ತುಮಕೂರು; ಗ್ರಾಮ ಪಂಚಾಯತಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಸರ್ಕಾರವೇ 2018 ರಿಂದ ಕನಿಷ್ಟ ವೇತನ ಮತ್ತು ಪ್ರತಿ ವರ್ಷದ ಏಪ್ರೀಲ್ ತಿಂಗಳಿAದ ಹೆಚ್ಚಾಗುವ ವಿ.ಡಿ.ಎ.ತುಟ್ಟಿ ಭತ್ಯೆಯನ್ನು ಸೇರಿಸಿ ವರ್ಷದ 3ತಿಂಗಳಿಗೆ ಒಮ್ಮೆ ಒಟ್ಟಿಗೆ 3 ತಿಂಗಳ ವೇತನವನ್ನು ರಾಜ್ಯದ ಪ್ರತಿ ಗ್ರಾಮ ಪಂಚಾಯಿತಿ ಸಿಬ್ಬಂದಿ ಖಾತೆಗೆ ಬಿಡುಗಡೆ ಮಾಡುತ್ತದೆ.ಬಿಡುಗಡೆಯಾದ ವೇತನದ ಮೂತ್ತದಲ್ಲಿ ರಾಜ್ಯದ ಪ್ರತಿ ಗ್ರಾಮ ಪಂಚಾಯಿತಿ ಸಿಬ್ಬಂದಿ ಸಂಖ್ಯೆಗೆ ಅನುಗುಣವಾಗಿ ಹಣ ನೀಡದೆ ಇರುವದರಿಂದ ಸಿಬ್ಬಂದಿಗಳಿಗೆ ವರ್ಷದಲ್ಲಿ ಕೆಲವು ತಿಂಗಳುಗಳ ವೇತನ ಬಾಕಿ ಉಳಿದಿವೆ. 2018 ಕ್ಕೆ ಮೊದಲು ಗ್ರಾಮ ಪಂಚಾಯತಿಗಳೇ ಸರಿಯಾಗಿ ವೇತನ ಬಾಕಿ ಇದೆ. ಈ ಸಂಬAದ ಆರ್.ಡಿ.ಪಿ.ಆರ್ ಮತ್ತು ಆಯುಕ್ತಾಲಯದ ಇಲಾಖೆಗಳ ಮುಖ್ಯಸ್ಥರ ಗಮನಕ್ಕೆ ತಂದರು ಮೂಲ ಇಲಾಖೆಯ ಸಿಬ್ಬಂದಿಗಳ ಈ ಬಾಕಿ ವೇತನದ ಬಗ್ಗೆ ಮಲತಾಯಿ ದೋರಣೆ ತಾಳಿವೆ. ಅದರೆ ಅನ್ಯ ಇಲಾಖೆಯ (ಗ್ರಂಥಾಲಯ ಮೇಲ್ವಿಚಾರಕರಿಗೆ) ಸಬ್ಬಿಂದಿಗಳಿಗೆ ವೇತನ ಪಾವತಿಸಲು ಗ್ರಾಮಪಂಚಾಯಿತಿಗಳಲ್ಲಿ ವಸೂಲಿಯಾದ ತೆರಿಗೆಯ ಹಣದಿಂದ ಗ್ರಾಂಥಾಲಯ ಸಿಬ್ಬಂದಿಗಳ ಖಾತೆಗೆ ನೇರವಾಗಿ ಹಣ ಹಾಕುವಂತೆ ಸ್ಪಷ್ಟ ಆಧೇಶ ನೀಡಲಾಗಿದೆ.
ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ನೌಕರರ ಸಂಘದ ಜಿಲ್ಲಾ ಸಮಿತಿ ಸಭೆಯನ್ನು ಉದ್ದೇಶಿಸಿ ರಾಜ್ಯ ಅದ್ಯಕ್ಷರಾದ ಎಂ.ಬಿ.ನಾಡಗೌಡ ಮತನಾಡುತ್ತಿದ್ದರು.
ಪಿ.ಡಿ.ಓ ವೃಂದವನ್ನು ಜಿಲ್ಲಾ ಮಟ್ಟದ ಆಯ್ಕೆಯಿಂದ ರಾಜ್ಯ ಮಟ್ಟದ ಆಯ್ಕೆಯಾಗಿ ಪರಿಗಣಿಸಿರುವದರಿಂದ ಜಿಲ್ಲೆಯಲ್ಲಿ ಕರವಸೂಲಿಗಾರರು ಮತ್ತು ಡಿ.ಇ.ಒಗಳಿಗೆ ಬಡ್ತಿಗೆ ಹಿನ್ನಡೆಯಾಗಿದೆ. ಇದರಿಂದ ಗ್ರಾಮ ಪಂಚಾಯತಿಗಳಲ್ಲಿ ಕರವಸೂಲಿಗಾರ ಮತ್ತು ಕ್ಲರ್ಕ ಕಂ ಡಾಟಾ ಎಂಟ್ರಿ ಆಪರೇರ‍್ಗಳಿಗೆ ಸೇವೆ ಸಲ್ಲಿಸಿದ ನೌಕರರಿಗೆ ಗ್ರೇಡ್-2 ಕಾರ್ಯದರ್ಶಿ ಮತ್ತು ಲೆಕ್ಕ ಸಹಾಯಕ ಹುದ್ದೆಗಳಿಗೆ ನೇರ ನೇಮಕಾತಿ ಮುಖೇನ ಸರ್ಕಾರಿ ನೌಕರರಾಗಿ ಬಡ್ತಿ ನಿಡುತ್ತಿದ್ದರು.ದಿರ್ಘಾವದಿ ಸೇವೆ ಸಲಿಸದರುಬಡ್ತಿ ಇಲ್ಲದೆ ಡಿ.ಇಓ ಮತ್ತು ಕರವಸೂಲಿಗಾರರು ನಿವೃತ್ತಿ ಆಗುತ್ತಿರುವುದರಿಂದ ಬಡ್ತಿ ಸಿಗದೆ ಅನ್ಯಯವಾಗುತ್ತಿದೆ ಎಂದರು.ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಆದ್ಯಕ್ಷರಾದ ಎನ.ಕೆ.ಸುಬ್ರಹ್ಮಣ್ಯವಹಿಸಿದ್ದರು ರಾಜ್ಯ ಉಪಾಧ್ಯಕ್ಷ ಗೊಪಾಲಕೃಷ್ಣ ಹರಳಹಳ್ಳಿ ,ಜಿಲ್ಲಾ ಪ್ರಧಾನಕಾರ್ಯದರ್ಶಿ ಹೆಚ್.ಡಿ.ನಾಗೇಶ್,ನಾರಯಣಸ್ವಾಮಿ,ಶ್ವೇತ ಉಪಸ್ಥಿತರಿದ್ದರು.

(Visited 1 times, 1 visits today)