ತುಮಕೂರು: ಒರ್ವ ವ್ಯಕ್ತಿ ಪರಿಪೂರ್ಣ ವ್ಯಕ್ತಿತ್ವವನ್ನು ಹೊಂದಲು ನಾಲ್ಕು ಗೋಡೆಗಳ ಮದ್ಯೆ ಕಲಿಯುವ ಶಿಷ್ಠ ಶಿಕ್ಷಣದ ಜೊತೆಗೆ, ಜಾನಪದಿಂದ ಕಲಿಯುವ ಮಾನವೀಯ ಮೌಲ್ಯಗಳು ಅಗತ್ಯ ಎಂದು ಜಿಲ್ಲಾ ಪಂಚಾಯಿತಿ ಸಿಇಓ ಜಿ.ಪ್ರಭು ಅಭಿಪ್ರಾಯಪಟ್ಟಿದ್ದಾರೆ.
ತುಮಕೂರು ವಿವಿ ವಿಜ್ಞಾನ ಕಾಲೇಜಿನ ಸರ್.ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಕರ್ನಾಟಕ ಜಾನಪದ ಅಕಾಡೆಮಿ, ತುಮಕೂರು ವಿವಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜಾನಪದದ ನಡೆ, ವಿದ್ಯಾರ್ಥಿಗಳ ಕಡೆ ಎಂಬ ವಿಚಾರ ಸಂಕಿರಣ, ಜಾನಪದ ಗಾಯಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು,ಬದುಕಿಬೇಕಾದ ಶೇ45-50ರಷ್ಟು ಅನುಭವಗಳನ್ನು ಶಿಷ್ಠ ಶಿಕ್ಷಣದಿಂದ ಪಡೆದರೆ, ಶೇ35-40ರಷ್ಟು ಅಂಶಗಳನ್ನು ನಾವು ಸಮಾಜವನ್ನು ನೋಡುವುದರಿಂದ ಕಲಿಯುತ್ತೇವೆ.ಆದರೆ ಉಳಿದ 10ರಷ್ಟು ಅಂಶಗಳು ನಮಗೆ ಜಾನಪದದಿಂದ ಸಿಗುತ್ತವೆ.ನಮ್ಮ ನಡೆ, ನುಡಿ, ಆಚಾರ, ವಿಚಾರ ಎಲ್ಲದರ ಮೇಲೆ ಆಯಾಯ ಭಾಗದ ಜನಪದ ಆಚರಣೆಗಳ ಮೇಲೆ ಅವಲಂಬಿತವಾಗಿರುತ್ತವೆ ಎಂದರು.
ಜಗತ್ತಿನ ಬೇರೆ ದೇಶಗಳಿಗೆ ಹೊಲಿಸಿದರೆ ಭಾರತದ ದುಡಿಯವ ವಯಸ್ಸಿನ ಮಾನವ ಸಂಪನ್ಮೂಲಕ್ಕೆ ಇಡೀ ಪ್ರಪಂಚದಾದ್ಯAತ ಬೇಡಿಕೆ ಇದೆ. ಐದು ಸಾವಿರದಿಂದ 10 ಸಾವಿರ ವರ್ಷಗಳ ನಾಗರಿಕತೆಯ ಪರಂಪರೆಯನ್ನು ಹೊಂದಿರುವ ನಾವುಗಳು, ನಮ್ಮ ಮೂಲ ಬೇರುಗಳನ್ನು ಮರೆತು ಹೊಗುತ್ತಿರುವುದು ವಿಷಾದದ ಸಂಗತಿಯಾಗಿದೆ.ಐದು ಸಾವಿರ ವರ್ಷಗಳಿಂದ ನಮ್ಮನ್ನಾಳಿದ ರಾಜರುಗಳು, ಅವರು ಕಲೆ, ಸಾಹಿತ್ಯ, ಸಂಸ್ಕೃತಿ,ವಾಸ್ತುಶಿಲ್ಪಕ್ಕೆ ನೀಡಿದ ಕೊಡುಗೆಗಳನ್ನು ಜಗತ್ತಿನ ಮುಂದಿಡುವ ಪ್ರಯತ್ನವನ್ನು ನಾವು ಮಾಡಬೇಕಾಗಿದೆ. ಆ ಮೂಲಕ ನಮ್ಮ ಪೂರ್ವಜನರ ಸಾಧನೆಗಳನ್ನು ಜಗತ್ತಿಗೆ ಪರಿಚಯಿಸಿ, ಜಗತ್ತಿನ ಬೇರೆ ನಾಗರಿಕತೆಗಿಂತಲೂ ನಾವು ಮೇಲಿದ್ದೇವೆ ಎಂಬ ಸತ್ಯವನ್ನು ಸಾರಬೇಕಾದ ಅಗತ್ಯವಿದೆ ಎಂದು ಸಿಇಓ ಜಿ.ಪ್ರಭು ನುಡಿದರು.
ಲೇಖಕಿಯರ ಸಂಘದ ರಾಜ್ಯಾಧ್ಯಕ್ಷೆ ಡಾ.ಹೆಚ್.ಎಲ್.ಪುಷ್ಪ, ತುಮಕೂರು ವಿವಿ ಕುಲಸಚಿವರಾದ ಶ್ರೀಮತಿ ನಾಹಿದ ಜಮ್ಹ್.ಜಮ್ಹ್,ಜಾನಪದ ಅಕಾಡೆಮಿ ರಿಜಿಸ್ಟಾರ್ ಶ್ರೀಮತಿ ನಮ್ರತಾ, ತುಮಕೂರು ವಿವಿ ವಿಜ್ಞಾನ ಕಾಲೇಜು ಪ್ರಾಂಶುಪಾಲರಾದ ಡಾ.ಎಂ.ಪ್ರಕಾರ್ಶ ಶೆಟ್, ಪ್ರಾದ್ಯಾಪಕರಾದ ಡಾ.ನಾಗಭೂಷಣ್ ಬಗ್ಗನಡು,ಡಾ.ವೆಂಕಟರೆಡ್ಡಿ ರಾಮರೆಡ್ಡಿ, ಉಪಸ್ಥಿತರಿದ್ದರು.

(Visited 1 times, 1 visits today)