ಹುಳಿಯಾರು: ಹುಳಿಯಾರು ಹೋಬಳಿಯ ಗೋಪಾಲಪುರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತಿಚೆಗೆ ಮಕ್ಕಳ ಸಂತೆ ಏರ್ಪಡಿಸಲಾಗಿತ್ತು. ಈ ಭಾಗದ ಪ್ರಮುಖ ವಾಣಿಜ್ಯ ಬೆಳೆಗಳಾದ ಹುರುಳಿಕಾಳು, ಅವರೆಕಾಯಿ ಮಾರಾಟ ಗಮನ ಸೆಳೆಯುವ ಜೊತೆಗೆ ಹೆಚ್ಚು ಮಾರಾಟವಾಯಿತು. ಶಾಲೆಯ ಮುಖ್ಯಶಿಕ್ಷಕಿ ನಾಗರತ್ನಮ್ಮ ಮಾತನಾಡಿ ನಾಲ್ಕು ಗೋಡೆಗಳ ಮದ್ಯೆ ಕಲಿಯುವ ಪಾಠ ಜ್ಞಾನಾರ್ಜನೆ ನೀಡಿದರೆ ಅನುಭವ ಕಲಿಸುವ ಪಾಠ ಜೀವನಕ್ಕೆ ಉಪಯುಕ್ತವಾಗುತ್ತದೆ. ಶೈಕ್ಷಣಿಕ ಹಂತದಲ್ಲಿ ವ್ಯವಹಾರ ಜ್ಞಾನ ಕಲಿತರೆ ಮುಂದೆ ಜೀವನ ನಿರ್ವಹಣೆಗೆ ನೆರವಾಗುತ್ತದೆ. ಈ ನಿಟ್ಟಿನಲ್ಲಿ ಶಾಲೆಯಲ್ಲಿ ಮಕ್ಕಳ ಸಂತೆ ಏರ್ಪಡಿಸಿರುವುದಾಗಿ ತಿಳಿಸಿದರು. ಮಕ್ಕಳ ಸಂತೆಯಲ್ಲಿ ವಿದ್ಯಾರ್ಥಿಗಳು ತೆಂಗಿನ ಕಾಯಿ, ಎಳನೀರು, ತರಕಾರಿ, ಸೊಪ್ಪು, ಚರುಮುರಿ, ಚಾಕ್ಲೇಟ್, ಬಿಸ್ಕೇಟ್ ಸೇರಿದಂತೆ ವಿವಿಧ ಅಂಗಡಿಗಳನ್ನು ಹಾಕಿದ್ದರು. ಕೆಲವು ವಿದ್ಯಾರ್ಥಿಗಳು ತಮ್ಮ ಮನೆಯಲ್ಲಿ ಬೆಳೆಯುವ ಅವರೆಕಾಯಿ, ಹುರುಳಿಕಾಯಿ, ಅಲಸಂದೆ, ರಾಗಿ ಮುಂತಾದವುಗಳನ್ನು ಸಂತೆಯಲ್ಲಿ ಇಟ್ಟು ಸಾರ್ವಜನಿಕರ ಗಮನ ಸೆಳೆದು, ಉತ್ತಮ ವ್ಯಾಪಾರ ಮಾಡಿದರು. ಶಾಲೆಯ ಶಿಕ್ಷಕಿ ಯರು ತಮಗಿಷ್ಟವಾದ ವಸ್ತುಗಳನ್ನು ಖರೀದಿಸಿದರು.
(Visited 1 times, 1 visits today)