ತುಮಕೂರು: ಮತ್ಸö್ಯದರ್ಶಿನಿ ಹೋಟೆಲ್ ನಲ್ಲಿ ಕಳೆಪೆ ಗುಣಮಟ್ಟದ ಪದಾರ್ಥಗಳನ್ನು ಬಳಸುವ ಮೂಲಕ ಆಹಾರ ಗುಣಮಟ್ಟವನ್ನು ಕಡಿಮೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಹೋಟೆಲ್‌ನ ವ್ಯವಸ್ಥಾಪಕಿಯ ದುರ್ವರ್ತನೆಗೆ ಗ್ರಾಹಕರು ಬೇಸತ್ತಿದ್ದು, ಈಕೆಯ ವರ್ಗಾವಣೆಗೆ ಆಗ್ರಹಗಳು ಕೇಳಿ ಬರುತ್ತಿದೆ.

ತುಮಕೂರು ವಿವಿಯ ಹಿಂದೆ ಸರ್ಕಾರದ ಮತ್ಸö್ಯ ದರ್ಶಿನಿ ಹೋಟೆಲ್ ಇದೆ. ಇಲ್ಲಿಗೆ ನಿತ್ಯ ನೂರಾರು ಜನರು ಊಟಕ್ಕೆಂದು ಬರುತ್ತಿದ್ದರು. ಆದರೆ, ಗ್ರಾಹಕರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಇದಕ್ಕೆ ಹೋಟೆಲ್ ವ್ಯವಸ್ಥಾಪಕಿ ಕಾವ್ಯಾ ಅವರ ಗ್ರಾಹಕರೊಂದಿಗಿನ ಅನುಚಿತ ವರ್ತನೆಯೇ ಮುಖ್ಯವಾದ ಕಾರಣವೆಂದು ಹೇಳಲಾಗಿದೆ.

ರುಚಿ ಶುಚಿ ಇರದ ಊಟ: ಅಡುಗೆ ಮಾಡಿ ಬಡಿಸುವಲ್ಲಿ ಹಿಂದೆ ಇದ್ದಂತಹ ಶ್ರದ್ಧೆ ಈಗ ಇಲ್ಲವಾಗಿದೆ. ಸಾಂಬರು ರುಚಿ ಇರದ ಬಗ್ಗೆ ಗ್ರಾಹಕರು ಕೇಳಿದರೆ `ಬೇಕಾದರೆ ತಿನ್ನಬಹುದು, ಇಲ್ಲವಾದರೆ ನಡೆಯಿರಿ’ ಎಂಬ ಉಡಾಫೆ ಉತ್ತರ ನೀಡುತ್ತಿದ್ದಾರೆ ಎಂಬ ದೂರು ಕೇಳಿ ಬಂದಿದೆ. ಅಡುಗೆಗೆ ಬಳಸುವ ಆಹಾರ ಪದಾರ್ಥಗಳು ಕಡಿಮೆ ಬೆಲೆಗೆ ಕೊಳ್ಳಲಾಗುತ್ತಿದ್ದು, ಅತ್ಯಂತ ಕಳಪೆ ಗುಣಮಟ್ಟದ ಪದಾರ್ಥಗಳನ್ನು ಬಳಸಿ ಗ್ರಾಹಕರಿಗೆ ಮೋಸ ಮಾಡಲಾಗುತ್ತಿದೆ ಎಂದು ದೂರು ಕೇಳಿ ಬರುತ್ತಿದೆ. ಗ್ರಾಹಕರ ಆರೊಗ್ಯದ ಬಗ್ಗೆ ನಿರ್ಲಕ್ಷö್ಯ ವಹಿಸಲಾಗಿದೆ. ಶುಚಿಯಂತೂ ಮೊದಲೇ ಇಲ್ಲ. ಈ ಬಗ್ಗೆ ವ್ಯವಸ್ಥಾಪಕಿಗೆ ಗ್ರಾಹಕರು ತರಾಟೆ ತೆಗೆದುಕೊಂಡರೂ ಸ್ವಲ್ಪವೂ ಅಂಜಿಕೆಯಿಲ್ಲದೆ ವರ್ತಿಸುತ್ತಿದ್ದದ್ದು ಕಂಡು ಬಂತು. ಸಾರ್ವಜನಿಕರಿಗೆ ಅಸಹಕಾರ ತೋರುವ ಮನಸ್ಥಿತಿ ಒಳ್ಳೆಯದಲ್ಲ. ಇಂತಹವರು ಈ ಸಂಸ್ಥೆಗೆ ಲಾಯಕ್ಕಲ್ಲ. ನಮ್ಮ ಜಿಲ್ಲೆಯಲ್ಲಿ ಸರ್ಕಾರಿಯ ಮೀನುಳಿ ಹೋಟೆಲ್‌ಗಿರುವ ಘನತೆಯನ್ನು ಇಂತಹವರು ಹಾಳು ಮಾಡುತ್ತಿದ್ದಾರೆ. ವ್ಯವಸ್ಥಾಪಕಿ ಕಾವ್ಯಾ ಅಂತವರು ನಿಜಕ್ಕೂ ಇಂತಹ ಹುದ್ದೆಗೆ ಅನ್ ಫಿಟ್. ಇದರಲ್ಲಿ ಎರಡು ಮಾತಿಲ್ಲ.

ವರ್ಗಾವಣೆಗೆ ಆಗ್ರಹ: ಊಟಕ್ಕೆಂದು ಬರುತ್ತಿರುವ ಗ್ರಾಹಕರೊಂದಿಗೆ ದುರ್ವರ್ತನೆ ತೊರುತ್ತಿರುವ ವ್ಯವಸ್ಥಾಪಕಿ ಕಾವ್ಯಾ ಅವರಿಂದ ಜನರಿಗೆ ಉತ್ತಮ ಸೇವೆ ದೊರೆಯುತ್ತಿಲ್ಲ. ಇವರಿಗೆ ಸೇವಾ ಮನೋಭಾವವೂ ಇಲ್ಲ. ಇವರನ್ನು ವರ್ಗಾವಣೆ ಮಾಡಬೇಕೆಂದು ಹಲವು ದಿನಗಳಿಂದ ಒತ್ತಾಯ ಕೇಳಿ ಬಂದಿದ್ದು, ಹಿರಿಯ ನಾಗರಿಕರು ವ್ಯವಸ್ಥಾಪಕಿಯ ನಡೆಗೆ ಖಂಡನೆ ವ್ಯಕ್ತಪಡಿಸಿದ್ದಾರೆ.

(Visited 1 times, 1 visits today)