ತುಮಕೂರು: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಜಿಲ್ಲಾ ಗಂಗಾಮತಸ್ಥರ ಸಂಘದವತಿಯಿAದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಹಾಗೂ ರಾಷ್ಟಿçÃಯ ದಾಸೋಹ ದಿನವನ್ನು ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಅಂಬಿಗರ ಚೌಡಯ್ಯ ಹಾಗೂ ಡಾ.ಶ್ರೀಶಿವಕುಮಾರಸ್ವಾಮೀಜಿಗಳ ಭಾವಚಿತ್ರಗಳಿಗೆ ಪುಪ್ಪ ನಮನ ಸಲ್ಲಿಸುವ ಮೂಲಕ ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಚಾಲನೆ ನೀಡಿದರು.ಈ ವೇಳೆ ಮಾತನಾಡಿದ ಅವರು, ಕಾಯಕವನ್ನೇ ಪೂಜೆ ಎಂದು ನಂಬಿದ್ದ ಅಂಬಿಗರ ಚೌಡಯ್ಯ,ಅದರಲ್ಲಿಯೇ ದೇವರನ್ನು ಕಂಡವರು.ಪೂಜೆ, ಜಪ,ತಪದ ಹೆಸರಿನಲ್ಲಿ ನಡೆಯವ ಆಡಂಬರಗಳನ್ನು ಕಟುವಾಗಿ ತಮ್ಮ ವಚನಗಳಲ್ಲಿ ಟೀಕಿಸಿದ್ದ ಅಂಭಿಗರ ಚೌಡಯ್ಯ, ತಾವು ಮಾಡುವ ಕಾಯಕವೇ ದೇವನಿಗೆ ಅರ್ಪಣೆ ಎಂಬAತೆ ಜೀವನದುದ್ದಕ್ಕೂ ಬದುಕಿದ ಮಹಾಪುರುಷರು.ಇವರ ಈ ಕಾಂiÀiಕ ನಿಷ್ಠೆಯನ್ನು ಮೆಚ್ಚಿ ಅವರನ್ನು ನಿಜ ಶರಣ ಎಂಬ ಬಿರುದಿನಿಂದ ಕರೆಯಲಾಗುತಿತ್ತು ಎಂದರು.
ಅAಬಿಗರ ಚೌಡಯ್ಯನವರು ತಮ್ಮ ವಚನಗಳಲ್ಲಿ ಜನರ ನಡುವೆ ಯಾವ ರೀತಿಯ ಸಾಮರಸ್ಯ ಇರಬೇಕೆಂದರೆ ಕುರುಡಿನಿಗೆ ಕಿವಿಯಿದ್ದವ ಜೊತೆಯಾದಂತೆ ಪರಸ್ವರ ಅವಲಂಬಿತರಾಗಿ ಬದುಕುಬೇಕು ಎಂಬ ಕನಸುಗಳನ್ನು ಕಂಡವರು.ನೈಜ್ಯತೆ ಬೆಲೆ ನೀಡಿದವರು,ಆಡಂಬರಕ್ಕೆ ಎಂದಿಗೂ ಬೆಲೆ ನೀಡಲಿಲ್ಲ.ಇವರಂತೆಯೇ ಬದುಕಿದವರು ನಮ್ಮ ಶ್ರೀಶಿವಕುಮಾರ ಸ್ವಾಮೀಜಿ ಗಳು,111 ವರ್ಷಗಳ ಕಾಲ ಸಮಾಜದ ಒಳಿತಿಗಾಗಿ ಬದುಕಿನ ಮಹಾನ್ ಚೇತನ.ಮೇಲು,ಕೀಳು,ಬಡವ, ಬಲ್ಲಿದ ಎಂಬ ಭೇಧಭಾವವಿಲ್ಲದೆ ಎಲ್ಲರನ್ನು ಮಾತೃಹೃದಯದಿಂದ ಪೋಷಿಸಿದ ಮಹಾನ್ ವ್ಯಕ್ತಿ ಸಿದ್ದಗಂಗಾಶ್ರೀಗಳು ಎಂದರು.ವೇದಿಕೆಯಲ್ಲಿ ಜಿಲ್ಲಾ ಗಂಗಾ ಮತಸ್ಥರ ಸಂಘದ ಗೌರವಾಧ್ಯಕ್ಷ ಕೆ.ಎಸ್.ದಿವಾಕರ,ನಿರ್ದೇಶಕರಾದ ಗರುಡಯ್ಯ, ಪಾಲಾಕ್ಷಯ್ಯ, ವಿಜಯಮ್ಮ, ಪುಟ್ಟಸ್ವಾಮಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಮಧುಗಿರಿಯ ದ್ಯಾವರಪ್ಪ ಮತ್ತು ತಂಡದಿAದ ತತ್ವಪದ ಗಾಯನ ನಡೆಯಿತು.

(Visited 1 times, 1 visits today)