ತುಮಕೂರು: ನಗರದ ಕಲ್ಪತರು ಸಾಂಸ್ಕೃತಿಕ ವೇದಿಕೆ ಬರುವ ಫೆಬ್ರವರಿ 19ರಿಂದ 23ರ ವರೆಗೆ ನಗರದಲ್ಲಿ ವಿವಿಧ ಸಾಂಸ್ಕೃತಿಕ ಕಲೆ ಹಾಗೂ ಮನರಂಜನಾ ಸ್ಪರ್ಧೆಗಳು ಒಳಗೊಂಡ ವೈಭವದ ಕಲ್ಪತರು ಕಲಾ ಉತ್ಸವ ಏರ್ಪಡಿಸಿದೆ. ನಗರದ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ನಡೆಯುವ ಐದು ದಿನಗಳ ಈ ಉತ್ಸವದಲ್ಲಿ ನಾಡಿನ ಹೆಸರಾಂತ ಕಲಾವಿದರು, ಗಣ್ಯರು ಭಾಗವಹಿಸಲಿದ್ದಾರೆ ಎಂದು ವೇದಿಕೆಯ ಸೋಮಶೇಖರ್, ತನುಜ್‌ಕುಮಾರ್ ಹೇಳಿದ್ದಾರೆ.
ನಗರದ ಆರ್‌ಟಿಓ ಕಚೇರಿ ಆವರಣದ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಬುಧವಾರ ಪೂಜೆ ಸಲ್ಲಿಸಿ ಕಾರ್ಯಕ್ರಮದ ಕರಪತ್ರಗಳನ್ನು ಅನಾವರಣಗೊಳಿಸಿದರು.
ಉತ್ಸವದಲ್ಲಿ ಲಿಟಲ್ ರಾಜ, ರಾಣಿ ಫ್ಯಾಷನ್ ಷೋ, 18ರಿಂದ 24 ವಯಸ್ಸಿನ ಯುವತಿಯರಿಗೆ ಮಿಸ್ ತುಮಕೂರು ಸ್ಪರ್ಧೆ, 18ರಿಂದ 24 ವರ್ಷದ ಯುವಕರಿಗೆ ಮಿಸ್ಟರ್ ತುಮಕೂರು ಸ್ಪರ್ಧೆ, 13 ವರ್ಷ ಮೇಲ್ಪಟ್ಟ ಮಕ್ಕಳ ವಾಯ್ಸ್ ಆಫ್ ತುಮಕೂರು ಗೀತಗಾಯನ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಇದರ ಜೊತೆಗೆ ಆಕರ್ಷಕ ವಸ್ತುಪ್ರದರ್ಶನ, ಆಹಾರ ಮೇಳ, ಮನರಂಜನಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ಹೇಳಿದರು. ವಿದ್ಯಾವಾಹಿನಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಪ್ರದೀಪ್‌ಕುಮಾರ್, ನೇತಾಜಿ ಶ್ರೀಧರ್, ವೇದಿಕೆಯ ಮುಖಂಡರಾದ ಭಾಗ್ಯಮ್ಮ, ಜಿ.ತಾಹೇರಾ, ಭಾಗವಹಿಸಿದ್ದರು.
(Visited 1 times, 1 visits today)