ಚಿಕ್ಕನಾಯಕನಹಳ್ಳಿ: ಚಿಕ್ಕನಾಯಕನಹಳ್ಳಿ, ತುಮುಲ್ ಅಧ್ಯಕ್ಷರನ್ನಾಗಿ ಚುನಾಯಿತರನ್ನು ಆಯ್ಕೆ ಮಾಡದೆ ನಾಮ ನಿರ್ದೇಶಕರಾಗಿದ್ದ ಶಾಸಕರನ್ನು ಮಾಡಿರುವುದು ರೈತರ ಪಾಲಿನ ಕರಾಳ ದಿನಗಳ ಆರಂಭ ಇದು ರೈತರ ಮುಖಕ್ಕೆ ಬಾರಿಸಿ ದಂತಾಗಿದೆ ಎಂದು ಮಾಜಿ ಸಚಿವ ಜೆಸಿ ಮಾಧುಸ್ವಾಮಿ ತೀವ್ರವಾಗಿ ಟೀಕಿಸಿದರು.
ಪಟ್ಟಣದ ನಂದಿನಿ ಭವನದ ಆವರಣದಲ್ಲಿ ನಡೆದ ತುಮುಲ್ ನಾ ಆಡಳಿತ ಮಂಡಳಿ ಚುನಾವಣೆಯಲ್ಲಿ ತಾಲೂಕಿನ ನಿರ್ದೇಶಕರಾಗಿ ಆಯ್ಕೆಯಾದ ಬಿಎನ್ ಶಿವಪ್ರಕಾಶ್ ರವರು ಆಯೋಜಿಸಿದ್ದ ಮತದಾರರ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಪ್ರಜಾಪ್ರಭುತ್ವ ಮೌಲ್ಯಗಳಿಗೆ ತಿಲಾಂಜಲಿ ನೀಡಿ ಸಹಕಾರ ಕ್ಷೇತ್ರಗಳನ್ನು ಕುಟುಂಬದ ಸಂಸ್ಥೆಗಳನ್ನಾಗಿಸುವ ಹುನ್ನಾರಕ್ಕೆ ಜಿಲ್ಲಾ ಉಸ್ತುವಾರಿ ಹಾಗೂ ಸಹಕಾರ ಸಚಿವ ಕೆ ಎನ್ ರಾಜಣ್ಣ ಕೈಜೋಡಿಸಿ ಇರುವುದು ಇಡೀ ರೈತ ಸಮೂಹಕ್ಕೆ ಕಾಪಾಳ ಮೋಕ್ಷ ಮಾಡಿದಂತಾಗಿದೆ ಎಂದರು
ಡಾ. ವರ್ಗೀಸ್ ಕುರಿಯನ್ ರವರ ಆಶಯವನ್ನು ಮಣ್ಣು ಪಾಲು ಮಾಡಿದ ಮಹನೀಯರ ನಡೆ ಕ್ಷಮಿಸಲಾರದೆಂದ ಅವರು ಹಾಲು ಒಕ್ಕೂಟದ ಎಲ್ಲಾ ವ್ಯವಸ್ಥೆಗಳು ಡೈರಿಗೆ ಹಾಲು ಹಾಕವ ರೈತರ ಹಕಾಗಿರಬೇಕೆನ್ನುವುದು ಕೊನೆ ಕುರಿಯನ್ ರವರ ಆಶಯ ಅದರ ಉತ್ಪನ್ನದ ಲಾಭಗಳು ಹಾಗೂ ದೊರೆಯುವ ಎಲ್ಲಾ ಸೌಲಭ್ಯಗಳು ಉತ್ಪಾದಕರು ಹಾಗೂ ಅವರ ಕುಟುಂಬಗಳಿಗೆ ಸೇರಬೇಕೆನ್ನುವುದು ಒಕ್ಕೂಟದ ಮೂಲ ಸಿದ್ದಾಂತವಾಗಿದೆ ಆದರೆ ಚುನಾವಣೆಯಲ್ಲಿ ಗೆದ್ದ 10 ಮಂದಿಯಲ್ಲಿ ಯಾರೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು ನಮಗೆ ಬೇಸರವಿಲ್ಲವೆಂದ ಅವರು ನಾಮಿನಿಗೆ ಮಣೆ ಹಾಕಿ ಶಾಸಕರನ್ನು ತುಮುಲ್ ಅಧ್ಯಕ್ಷರನ್ನಾಗಿಸಿರುವುದು ಚಿಂತಿಸುವAತಾಗಿದೆ ನಾನು ಸಹ ಕೆಎಂಎಫ್ ಗೆ ಐದುವರೆ ವರ್ಷ ಅಧ್ಯಕ್ಷನಾಗಿದ್ದೆ ಜಿಲ್ಲಾ ಉಸ್ತುವಾರಿ ಸಚಿವನು ಆಗಿದ್ದೆ ಆದರೆ ಎಂದಿಗೂ ನಾನು ಇಂತಹ ರಾಜಕಾರಣ ಮಾಡಿಲ್ಲವೆಂದರು. ಈ ಸಂದರ್ಭದಲ್ಲಿ ನೂತನವಾಗಿ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕರಾಗಿ ತಾಲೂಕಿನಿಂದ ಆಯ್ಕೆ ಆದ ಬಿಎನ್ ಶಿವಪ್ರಕಾಶ್ ಕೇಶವಮೂರ್ತಿ ಮಾಜಿ ದೀಪಂ ಸದಸ್ಯ ಮಂಜಮ್ಮ ಉಪಸ್ಥಿತರಿದ್ದರು.
(Visited 1 times, 1 visits today)