ತುರುವೇಕೆರೆ: ರೈತರಿಗೆ ನೀಡುವ ಸಾಲ ಕಡಿತ ಮಾಡಿರುವ ನಬಾರ್ಡ್ ನೀತಿ ವಿರೋದಿಸಿ ಹಾಗೂ ಮೈಕ್ರೋ ಫೈನಾನ್ಸ್ ಹಾವಳಿ ಮತ್ತು ಕಿರುಕುಳ Àಡೆಗಟ್ಟುವಂತೆ ಆಗ್ರಹಿಸಿ ಜ.29 ರಂದು ಬೆಂಗಳರಿನ ರಿಸರ್ವ್ ಬ್ಯಾಂಕ್ ಕಚೇರಿ ಎದುರು ರೈತರ ಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾದ್ಯಕ್ಷ ರಾಜ್ಯ ಕಾರ್ಯದರ್ಶಿ ಎ.ಗೊವಿಂದರಾಜ್ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದ ಅವರು, ಭಾರತ ದೇಶ ಕೃಷಿ ಪ್ರದಾನ ದೇಶವಾಗಿದೆ ಕೃಷಿ ಮಾಡುವ ರೈತರೂ ಇಂದಿಗೂ ಸಾಲದ ಸುಳಿಯಲ್ಲಿ ಸಿಲುಕಿ ಸಾಯುವಂತಹ ಪರಿಸ್ಥಿತಿ ಇದೆ. ದೇಶದಲ್ಲಿ 36 ನಿಮಿಷಕೊಬ್ಬ ರೈತರುಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು ದೇಶದಲ್ಲಿ 1ಲಕ್ಷದ 46 ಸಾವಿರ ರೈತರು ಸಾಲದ ಭಾದೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವ ವರದಿ ಇದೆ. ಈ ಹಿಂದೆ ಕೃಷಿ ಕ್ಷೇತ್ರವನ್ನು ಸದೃಡಗೊಳಿಸುವ ದೃಷ್ಟಿಯಿಂದ ನಬಾರ್ಡ್ ಬ್ಯಾಂಕ್ ಸಾಲದ ಮೂಲಕ ಆರ್ಥಿಕ ನೆರವುನೀಡುತಿತ್ತು. ಆದರೆ ನಬಾರ್ಡ್ ಕೃಷಿಗೆ ನೀಡುತ್ತಿದ್ದ ಅಲ್ಪಾವದಿ ಸಾಲದ ಮೊತ್ತವನ್ನು ಕಡಿತ ಗೊಳಿಸಿದ್ದು ಕೃಷಿ ಕ್ಷೇತ್ರದ ರೈತರಿಗೆ ನೀಡುತ್ತಿರುವ ಸಹಕಾರ ಬ್ಯಾಂಕ್ ಗಳು ನೀಡುವ ಸಾಲದ ಮೊತ್ತ ಕಡಿಮೆಯಾಗುತ್ತಿದೆ. ನಬಾರ್ಡ್ ಕಳೆದ ವರ್ಷ ರಾಜ್ಯಕ್ಕೆ 5600 ಕೋಟಿ ನೀಡಿತ್ತು, ಈ ವರ್ಷ ಕೇವಲ 2340 ಕೋಟಿ ನೀಡಿದೆ. ಸಹಕಾರಿ ಬ್ಯಾಂಕ್ ಗಳಲ್ಲಿ 5 ಲಕ್ಷದವರೆಗೂ ಶೂನ್ಯ ಬಡ್ಡಿದರದಲ್ಲಿ ಅಲ್ಪಾವದಿ ಸಾಲ ಪಡೆಯುವ ರೈತರಿಗೆ ಅನ್ಯಾಯವಾಗಲಿದ್ದು ಹೆಚ್ಚು ಬಡ್ಡಿ ತೆತ್ತು ವಾಣಿಜ್ಯ ಬ್ಯಾಂಕ್ ಗಳ ಮೊರೆ ಹೋಗಬೇಕಾಗುತ್ತದೆ. ಕಳೆದ ಮೂರು ವರ್ಷಗಳಿಂದ ಕೇಂದ್ರ ಸರ್ಕಾರ ಕೃಷಿ ಕ್ಷೇತ್ರಕ್ಕೆನೀಡುವ ಸಾಲದ ಮೊತ್ತವನ್ನು ಕಡಿಮೆ ಮಾಡುತ್ತಾ ಬಂದಿದೆ. ಕೇಂದ್ರ ಸರ್ಕಾರದ ಈ ನೀತಿಯಿಂದಾಗಿ ರಾಜ್ಯಕ್ಕೆ ನೀಡುತ್ತಿದ್ದ ಸಾಲದ ಮೊತ್ತ ಶೇ 58 ತಗ್ಗಿದೆ. ಕೃಷಿ ವ್ಯವಸ್ಥೆನಾಶವಾಗುವ ಆತಂಕ ಎದುರಾಗಿದ್ದು. ಕೃಷಿ ಕ್ಷೇತ್ರವನ್ನು ಸಂಪೂರ್ಣ ಕಾರ್ಪೋರೇಟ್ ಕಂಪನಿಗಳ ವಶಕ್ಕೆ ನೀಡುವ ಹುನ್ನಾರವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದರು.ಗೋಷ್ಟಿಯಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ಶ್ರೀನಿವಾಸ್ ಗೌಡ, ಇದ್ದರು.
(Visited 1 times, 1 visits today)