ತುಮಕೂರು; ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕ ತುಮಕೂರು ಇವರ ವತಿಯಿಂದ ಚೊಚ್ಚಲ ಬಾರಿಗೆ ಕಲ್ಪತರು ನಗರಿ ತುಮಕೂರಿನಲ್ಲಿ ರಾಜ್ಯಮಟ್ಟದ 39ನೇ ಪತ್ರಕರ್ತರ ಸಮ್ಮೇಳನವನ್ನು ನಡೆಸಲು ನಿಶ್ಚಯಿಸಿದ್ದು ಈಗಾಗಲೇ ನಿರೀಕ್ಷೆಗೂ ಮೀರಿದ ಸಿದ್ಧತೆಗಳನ್ನ ಕೈಗೊಳ್ಳಲಾಗಿದ್ದು ಕಲ್ಪತರು ನಾಡಿನಲ್ಲಿ ನಡೆಯುವ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನ ಅರ್ಥಗರ್ಭಿತವಾಗಿ ನಡೆಯಬೇಕಿದೆ ಎಂದು ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ತಿಳಿಸಿದರು.
ನಗರದ ಎಸ್‌ಎಸ್‌ಐಟಿ ಕಾಲೇಜು ಕ್ಯಾಂಪಸ್ ಆವರಣದ ಸ್ಟೇಪ್ ಬಿಲ್ಡಿಂಗ್ ಸಭಾಂಗಣದಲ್ಲಿ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನದ ಕುರಿತಾಗಿ ತುಮಕೂರು ಜಿಲ್ಲಾ ಘಟಕದ ವಿವಿಧ ಉಪ ಸಮಿತಿಗಳ ಸಿದ್ಧತೆ ಮತ್ತು ಕಾರ್ಯವೈಕರಿಗಳ ಬಗ್ಗೆ ಚರ್ಚೆ ನಡೆಸಲು ಕರೆದಿದ್ದ ಸಭೆಯಲ್ಲಿ ಮಾತನಾಡಿದ ಅವರು ಶ್ರೇಷ್ಠತೆಗಳಲ್ಲಿ ವಿಶೇಷತೆ ಎನಿಸಿರುವ ತುಮಕೂರು ಜಿಲ್ಲೆಯು ಶೈಕ್ಷಣಿಕ, ಕಲೆ, ಸಾಹಿತ್ಯ, ರಂಗಭೂಮಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತನ್ನದೇ ಆದ ಸಾಧನೆಯನ್ನು ತನ್ನ ಮುಡಿಗೇರಿಸಿಕೊಂಡಿದೆ ಅದೇ ನಿಟ್ಟಿನಲ್ಲಿ ಈ ಬಾರಿ ಇಲ್ಲಿ ನಡೆಯುವ 39ನೇ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನವೂ ಕೂಡ ಇತಿಹಾಸದ ಮೈಲಿಗಲ್ಲು ಆಗಲಿದ್ದು ಅದಕ್ಕೆ ತಕ್ಕಂತಹ ಸಿದ್ಧತೆಗಳನ್ನು ಜಿಲ್ಲಾ ಸಂಘಟನೆ ಕೈಗೊಳ್ಳಬೇಕಿದೆ ಎಂದು ತಿಳಿಸಿದರು.
ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಚೀನಿ ಪುರುಷೋತ್ತಮ್ ಅವರು ಮಾತನಾಡಿದರು. ಸಂದರ್ಭದಲ್ಲಿ ವಸತಿ, ಊಟ, ಸಾರಿಗೆ, ಪ್ರಚಾರ, ಸ್ವಯಂ ಸೇವೆ, ಸಾಂಸ್ಕೃತಿಕ, ನೋಂದಣಿ ಸೇರಿದಂತೆ ವಿವಿಧ ಉಪಸಮಿತಿಗಳ ಅಧ್ಯಕ್ಷರುಗಳು ತಾವು ಕೈಗೊಂಡಿರುವ ಸಿದ್ಧತೆಗಳ ಬಗ್ಗೆ ಸಭೆಗೆ ತಿಳಿಸಿಕೊಟ್ಟರು, ಈ ವೇಳೆ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷರಾದ ಭವಾನಿಸಿಂಗ್, ಪುಂಡಲಿಕ ಬಾಳೋಜಿ, ಪ್ರಧಾನ ಕಾರ್ಯದರ್ಶಿಗಳಾದ ಜಿ.ಸಿ. ಲೋಕೇಶ್, ಇತರರು ಉಪಸ್ಥಿತರಿದ್ದರು.
(Visited 1 times, 1 visits today)