ಹುಳಿಯಾರು: ಗ್ರಾಮಠಾಣ ವ್ಯಾಪ್ತಿಯಲ್ಲಿರುವ ನನ್ನ ನಿವೇಶನದ ಖಾತೆ ಮಾಡಿಸಲು ಹುಳಿಯಾರು ಪಟ್ಟಣ ಪಂಚಾಯ್ತಿಗೆ 2 ವರ್ಷಗಳಿಂದ ಅಲೆಯುತ್ತಿದ್ದೇನೆ. ಆದರೆ ಇದೂವರೆವಿಗೂ ಖಾತೆ ಆಗಿಲ್ಲ. ಯಾವಾಗ ಬಂದರೂ ಒಂದೊAದು ಸಬೂಬು ಹೇಳಿ ಕಳುಹಿಸುತ್ತಿದ್ದಾರೆ. ಗಂಡನ ಮನೆ ಹೊಸದುರ್ಗ ತಾಲೂಕಿನ ಶ್ರೀರಾಂಪುರದಿAದ ಪಂಚಾಯ್ತಿಗೆ ಅಲೆದು ಅಲೆದು ಸಾಕಾಗಿ ಹೋಗಿದೆ. ಮೇಲಧಿಕಾರಿಗಳು ಇನ್ನಾದರೂ ಖಾತೆ ಮಾಡಿಸಲು ನಿರ್ಲಕ್ಷಿö್ಯಸಿರುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಂಡು ನನಗೆ ಖಾತೆ ಮಾಡಿಸಿಕೊಟ್ಟು ಪುಣ್ಯಕಟ್ಟಿಕೊಳ್ಳಿ ಎಂದು ರೇಷ್ಮಾಬಾನು ಬುಧವಾರ ಮನವಿ ಮಾಡಿದ್ದಾರೆ.
ಹುಳಿಯಾರಿನ ಗ್ರಾಮ ಠಾಣಾ ವ್ಯಾಪ್ತಿಯಲ್ಲಿನ ಲಿಂಗಾಯಿತರ ಬೀದಿಯ ಪಂಚಾಯ್ತಿ ಖಾತೆ ಸಂಖ್ಯೆ 325 ಅ.ಸಂ 204 ನಿವೇಶನವನ್ನು ನನ್ನ ತಾಯಿಯಿಂದ 14/8/2018 ರಲ್ಲಿ ರಿಜಿಸ್ಟರ್ ಮಾಡಿಕೊಂಡಿದ್ದೇನೆ. ಈ ನಿವೇಶನವನ್ನು ನನ್ನ ಹೆಸರಿಗೆ ಖಾತೆ ಬದಲಾವಣೆ ಮಾಡಿಕೊಡಲು 2/2/23 ರಲ್ಲಿ ಪಂಚಾಯ್ತಿಗೆ ರಿಜಿಸ್ಟರ್ ಪ್ರತಿ, ಇಸಿ, ಆಧಾರ್ ಕಾರ್ಡ್, ಗ್ರಾಮಠಾಣಾ ನಕ್ಷೆ, ಕಂದಾಯ ರಸೀಧಿ ಹೀಗೆ ಎಲ್ಲವನ್ನು ಕೊಟ್ಟಿದ್ದೇನೆ. ಆದರೆ ಇಲ್ಲಿಯವರೆವಿಗೆ ಖಾತೆ ಮಾಡಿಕೊಟ್ಟಿಲ್ಲ. ಯಾವಾಗ ಬಂದರೂ ಸಿಬ್ಬಂದಿ ಇಲ್ಲ, ಪರಿಶೀಲಿಸುತ್ತಿದ್ದೇನೆ, ರಜೆ ಇದ್ದೇನೆ ಹೀಗೆ ಒಂದಿಲ್ಲೊAದು ಸಬೂಬು ಹೇಳಿ ಕಳುಹಿಸುತ್ತಿದ್ದಾರೆ ಎಂದು ತಮ್ಮ ಅಳಲನನ್ನು ತೋಡಿಕೊಂಡಿದ್ದಾರೆ.
