ತುರುವೇಕೆರೆ: ತಾಲೂಕಿನ ಮಾಯಸಂದ್ರ ಹೋಬಳಿಯ ಸೀಗೆಹಳ್ಳಿ ಮಜರೆ ಚಟ್ಟನಹಳ್ಳಿ ಗ್ರಾಮದ ಶ್ರೀ ಹನುಮಂತರಾಯ ಮತ್ತು ಶ್ರೀ ನರಸಿಂಹಸ್ವಾಮಿ ದೇವಾಲಯವನ್ನು ಉಳಿಸಿ ಮತ್ತು ದೇವಸ್ಥಾನದ ಆಸ್ತಿಯನ್ನು ಸರ್ಕಾರವು ವಶಕ್ಕೆ ಪಡೆಯುವಂತೆ ಚಟ್ಟನಹಳ್ಳಿ ಗ್ರಾಮಸ್ಥರು ತಾಲೂಕಿನ ದಂಡಾಧಿಕಾರಿಯಾದ ಕುಂ.ಞ. ಅಹಮ್ಮದ್ ರವರಿಗೆ ಮನವಿ ಮಾಡಿದರು.
ಚಟ್ಟನಹಳ್ಳಿ ಗ್ರಾಮಕ್ಕೆ ಗ್ರಾಮಸ್ಥರ ಮನವಿ ಮೇರೆಗೆ ಆಗಮಿಸಿದ ತಹಶೀಲ್ದಾರ್ ರವರಿಗೆ ಗ್ರಾಮಸ್ಥರು ತಮ್ಮ ಮನವಿ ಸಲ್ಲಿಸುವ ಮೂಲಕ ಗ್ರಾಮದಲ್ಲಿ ಪುರಾತನ ಕಾಲದ ಇತಿಹಾಸವುಳ್ಳ ಶ್ರೀ ಹನುಮಂತರಾಯ ಸ್ವಾಮಿ ಮತ್ತು ಶ್ರೀ ನರಸಿಂಹ ಸ್ವಾಮಿ ದೇವಾಲಯವು, ಧಾರ್ಮಿಕ ದತ್ತಿ ಮುಜರಾಯಿ ಇಲಾಖೆಗೆ ಸೇರಿದೆ. ವೆಂಕಟೇಶ ಎಂಬುವನು ಶ್ರೀ ಹನುಮಂತರಾಯ ದೇವರಿಗೆ ಅರ್ಚಕನಾಗಿ, ಗಣೇಶ ಎಂಬುವನು ಶ್ರೀ ನರಸಿಂಹಸ್ವಾಮಿ ದೇವಾಲಯದ ಅರ್ಚಕನಾಗಿ ಸರ್ಕಾರ ನೇಮಿಸುತ್ತದೆ ಎಂದರು. ಈ ಸಂದರ್ಭದಲ್ಲಿ ಮಾಯಸಂದ್ರ ಆರ್.ಐ. ರಂಗಸ್ವಾಮಿ. ಕಸಬಾ ಶಿವಕುಮಾರ್. ಗ್ರಾಮ ಲೆಕ್ಕಾಧಿಕಾರಿ ಸತೀಶ್ ಮತ್ತು ಗುಡಿಗೌಡರಾದ ನಾರಾಯಣ. ಪಟೇಲರಾದ ನಾರಾಯಣ. ಯುವ ಮುಖಂಡ ಗಂಗಣ್ಣ. ವಿಶ್ವನಾಥ್. ವೆಂಕಟೇಶ್. ಮಗ್ಗದಪಾಳ್ಯ ಗಂಗಣ್ಣ ಮಾಜಿ ಗ್ರಾಫಂ ಅಧ್ಯಕ್ಷರು. ಸೇರಿದಂತೆ ಮಗ್ಗದ ಪಾಳ್ಯ ಚಟ್ಟನಹಳ್ಳಿ ಗ್ರಾಮದ ಮಹಿಳೆಯರು, ಇದ್ದರು.

(Visited 1 times, 1 visits today)