನಿಮಗೇ ಗೋತ್ತಿಲ್ಲವೇ. ತುಮಕೂರು ಜಿಲ್ಲೆಗೆ 2ಸಾವಿರ ಕೋಟಿಗೂ ಅಧಿಕ ಅನುಧಾನ ಬಂದಿದೆ. ಒಂದೇ ಒಂದು ಗ್ರಾಮದಲ್ಲಿ ಪ್ರಧಾನಿ ನರೇಂದ್ರಮೋದಿಯ ಒಂದೇ ಒಂದು ಪೋಟೊ ಹಾಕಿಲ್ಲ ಏಕೆ. ಮುಂದಿನ ಸಲ ನಾನು ಮಾತಿನಲ್ಲಿ ಹೇಳೋದಿಲ್ಲ ಪೇನ್‌ಪೇಪರ್ ಹಿಡಿತೀನಿ ಕಣ್ರಯ್ಯ ನೆನಪಿರಲಿ. ವಿನಂತಿ ಮಾಡೋದು ನನ್ನ ವಿಕ್‌ನೇಸ್ ಅಂದುಕೊಳ್ಳಬೇಡಿ. ಇಷ್ಟೇ ಈತನ ಯೋಗ್ಯತೆ ಅಂದುಕೊAಡ್ರೇ ನನ್ನ ಬಳಿ ಇನ್ನೂ ಬೇಕಾದಷ್ಟು ಬಾಂಬುಗಳಿವೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಎಚ್ಚರಿಕೆ ನೀಡಿದರು.
ನಾನು ಕಾರ್ಯಕ್ರಮ-ಸಭೆ ಮಾಡೋದಿಲ್ಲ..!: ನಾನು ಎಂಪಿ ಅನ್ನೋದನ್ನೇ ಅಧಿಕಾರಿಗಳು ಮರೆತು ಬಿಟ್ಟಿದ್ದಾರೇ. ಬಾಲಂಗೋಚಿಗಳ ಮಾತಿನಿಂದ ಅಧಿಕಾರಿವರ್ಗ ಎಡವಬೇಡಿ. ಟ್ರಾನ್ಸ್ಪಾರಂ ಬದಲಾವಣೆಗೆ 1ಲಕ್ಷ ಕೇಳ್ತಿರಂತೆ ಅಂತಾ ಜನ ಹೇಳ್ತಿದ್ದಾರೇ. ನಾನು ಇನ್ನೂ ಮುಂದೆ ತುಮಕೂರು ಜಿಲ್ಲೆಯಲ್ಲಿ ಯಾವುದೇ ಕಾರ್ಯಕ್ರಮ ಅಥವಾ ಸಭೆ ಮಾಡೋದಿಲ್ಲ. ತಹಶೀಲ್ದಾರ್, ತಾಪಂ ಇಓ, ರೇಷ್ಮೆ, ಕೃಷಿ, ತೋಟಗಾರಿಕೆ ಸೇರಿದಂತೆ ಗ್ರಾಪಂ ಕಚೇರಿಯಲ್ಲಿ ಬಂದು ಕುಳಿತುಕೊಳ್ತೀನಿ ನೆನಪಿರಲಿ ಎಂದು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆಯ ಸಂದೇಶ ನೀಡಿದರು. 300ಕ್ಕೂ ಅಧಿಕ ಜನರಿಗೆ ಸೌಲಭ್ಯ ವಿತರಣೆ: ತುಮಕೂರು ಜಿಲ್ಲಾಡಳಿತ, ಕೊರಟಗೆರೆ ಆಡಳಿತ, ತಾಪಂ, ಕೃಷಿ, ರೇಷ್ಮೆ, ತೋಟಗಾರಿಕೆ ಸೇರಿದಂತೆ ಹತ್ತಾರು ಇಲಾಖೆಗಳಿಂದ ಕೃಷಿವಿಕಾಸ, ತುಂತುರು ನೀರಾವರಿ, ರಾಷ್ಟಿçÃಯ ಜಾನುವಾರು ಮೀಷನ್, ನರೇಗಾ, ಅಲಿಂಕೋ ಸಾಧನಾದ ವಿಶೇಷ ಚೇತನರು ಸೇರಿ 300ಕ್ಕೂ ಅಧಿಕ ಪಲಾನುಭವಿಗಳಿಗೆ ಕೇಂದ್ರಸಚಿವ ವಿ.ಸೋಮಣ್ಣ ಕೇಂದ್ರ ಸರಕಾರದಿಂದ ಬರುವ ವಿವಿಧ ಸೌಲಭ್ಯಗಳನ್ನು ಕೋಳಾಲದಲ್ಲಿ ವಿತರಿಸಿದರು.