ತುಮಕೂರು: ಮಾಧ್ಯಮ ಕ್ಷೇತ್ರ ಇಂದು ಬೃಹದಾಕಾರವಾಗಿ ಬೆಳೆದಿದ್ದು ಕ್ಷಣ ಕ್ಷಣದ ಸುದ್ದಿಗಳನ್ನು ಕಣ್ಮುಂದೆ ತರುವಂತಹ ತಾಂತ್ರಿಕ ವ್ಯವಸ್ಥೆಗಳು ಬಂದಿರುವ ಕಾಲಘಟ್ಟದಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಣೆ ಮಾಡುವ ಪತ್ರಕರ್ತರು ಪ್ರಜಾಪ್ರಭುತ್ವದ ಆಶಯಗಳು ಸವಿಂಧಾನದ ಮೌಲ್ಯಗಳನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಸುದ್ದಿಗಳನ್ನು ಬರೆಯಬೇಕು ಸುದ್ದಿ ನೀಡುವ ಬರದಲ್ಲಿ ಸತ್ಯವನ್ನು ಮರೆಮಾಚಿ ಊಹಾಪೋಹದ ಸುಳ್ಳು ಸುದ್ದಿಗಳನ್ನು ನೀಡಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
ತುಮಕೂರು ನಗರದ ಶ್ರೀ ಸಿದ್ದಾರ್ಥ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ 39ನೇ ರಾಜ್ಯಮಟ್ಟದ ಪತ್ರಿಕರ್ತರ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಸಿದ್ದರಾಮಯ್ಯ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಅಂದು ಅಂಬೇಡ್ಕರ್ ಮತ್ತು ಗಾಂಧಿಯವರು ಪತ್ರಿಕೋದ್ಯಮದ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವವನ್ನು ಹೊಂದಿದ್ದಾರೆ ಅವರುಗಳಿಂದ ಪ್ರೇರಣೆಯಾದ ನಾವುಗಳು ಮೌಲ್ಯಯುತ ಸುದ್ದಿಗಳನ್ನು ಜನರಿಗೆ ನೀಡಬೇಕು ಸತ್ಯವಾದ ಘಟನೆಯನ್ನು ಪರಿಶೀಲಿಸಿ ಪರಮರ್ಶೆ ಮಾಡಿ ಸುಳ್ಳು ಸುದ್ದಿಗಳಿಗೆ ಆಸ್ಪದ ನೀಡದೆ ಜನರಿಗೆ ನೈಜ್ಯವಾದ ವರದಿಯನ್ನು ನೀಡಬೇಕು ಪತ್ರಕರ್ತರು ಸರ್ಕಾರಗಳನ್ನು ಟೀಕೆ ಮಾಡುವ ಭರದಲ್ಲಿ ಆರೋಗ್ಯಕರ ಜನಪರ ಮತ್ತು ಸಮಾಜಮುಖಿಯಾದ ಟೀಕೆ ಮಾಡಬೇಕುಈ ರೀತಿಯಲ್ಲಿ ಪತ್ರಕರ್ತರು ತಮ್ಮ ವೃತ್ತಿ ಮೌಲ್ಯದ ಕರ್ತವ್ಯಗಳನ್ನು ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.
ಸ್ಪರ್ಧಾತ್ಮಕ ಜಗತ್ತಿನಲ್ಲಿ ಪತ್ರಕರ್ತರು ಅತಿ ಬೇಗ ಸುದ್ದಿಗಳನ್ನು ನೀಡುವ ತವಕದಲ್ಲಿ ಊಹಾಪೋಹದ ಸುಳ್ಳು ಸುದ್ದಿಗಳು ನೀಡುತ್ತಿದ್ದು ಇದು ಅಪಾಯಕಾರಿಯಾದ ಬೆಳವಣಿಗೆಯಾಗಿದೆ ಪತ್ರಿಕೆಗಳ ಬಗ್ಗೆ ಇರುವ ಸವಾಲುಗಳ ಬಗ್ಗೆ ಅರಿತು ಪತ್ರಕರ್ತರು ಮುನ್ನಡೆಯಬೇಕಾಗಿದೆ, ಅಂಬೇಡ್ಕರ್ ಅವರು ತಿಳಿಸಿದಂತೆ ನಮ್ಮ ದೇಶದಲ್ಲಿ ಅಸಮಾನತೆ ಇದ್ದು ಚಾತುರ್ವರ್ಣದ ಜಾತಿ ವ್ಯವಸ್ಥೆ ಇನ್ನೂ ಜೀವಂತದಲ್ಲಿದೆ ಅಂದು ಅನೇಕ ಕೃತಿ ಕವನ ಮತ್ತು ಲೇಖನಗಳಲ್ಲಿ ಜಾತಿ ವ್ಯವಸ್ಥೆಗಳ ಬಗ್ಗೆ ಅನೇಕರು ವಿವರಣೆ ನೀಡಿದ್ದು ಇದರ ಬಗ್ಗೆ ನಾವೆಲ್ಲ ತಿಳಿದು ಕೊಳ್ಳಬೇಕು, ಈ ನಿಟ್ಟಿನಲ್ಲಿ ಪತ್ರಕರ್ತರು ಅಧ್ಯಾಯಶೀಲರಾಗಬೇಕು ಎಂದು ತಿಳಿಸಿದರು.
