ಹುಳಿಯಾರು: ಹುಳಿಯಾರಿನ ಕೇಶವ ವಿದ್ಯಾ ಮಂದಿರ ಶಾಲೆಯಲ್ಲಿ ವಿಶೇಷವಾಗಿ ಗೋಮಾತೆ ಪೂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಶಾಲಾ ಅಧ್ಯಕ್ಷರಾದ ಟಿ.ಜಯಣ್ಣನವರು ಮಾತನಾಡಿ ಇತ್ತೀಚಿನ ದಿನಗಳಲ್ಲಿ ಶ್ರಮಿಕ ಸಂಸ್ಕöÈತಿ ಕಡಿಮೆಯಾಗುತ್ತಾ ಬರುತ್ತಿದ್ದು ಬರೀ ಯಾಂತ್ರಿಕ ವಿಧಾನ ಉಂಟಾಗಿ ಸಂಸ್ಕöÈತಿ ನಾಶದತ್ತ ಸಾಗುತ್ತಿದೆ ಹಾಗೂ ಕರ್ನಾಟಕ ಸಂಸ್ಕöÈತಿಯು ಅವನತಿ ಹತ್ತಿರ ಹೋಗುತ್ತಿದೆ. ಈ ನಿಟ್ಟಿನಲ್ಲಿ ಕೇಶವ ವಿದ್ಯಾ ಮಂದಿರ ಶಾಲೆಯಲ್ಲಿ ಸಂಸ್ಕöÈತಿಯನ್ನು ಬಿಂಬಿಸುವAತಹ ಕಾರ್ಯಕ್ರಮವನ್ನು ಶಿಕ್ಷಕ ಮಿತ್ರರು ಪ್ರತಿವರ್ಷ ಆಚರಣೆ ಮಾಡುತ್ತಿರುವುದು ಶ್ಲಾಘಿನೀಯ ಎಂದರು.
ನಿವೃತ್ತ ಉಪನ್ಯಾಸಕ ಶ್ರೀಕಂಠಮೂರ್ತಿರವರು ಮಾತನಾಡಿ ಪ್ರಕೃತಿಯಲ್ಲಿ ಬದಲಾವಣೆ ಅನಿವಾರ್ಯ. ಇನ್ನು ಮುಂದೆ ಕತ್ತಲು ಕಡಿಮೆ ಬೆಳಕು ಜಾಸ್ತಿ ಎಂದು ತಿಳಿಸಿದರಲ್ಲದೆ ಇತ್ತೀಚಿನ ದಿನಗಳಲ್ಲಿ ನಾಟಿ ಹಸು, ಕಣ ಎಲ್ಲವೂ ಮರೆಯಾಗಿ ಯಂತ್ರದ ಮೇಲೆ ರೈತರು ಅವಲಂಬಿಸಿದ್ದಾರೆ. ಕೃಷಿ ಬಗ್ಗೆ ತಾತ್ಸಾರ ಮೂಡಿದೆ. ಗೋಪೂಜೆ ಮಾಡುವ ಮೂಲಕ ಕೃಷಿಯಲ್ಲಿ ಗೋವಿನ ಮಹತ್ವ ತಿಳಿಸುವ ಪ್ರಯತ್ನ ಸ್ವಾಗತಾರ್ಹ ಎಂದರು.
ಈಶ್ವರಯ್ಯನವರು ಮಾತನಾಡಿ ಗೋಪೂಜೆಯು ತುಂಬಾ ಶ್ರೇಷ್ಠವಾದ ಪೂಜೆ ಅಷ್ಟ ದೇವತೆಗಳನ್ನು ಕೂಡ ಈ ಗೋಮಾತೆಯಲ್ಲಿ ಕಾಣಬಹುದು. ಹಾಗಾಗಿ ನಾವು ಹಸುವನ್ನು ಒಮ್ಮೆ ತಬ್ಬಿ ಕೊಂಡರೆ ಅಷ್ಟ ದೇವತೆಗಳು ಲಭಿಸಿದಂತೆ ಎಂದು ತಿಳಿಸಿದರು. ಶಿಕ್ಷಕರಾದ ಶ್ರೀನಿವಾಸ್ ರವರು ಗೋಮಾತೆ ಪೂಜೆಯ ಕುರಿತಾಗಿ ಸವಿಸ್ತಾರವಾದ ಮಾಹಿತಿಯನ್ನು ನೀಡಿದರು. ಗೋವಿನ ಸಗಣಿ ಗಂಜು ಅದರ ಉಸಿರಾಟ ಹಾಗೂ ಬಹಳ ಹಿಂದಿನಿAದ ಇಲ್ಲಿಯವರೆಗೂ ಗೋವಿನ ಸಗಣಿಯಿಂದ ಆಗುವ ಉಪಯೋಗ ವನ್ನು ತಿಳಿಸಿದರು.
ಶಿಕ್ಷಕಿ ಎಸ್.ಎನ್.ಗೀತಾ ರವರು ವಿಷ್ಣುವಿನ ಹೆಂಡತಿ ಲಕ್ಷಿ÷್ಮ ಈ ಲಕ್ಷಿ÷್ಮಯ ಸ್ವರೂಪವಾದಂತಹ ತುಳಸಿ ಗಿಡದ ಮಹತ್ವ ಹಾಗೂ ವಿಶೇಷತೆ ಯನ್ನು ತಿಳಿಸುವ ಮೂಲಕ ಕರ್ನಾಟಕ ಅಲ್ಲದೆ ಬಿಹಾರದಲ್ಲಿ ಮೂರು ದಿನಗಳ ಕಾಲ ವಿಶೇಷವಾಗಿ ಆಚರಿಸುವ ತುಳಸಿ ಪೂಜೆಯ ಪವಿತ್ರತೆಯನ್ನು ಹಾಗೂ 56 ತರಹದ ಭಕ್ಷ ಭೋಜನಗಳನ್ನು ತಯಾರಿಸಿ ಈ ತುಳಸಿ ಪೂಜೆಯ ಸಂದರ್ಭದಲ್ಲಿ ನೈವೇದ್ಯವನ್ನು ಮಾಡುವ ವಿಚಾರವನ್ನು ಕಥಾರೂಪದಲ್ಲಿ ಸವಿಸ್ತಾರವಾಗಿ ತಿಳಿಸಿದರು. ಶಾಲಾ ಕಾರ್ಯದರ್ಶಿಗಳಾದ ಎಚ್.ಟಿ.ದಾಸಪ್ಪ, ಆಡಳಿತ ಮಂಡಳಿಯ ಸದಸ್ಯರುಗಳಾದ ನಾಗಭೂಷಣ್, ಸತೀಶ್, ರಘುನಾಥ್, ಶಶಿಕಲಾ ಯಶೋದಮ್ಮ, ಉಪಸ್ಥಿತರಿದ್ದರು.
(Visited 1 times, 1 visits today)