ತುಮಕೂರು: ವಿದ್ಯಾರ್ಥಿ, ಯುವಜನರಲ್ಲಿ ಸಂಚಾರಿ ನಿಯಮಗಳು ಹಾಗೂ ಸುರಕ್ಷಿತ ಸಂಚಾರ ಕುರಿತಂತೆ ಅನುಸರಿಸಬೇಕಾದ ಎಚ್ಚರಿಕೆ ಬಗ್ಗೆ ವಿವಿಧ ಸಂಘಸAಸ್ಥೆಗಳ ನೇತೃತ್ವದಲ್ಲಿ ಬುಧವಾರ ನಗರದ ಸಿದ್ಧಗಂಗಾ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ರಸ್ತೆ ಸುರಕ್ಷತಾ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.
ನೆಹರೂ ಯುವ ಕೇಂದ್ರ, ತುಮಕೂರು ಸಂಚಾರಿ ಪೊಲೀಸ್ ವಿಭಾಗ, ರೂಟರಿ ಕ್ಲಬ್, ಡಾ.ಅಂಬೇಡ್ಕರ್ ಯುವಜನ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಆಶ್ರಯದಲ್ಲಿ ನಡೆದ ಕಾರ್ಯಕ್ರಮ ಉದ್ಘಾಟಿಸಿದ ಸಂಚಾರಿ ಪೊಲೀಸ್ ಠಾಣೆಯ ಉಪ ನಿರೀಕ್ಷಕ ರಮೇಶ್ ಅವರು ಮಾತನಾಡಿ, ಸಂಚಾರಿ ನಿಯಮಗಳ ಪಾಲನೆಯಿಂದ ಸುರಕ್ಷಿತ ಸಂಚಾರ ಸಾಧ್ಯ. ನಿಯಮ ಉಲ್ಲಂಘಿಸಿದರೆ ಅಪಘಾತವಾಗುವ ಅಪಾಯವೂ ಇದೆ, ದಂಡ ವಿಧಿಸಲು ಅವಕಾಶವಿದೆ. ವಿಶೇಷವಾಗಿ ವಿದ್ಯಾರ್ಥಿಗಳು, ಯುವ ಜನರು ರಸ್ತೆ ನಿಯಮಗಳನ್ನು ಪಾಲನೆ ಮಾಡಿ, ಉಲ್ಲಂಘನೆ ಮಾಡದಂತೆ ಎಚ್ಚರಿಕೆಯಿಂದ ಸಂಚರಿಸಬೇಕು ಎಂದರು.

ಸಿದ್ಧಗAಗಾ ಡ್ರೆöÊವಿಂಗ್ ಸ್ಕೂಲ್ ಪ್ರಾಂಶುಪಾಲರಾದ ಟಿ.ಆರ್.ಸದಾಶಿವಯ್ಯ ಮಾತನಾಡಿ, ವಿದ್ಯಾರ್ಥಿಗಳು ರಸ್ತೆಯ ನಿಯಮಗಳನ್ನು ಕಡ್ಡಾಯವಾಗಿ ತಿಳಿದುಕೊಳ್ಳಬೇಕು. ವಾಹನ ಚಲಾವಣೆ ಮಾಡಲು ಚಾಲನಾ ಪರವಾನಗಿ ಹೊಂದಿರಬೇಕು, ವಾಹನದ ದಾಖಲಾತಿಗಳು, ಇನ್ಷೂರೆನ್ಸ್ ಮತ್ತಿತರ ಸಂಬAಧಿತ ದಾಖಲಾತಿಗಳನ್ನು ಹೊಂದಬೇಕು ಎಂದರು.
ರಸ್ತೆಯಲ್ಲಿ ವಾಹನ ಚಲಾಯಿಸುವಾಗ ಅಲ್ಲಿನ ಸೂಚನಾ ಫಲಕಗಳ ಸೂಚನೆಗಳನ್ನು ಅನುಸರಿಸಬೇಕು. ಆಂಬುಲೆನ್ಸ್ ಮತ್ತಿತರ ತುರ್ತು ವಾಹನಗಳು ಮುಂದೆ ಸಾಗಲು ಅವಕಾಶ ನೀಡಬೇಕು. ಅತಿಯಾದ ವೇಗ, ಭಾಗವಹಿಸಿದ್ದರು.

(Visited 1 times, 1 visits today)