ತುಮಕೂರು: ಕಳೆದ ಐದು ದಿವಗಳಿಂದ ಕರ್ನಾಟಕ ನಾಟಕ ಅಕಾಡೆಮಿ ಹಾಗೂ ಗುಬ್ಬಿ ವೀರಣ್ಣ ಟ್ರಸ್ಟï ವತಿಯಿಂದ ನಡೆದ ಐದು ದಿವಸಗಳ ಹಾಸ್ಯ ಬ್ರಹ್ಮ ದಿ. ನರಸಿಂಹರಾಜು ನಾಟಕೋತ್ಸವಕ್ಕೆ ವಿದ್ಯುಕ್ತವಾಗಿ ತೆರೆ ಬಿತ್ತು.
ದಾಕ್ಷಾಯಿಣಿ ಭಟï ನಿರ್ದೇಶನದ ತಾಜï ಮಹಲï ಟೆಂರ್ಡ ನಾಟಕ ಪ್ರದರ್ಶಿಸುವ ಮೂಲಕ ನರಸಿಂಹರಾಜು ನಾಟಕೋತ್ಸವಕ್ಕೆ ತೆರ ಬಿತ್ತು. ಕಾರ್ಯಕ್ರಮದಲ್ಲಿ ಸಮಾರೋಪ ಭಾಷಣ ಮಾಡಿದ ಗುಬ್ಬಿ ವೀರಣ್ಣ ಟ್ರಸ್ಟï ನ ಅಧ್ಯಕ್ಷೆ ಬಿ. ಜಯಶ್ರೀ ಅವರು ನರಸಿಂಹರಾಜು ತುಂಬಿದ ಕೊಡ ಎಂದು ಶ್ಲಾಘಿಸಿದರು.
ನಾನು ನಾಲ್ಕು ವರ್ಷದ ಹುಡುಗಿಯಾಗಿz್ದÁಗ ನರಸಿಂಹರಾಜಣ್ಣನವರನ್ನು ನೋಡಿದ್ದು ಅವರು ರಂಗದ ಮೇಲೆ ಬಂದರೆAದರೆ ಜನ ನಗುತ್ತಿದ್ದರು ನಮ್ಮ ಕಂಪೆನಿಯಲ್ಲಿz್ದÁಗ ಅವರು ಹೆಚ್ಚು ಹಾಸ್ಯ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದರು ಎಂದರು.
ಗುಬ್ಬಿ ವೀರಣ್ಣನವರ ಹೆಸರಿನಲ್ಲಿ ಕಟ್ಟಿರುವ ರಂಗಮAದಿರದಲ್ಲಿ ಸಂಸ್ಕೃತಿ ಪರಂಪರೆಯನ್ನು ಉಳಿಸಲು ಇಲ್ಲಿಯವರೆಗೆ ಹಲವಾರು ನಾಟಕ ಗಳನ್ನು ಮಾಡಿದ್ದೀವಿ ಆದರೆ ಗುಬ್ಬಿಯ ಜನ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಂದು ನಾಟಕಗಳನ್ನು ಪ್ರೋತ್ಸಾಹಿಸುವ ಅವಶ್ಯಕತೆ ಇದೆ ಎಂದ ಅವರು ನರಸಿಂಹರಾಜು ಅವರು ನೋವು ನಲಿವನ್ನು ಸಮಾನವಾಗಿ ಸ್ವೀಕರಿಸುತ್ತಿದ್ದವರು ಎಂದರು.
ಕರ್ನಾಟಕ ನಾಟಕ ಅಕಾಡೆಮಿ ವತಿಯಿಂದ ಕಳೆದ ಐದು ದಿವಸಗಳಿಂದ ಯಶಸ್ವಿಯಾಗಿ ನಾಟಕೋತ್ಸವ ಮುಕ್ತಾಯವಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ನಾಟಕ ಪ್ರದರ್ಶಿಸುವ ಇರಾದೆ ವ್ಯಕ್ತಪಡಿಸಿದರು.
ಹಾಗೆಯೇ ಬೆಂಗಳೂರಿನಲ್ಲಿ 8 ದಿವಸಗಳ ಕಾಲ ರಾಷ್ಟಿçÃಯ ನಾಟಕೋತ್ಸವ ಆಯೋಜಿಸಲಾಗುತ್ತಿದೆ. ಈ ನಾಟಕೋತ್ಸವದಲ್ಲಿ ರಷ್ಯದಿಂದ ಕೂಡ ತಂಡವೊAದು ಪ್ರದರ್ಶನ ನೀಡಲಿದೆ ಎಂದರು. ಕಾರ್ಯತಕ್ರಮದಲ್ಲಿ ನಾಟಕ ಅಕಾಡೆಮಿ ಸದಸ್ಯ ರವಿ ಸಿರಿವರ, ನಾಟಕದ ನಿರ್ದೇಶಕಿ ದಾಕ್ಷಾಯಣಿ ಭಟï ಉಪಸ್ಥಿತರಿದ್ದರು.
(Visited 1 times, 1 visits today)