ಒಮ್ಮೆ ನಿಮ್ಮ ಪೈಲ್ ಕಳೆದು ಹೋಗಿದೆ ಮತ್ತೊಮ್ಮೆ ಕೊಡಿ ಎಂದರು. ಪುನಃ ಎಲ್ಲಾ ದಾಖಲಾತಿಗಳನನ್ನು ಸೇರಿಸಿ ಆರೇಳು ತಿಂಗಳ ಹಿಂದೆ ಕೊಟ್ಟು ಸ್ವೀಕೃತಿ ಪಡೆದಿದ್ದೇನೆ. ಆದರೂ ಖಾತೆ ಬದಲಾವಣೆ ಮಾಡಿಕೊಟ್ಟಿಲ್ಲ. ಈಗ ಹೊಸ ಇಸಿ ಕೊಡಿ ಎನ್ನುತ್ತಿದ್ದಾರೆ. 2 ವರ್ಷಗಳಿಂದ ಅಲೆಯುವ ಜೊತೆಗೆ ಇವರಿಗೆ ದಾಖಲಾತಿಗಳನ್ನು ಕೊಟ್ಟುಕೊಟ್ಟು ಸಾಕಾಗಿ ಹೋಗಿದೆ. ಮೇಲಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ನನ್ನದೇ ಸ್ವತ್ತನ್ನು ನನ್ನ ಹೆಸರಿಗೆ ಮಾಡಿಕೊಡಲು ಹೀಗೆ ಸತಾಯಿಸುತ್ತಿರುವವರ >> 2ನೇ ಪುಟಕ್ಕೆ
ಮೇಲೆ ಕ್ರಮ ಕೈಕೊಂಡು ತಕ್ಷಣ ನನಗೆ ಖಾತೆ ಮಾಡಿಸಿ ಕೊಡುವಂತೆ ಮನವಿ ಮಾಡಿದ್ದಾರೆ. ಖಾತೆ ಬದಲಾವಣೆಗೆ ಬರುವ ಅರ್ಜಿಗಳನ್ನು ಸರತಿಯ ಪ್ರಕಾರ ನೊಂದಣಿ ಮಾಡಿಕೊಂಡು ಒಂದಾದ ನಂತರ ಒಂದರAತೆ ವಿಲೆ ಮಾಡಬೇಕು. ಆದರೆ ರೇಷ್ಮಾಬಾನು ಅವರು ಕೊಟ್ಟ ನಂತರ ಕೊಟ್ಟಿರುವ ಅದೂ ಗ್ರಾಮ ಠಾಣಾ ವ್ಯಾಪ್ತಿಯಲ್ಲಿ ಬರದಿದ್ದರೂ ಅರ್ಜಿಗಳು ವಿಲೆ ಆಗಿವೆ. ಇದರರ್ಥ ಹಣ ಮತ್ತು ಪ್ರಭಾವ ಉಳ್ಳವರ ಖಾತೆಗಳಾಗುತ್ತಿದ್ದು ಸಾಮಾನ್ಯರ ಖಾತೆ ಪೆಂಡಿAಗ್ ಇಡಲಾಗುತ್ತಿದೆ. ಹುಳಿಯಾರು ಪಂಚಾಯ್ತಿಯ ಖಾತೆ ಹಾಗೂ ಎನ್ಒಸಿಗಳ ಬಗ್ಗೆ ಸಮಗ್ರ ತನಿಖೆ ಆಗಬೇಕಿದೆ. ಸಿನಿಯಾರಿಟಿ ಇಲ್ಲದಿದ್ದರೂ ಖಾತೆ ಮಾಡಿರುವವರ ಮೇಲೆ ಕ್ರಮ ಕೈಗೊಂಡಗ ಮಾತ್ರ ಪಂಚಾಪ್ತಿಯ ಖಾತೆಯ ದಂಧೆಗೆ ಕಡಿವಾಣ ಹಾಕಲು ಸಾಧ್ಯ ಎಂದು ಮುಸ್ಲಿಂ ಮುಖಂಡ ಇಮ್ರಾಜ್ ತಿಳಿಸಿದರು.
(Visited 1 times, 1 visits today)