ತುಮಕೂರು: ಇಂದಿನ ಪರಸ್ಪರ ಸಂಪರ್ಕಿತ ಡಿಜಿಟಲ್ ಪರಿಸರದಲ್ಲಿ ವಿವಿಧ ಕ್ಷೇತ್ರಗಳ ಮಾಹಿತಿಯನ್ನು ರಕ್ಷಿಸಲು ಸೈಬರ್ ಸುರಕ್ಷತೆ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಸಾಹೇ ಕುಲಾಧಿಪತಿಗಳ ಸಲಹೆಗಾರರಾದ ಡಾ.ವಿವೇಕ ವೀರಯ್ಯ ಅವರು ಅಭಿಪ್ರಾಯಪಟ್ಟರು.
ನಗರದ ಕ್ಯಾತಸಂದ್ರದ ಬಳಿಯಿರುವ ಶ್ರೀ ಸಿದ್ಧಾರ್ಥ ಸ್ಕೂಲ್ ಆಫ್ ಇಂಜಿನಿಯರಿAಗ್ ನಲ್ಲಿ ಏರ್ಪಡಿಸಲಾಗಿದ್ದ ಒಂದು ವಾರದ ಪ್ರಾಧ್ಯಾಪಕರ ಪ್ರಗತಿ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಲಾಗಿದ್ದ ‘ಇ-ಆಡಳಿತದ ಸುರಕ್ಷತೆ, ಸೈಬರ್ ಭದ್ರತೆ ಸಮ್ಮೀಲನದ ವಸ್ತುಸ್ಥಿತಿ ಹಾಗೂ ಆಧುನಿಕ ಕಾಲಘಟ್ಟದ ತಂತ್ರಜ್ಞಾನದಲ್ಲಿ ಕೃತಕ ಬುದ್ದಿಮತ್ತೆ’ ವಿಷಯ ಕುರಿತ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ,
ಇಂಟರ್ನೆಟ್ ಜೀವನದ ಪ್ರತಿಯೊಂದು ಹಂತದಲ್ಲೂ ಅಗತ್ಯವಾಗಿದ್ದು, ಸೈಬರ್ ಭೀತಿಯ ಜೊತೆಗೆ ಸಂಬAಧಿಸಿದ ತೊಂದರೆಗಳು ವೇಗವಾಗಿ ಹೆಚ್ಚುತ್ತಿವೆ. ಪ್ರತಿಷ್ಠಿತ ವ್ಯಕ್ತಿಗಳು, ದೊಡ್ಡ ಸಂಸ್ಥೆಗಳು, ಹಾಗು ಸರ್ಕಾರಗಳೂ ಸಹ ಎಲ್ಲರೂ ಭದ್ರತೆಗೆ ಸಂಬAಧಿಸಿದ ಅಪಾಯಗಳನ್ನು ಎದುರಿಸುತ್ತಿವೆ ಎಂದ ಡಾ.ವಿವೇಕ ವೀರಯ್ಯ ಅವರು ಸೂಕ್ಷ್ಮ ಮಾಹಿತಿಯನ್ನು ಸುರಕ್ಷಿತವಾಗಿಡಲು ಮತ್ತು ಆನ್ಲೈನ್ ಚಟುವಟಿಕೆಗಳನ್ನು ರಕ್ಷಿಸಲು ಎಷ್ಟು ಅಗತ್ಯವಿದೆ ಎಂಬುದು ನಿರ್ಧರಿಸಬೇಕಾಗಿದೆ. ಸೈಬರ್ ದಾಳಿ ಭೀತಿ ಮತ್ತು ಈ ಅಪಾಯಗಳನ್ನು ತಡೆಯಲು ಸಾಧ್ಯವಿರುವ ಪರಿಹಾರಗಳನ್ನು ಹುಡುಕಿಕೊಳ್ಳುವ ತುರ್ತು ಅಗತ್ಯವಿದೆ ಎಂದರು.ಶ್ರೀ ಸಿದ್ಧಾರ್ಥ ಸ್ಕೂಲ್ ಆಫ್ ಇಂಜಿನಿಯರಿAಗ್‌ನ ಪ್ರಾಂಶುಪಾಲರಾದ ಡಾ.ಎಲ್.ಸಂಜೀವ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಸ್ತಾಕ್ಷ ಲ್ಯಾಬ್ ಪ್ರೆöÊ. ಲಿ. ಸಮನ್ವಯ ಅಧಿಕಾರಿ ಡಾ.ಗೀರೀಶ್, ಕಾರ್ಯಾಗಾರದ ಸಂಯೋಜಕರಾದ ವಸೀಮ್ ಉದ್ದೀನ್, ಹಾಜರಿದ್ದರು.

(Visited 1 times, 1 visits today)