ತುಮಕೂರು: ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಇತ್ತೀಚೆಗೆ ನಿಧನರಾದ ಹಿರಿಯ ಕಾಂಗ್ರೆಸ್ ಮುಖಂಡರುಗಳಾದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಹಾಗು ಮಾಜಿ ಶಾಸಕ ಆರ್.ನಾರಾಯಣ್ ಅವರುಗಳಿಗೆ ಶ್ರದ್ಧಾಂಜಲಿ ಹಾಗು ಜನವರಿ 21 ರಂದು ಬೆಳಗಾವಿಯಲ್ಲಿ ನಡೆಯಲಿರುವ ಜೈ ಬಾಪು,ಜೈ ಅಂಬೇಡ್ಕರ್ ಮತ್ತು ಜೈ ಸಂವಿಧಾನ ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಚಂದ್ರಶೇಖರ ಗೌಡ ಅವರ ಅಧ್ಯಕ್ಷತೆಯಲ್ಲಿ ಕರೆಯಲಾಗಿತ್ತು.
ಕಾರ್ಯಕ್ರಮದಲ್ಲಿ ಅಗಲಿದ ಗಣ್ಯರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಲಾಯಿತು.ಈ ವೇಳೆ ಮಾತನಾಡಿದ ಮುಖಂಡರಾದ ಇಕ್ಬಾಲ್ ಅಹಮದ್,ಇಡೀ ಪ್ರಪಂಚವೇ ಹಣದುಬ್ಬರದಿಂದ ತಲ್ಲಣಿಸಿದ್ದ ಸಂದರ್ಭದಲ್ಲಿ ಭಾರತ ಮಾತ್ರ ಇದರ ಹೊಡೆತಕ್ಕೆ ಸಿಕ್ಕದೆ ಸುರಕ್ಷಿತವಾಗಿರಲು ಹಣಕಾಸು ತಜ್ಞರಾದ ಮನಮೋಹನ್ ಸಿಂಗ್ ಅವರ ದೂರದೃಷ್ಟಿಯೇ ಕಾರಣ.ಐಎಂಎಫ್ ಅಧ್ಯಕ್ಷರಾಗಿ,ರಾಷ್ಟಿçÃಯ ನೀತಿ ಆಯೋಗದ ಅಧ್ಯಕ್ಷರಾಗಿ, ಆರ್.ಬಿ.ಐ ಗೌರ್ನರ್ ಆಗಿ,ಹಣಕಾಸು ಸಚಿವರಾಗಿ ಅವರು ಮಾಡಿದ ಸುಧಾರಣೆಗಳು ಇಡೀ ವಿಶ್ವಕ್ಕೆ ಮಾದರಿಯಾಗಿವೆ.ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿ ಯಾಗಿದ್ದ ಸಂದರ್ಭದಲ್ಲಿ ತೆಗೆದುಕೊಂಡು ನಿರ್ಧಾರದ ಫಲವಾಗಿ ಇಂದು ಕರ್ನಾಟಕ ಐಟಿ,ಬಿಟಿ ಹಬ್ ಆಗಿ ಬೆಳೆದಿದೆ. ಶಾಸಕರಾಗಿ,ಕರ್ನಾಟಕ ಗೃಹಮಂಡಳಿ ಅಧ್ಯಕ್ಷರಾಗಿ ಆರ್.ನಾರಾಯಣ್ ನಮಗೆಲ್ಲ ಮಾದರಿಯಾಗಿದ್ದಾರೆ. ಇಂತಹವರು ಕಾಂಗ್ರೆಸ್ ಮುಖಂಡರಾಗಿದ್ದ ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ ಎಂದರು.ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷ ಕೆಂಚಮಾರಯ್ಯ ಮಾತನಾಡಿ,ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಈ ಈ ವೇಳೆ ಮುಖಂಡರಾದ ಕೆಂಪಣ್ಣ, ಸುಲ್ತಾನ್ ಮಹಮದ್, ಫೈಯಾಜ್, ಕೆಂಪರಾಜು, ಸಂಜೀವಕುಮಾರ್, ಜ್ವಾಲಮಾಲಾ ರಾಜಣ್ಣ,ಅನಿಲ್‌ಕುಮಾರ್, ರಂಗಶಾಮಣ, ನರಸೀಯಪ್ಪ, ಲಿಂಗರಾಜು, ಸುಜಾತ, ಕಾವ್ಯ, ಸೌಭಾಗ್ಯ, ಆದಿಲ್, ಕೈದಾಳ ರಮೇಶ್. ನ್ಯಾತೇಗೌಡ, ಸೇವಾದಳದ ಮುಖಂಡರುಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.

(Visited 1 times, 1 visits today)