ಭಾರತ ದೇಶ ವಿವಿಧತೆಗಳಲ್ಲಿ ಏಕತೆಯನ್ನು ಹೊಂದಿರುವ ದೇಶವಾಗಿದ್ದು ವೈಚಾರಿಕತೆಯ ಈ ನೆಲಗಟ್ಟಿನಲ್ಲಿ ಅಸಮಾನತೆ ಹೋಗಲಾಡಿಸದೆ ಹೋದರೆ ಪ್ರಜಾಪ್ರಭುತ್ವದ ಧ್ವಂಸವಾಗುತ್ತದೆ, ಪತ್ರಕರ್ತರು ಮತ್ತು ರಾಜಕಾರಣಿಗಳು ಕೂಡ ಮನಗಳಬೇಕಾಗಿದ್ದು ಧ್ವನಿ ಇಲ್ಲದವರ ಬಗ್ಗೆ ಮಾಧ್ಯಮ ಧ್ವನಿ ಆಗಬೇಕು ಅನ್ಯಾಯದಿಂದ ತುಳಿತ ಕೊಳಗಾದವರ ಪರವಾಗಿ ಪತ್ರಕರ್ತರು ನಿಲ್ಲಬೇಕು ಇಂತಹ ಗುರುತರವಾದ ಜವಾಬ್ದಾರಿ ನಿಮ ಮೇಲಿದ್ದು ಇದರ ಬಗ್ಗೆ ಪತ್ರಕರ್ತರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು. ಪತ್ರಕರ್ತರ ಮೂಢನಂಬಿಕೆಗಳನ್ನು ನಂಬಬಾರದು ನಮ್ಮ ಸಮಾಜದಲ್ಲಿ ಎಂದಿಗೂ ಮೌಡ್ಯಾಚಾರ ಕಂದಾಚಾರ ಮೌಢ್ಯತೆಗಳು ಜಾರಿಯಲ್ಲಿದ್ದು ಸಮಾಜವನ್ನು ತಿದ್ದುವ ಪತ್ರಕರ್ತರುಗಳು ಇಂತಹವುಗಳನ್ನು ನಂಬಬಾರದು ಇದಕ್ಕೆ ಪೂರಕವಾದ ಸುದ್ದಿಗಳನ್ನು ಪರಿಶೀಲಿಸಬೇಕು ನನಗೂ ಕೂಡ ಈ ತರಹದ ಅನುಭವವಾಗಿದ್ದು ಮುಖ್ಯಮಂತ್ರಿ ಸ್ಥಾನ ಕಳೆದು ಹೋಗುತ್ತದೆ ಎಂದು ಚರ್ಚೆಗಳು ನಡೆಯುತ್ತಿರುವ ಬರದಲ್ಲಿ ನಾನು 15 ಬಾರಿ ಚಾಮರಾಜನಗರಕ್ಕೆ ಹೋಗಿದ್ದೇನೆ ಆದರೆ ಏನು ಆಗಲಿಲ್ಲ, ನನ್ನ ಕಾರಿನ ಮೇಲೆ ಕಾಗೆ ಕೂತಿಕೊಂಡು ಮುಖ್ಯಮಂತ್ರಿ ಸ್ಥಾನಕ್ಕೆ ಕುತ್ತು ಉಂಟಾಗುತ್ತದೆ ಎಂದು ಜ್ಯೋತಿಷಿಗಳು ಹೇಳಿದರು ಅದು ಯಾವುದು ನಡೆಯಲಿಲ್ಲ ಇದನ್ನ ನಂಬದ ನಾನು ಇವರಿಗೂ ಸುಮಾರು 18 ಬಜೆಟ್ ಗಳನ್ಮ ಮಂಡಿಸಿದ್ದು 2026 ಬಜೆಟ್ ನ್ನು ನಾನೇ ಮಂಡಿಸಲಿದ್ದೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು. ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಮಾತನಾಡಿದರು. ಬೆಳಗ್ಗೆ 9 ಗಂಟೆಗೆ ನಗರದ ಟೌನ್ ಹಾಲ್ ವೃತ್ತದಿಂದ ಸಿದ್ಧತಾ ತಾಂತ್ರಿಕ ಮಹಾವಿದ್ಯಾಲಯದ ಆವರಣದವರೆಗೂ ವಿವಿಧ ಕಲಾತಂಡಗಳು ತಮಟೆ ವಾದ ಸಂಗೀತ ನೃತ್ಯಗಳೊಂದಿಗೆ ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ ಪತ್ರಕರ್ತರೊಂದಿಗೆ ಹೆಜ್ಜೆ ಹಾಕಿದ ಮೆರವಣಿಗೆ 10 ಹಲವು ವಿಶೇಷತೆ ಗಳಿಗೆ ಸಾಕ್ಷಿ ಆಯಿತು. ಮುಖ್ಯಮಂತ್ರಿಗಳು 11:30ಕ್ಕೆ ಸರಿಯಾಗಿ ಸಮ್ಮೇಳನ ನಡೆಯುತ್ತಿರುವ ಆವರಣಕ್ಕೆ ಆಗಮಿಸಿದ್ದರು ಮೊದಲಿಗೆ ಸಮ್ಮೇಳನದ ಭಾಗವಾಗಿ ಆ ಯೋಜನೆ ಮಾಡಲಾಗಿದ್ದ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಹಳೆಯ ಕ್ಯಾಮೆರಾಗಳು ಸೇರಿದಂತೆ ಸುಮಾರು 120 ವರ್ಷಗಳ ಹಳೆಯ ಪತ್ರಿಕೆಗಳನ್ನು ಮತ್ತು ವ್ಯಂಗ್ಯ ಛಾಯಾಚಿತ್ರಗಳನ್ನು ವೀಕ್ಷಿಸುವ ಮೂಲಕ ರಾಜ್ಯದ ವಿವಿಧ ಮೂಲೆಗಳ ವೃತ್ತ ಪತ್ರಿಕೆಗಳು ಮತ್ತು ತುಮಕೂರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಿ ಪರಮೇಶ್ವರ್ ಅವರು ಸಾಥ್ ನೀಡಿದರು.ಶಾಸಕಜಯಚಂದ್ರ, ಶಾಸಕರುಗಳಾದ ಜ್ಯೋತಿ ಗಣೇಶ್, ಕರ್ನಾಟಕ ಸಾರಿಗೆ ಸಂಸ್ಥೆ ನಿಗಮದ ಅಧ್ಯಕ್ಷ ಎಸ್ ಆರ್ ಶ್ರೀನಿವಾಸ್, ಶಾಸಕ ಷಡಕ್ಷರಿ ಎಚ್ ವಿ ವೆಂಕಟೇಶ್ ವಿ.ಪ. ಸದಸ್ಯರುಗಳಾದ ಆರ್ ರಾಜೇಂದ್ರ ಚಿದಾನಂದ್ ಎಂ ಗೌಡ ತುಮಕೂರು ಜಿಲ್ಲಾಧಿಕಾರಿಗಳಾದ ಶುಭ ಕಲ್ಯಾಣ, ಸಿ ಇ ಓ ಪ್ರಭು, ಎಸ್ ಪಿ ಕೆ ವಿ ಅಶೋಕ್, ಕಾರ್ಯನಿರತ ಪತ್ರಕರ್ತರ ಸಂಘದ ರಾಷ್ಟ್ರೀಯ ಅಧ್ಯಕ್ಷ ಬಿವಿ ಮಲ್ಲಿಕಾರ್ಜುನ್, ಮದನ್ ಗೌಡ , ತುಮಕೂರು ಜಿಲ್ಲಾಧ್ಯಕ್ಷ ಪುರುಷೋತ್ತಮ್ ಪ್ರಧಾನ ಕಾರ್ಯದರ್ಶಿ ರಘುರಾಮ್ ಸೇರಿದಂತೆ ಕಾನಿಪ ಪದಾಧಿಕಾರಿಗಳು ವಿವಿಧ ಜಿಲ್ಲೆಯ ಪತ್ರಕರ್ತರು ಉಪಸ್ಥಿತರಿದ್ದರು.

(Visited 1 times, 1 visits today)