ತುಮಕೂರು: ಕಾಂಗ್ರೆಸ್ ಪಕ್ಷ ಗಾಂಧಿಜೀ ಅವರು ಸತ್ಯ, ಶಾಂತಿ ಮತ್ತು ಅಹಿಂಸೆಯ ತತ್ವದ ಮೇಲೆ ನಡೆಯುತ್ತಿದೆ. ಎಲ್ಲ ವರ್ಗದ ಜನರಿಗೂ ಅವಕಾಶಗಳನ್ನು ಕಲ್ಪಿಸಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಚಂದ್ರಶೇಖರ ಗೌಡ ತಿಳಿಸಿದ್ದಾರೆ
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಸದ್ಬಾವನಾ ದಿನ(ಹುತಾತ್ಮರ ದಿನ)ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು, ಮಹಾತ್ಮಗಾಂಧಿಜೀ ಅವರು ಕೇವಲ ಸ್ವಾತಂತ್ರ÷್ಯ ಕ್ಕಾಗಿ ಹೋರಾಟ ನಡೆಸಿದ್ದಷ್ಟೇ ಅಲ್ಲ.ಈ ದೇಶದಲ್ಲಿ ನಡೆಯುತಿದ್ದ ಅನಿಷ್ಠ ಪದ್ದತಿಗಳ ವಿರುದ್ದವೂ ಹೋರಾಟ ನಡೆಸಿದ್ದರು ಎಂದರು.
ಈ ದೇಶದ ಸ್ವಾತಂತ್ರ÷್ಯಕ್ಕಾಗಿ ಹೋರಾಡಿದ ಕಾಂಗ್ರೆಸ್ ಪಕ್ಷ,ಸ್ವಾತಂತ್ರ÷್ಯ ನಂತರವೂ ದೇಶದ ಸಮಗ್ರ ಅಭಿವೃದ್ದಿಗೆ ನಿರಂತರವಾಗಿ ಶ್ರಮಿಸಿದ ಪರಿಣಾಮ ಶಾಲಾ,ಕಾಲೇಜು,ಆಸ್ಪತ್ರೆ, ರಸ್ತೆ,ವಿಮಾನ ನಿಲ್ದಾಣಗಳು,ಅಣೆಕಟ್ಟು ಗಳು ನಿರ್ಮಾಣಗೊಂಡು ದೇಶದ ಜನರು ಸ್ವಾವಲಂಭಿ ಜೀವನ ನಡೆಸಲು ಸಾಧ್ಯವಾಯಿತು. ಇದನ್ನು ತಿಳಿಯದ ಕೆಲವರು ದೇಶಕ್ಕೆ ಕಾಂಗ್ರೆಸ್ ಕೊಡುಗೆ ಎನು ಎಂದು ಪ್ರಶ್ನೇ ಮಾಡುತ್ತಾರೆ. ಇತಿಹಾಸವೇ ಗೊತ್ತಿಲ್ಲದವರಿಂದ ಇತಿಹಾಸ ನಿರ್ಮಿಸಲು ಸಾಧ್ಯವೇ ಎಂದು ಜಿ.ಚಂದ್ರಶೇಖರ ಗೌಡ ಪ್ರಶ್ನಿಸಿದರು. ನನ್ನ ಜೀವನವೇ ನನ್ನ ಸಂದೇಶ ಎಂದ ಮಹಾತ್ಮಗಾಂಧಿಯ ತತ್ವಗಳನ್ನು ಇಡೀ ವಿಶ್ವವೇ ಒಪ್ಪಿಕೊಂಡಿದೆ. ಪ್ರಪಂಚದ ಶೇ 90 ರಷ್ಟು ರಾಷ್ಟçಗಳು ಗಾಂಧಿಜೀ ಅವರ ಸಂಸ್ಕರಣೆ ಮಾಡುತ್ತಿವೆ. ಗಾಂಧಿಜೀ ಹುತಾತ್ಮ ರಾದ ದಿನ ವಿಶ್ವದ 144 ದೇಶಗಳು ಅವರ ದೇಶದ ಬಾವುಟಗಳನ್ನು ಅರ್ಧಕ್ಕೆ ಇಳಿಸಿ ಗೌರವ ಸಲ್ಲಿಸಿದ್ದರು.ಇಂದು ಮಹಾತ್ಮಗಾಂಧಿ ಎನ್ನುವ ಹೆಸರಿಗೆ ಇದ್ದ ಶಕ್ತಿ. ಮಹಾತ್ಮಗಾಂಧಿ ಅವರ ರೀತಿಯಲ್ಲಿಯೇ ಜವಹರಲಾಲ್ ನೆಹರು, ಶ್ರೀ ಮತಿ ಇಂದಿರಾಗಾAಧಿ, ರಾಜೀವ್ ಗಾಂಧಿ,ಸರದಾರ್ ವಲ್ಲಭಾ ಬಾಯಿ ಪಟೇಲ್ ಸೇರಿದಂತೆ ಅನೇಕರು ಈ ದೇಶಕ್ಕಾಗಿ ತಮ್ನ ಪ್ರಾಣ ತ್ಯಾಗ ಮಾಡಿದ್ದಾರೆ. ಅವರೆಲ್ಲರನ್ನು ನಾವುಗಳು ಸ್ಮರಿಸಬೇಕಿದೆ ಎಂದು ಚಂದ್ರಶೇಖರ ಗೌಡ ನುಡಿದರು.
ಕೆಪಿಸಿಸಿ ಉಪಾಧ್ಯಕ್ಷ ಹಾಗು ಕೌಶಲ್ಯಾಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ ಮಾತನಾಡಿ, ಇಂದಿನ ಹುತಾತ್ಮರ ದಿನಾಚರಣೆಯಲ್ಲಿ ರಾಷ್ಷçಕ್ಕಾಗಿ ಮಡಿದ ರಾಜಗುರು,ಸುಖದೇವ್,ಭಗತ್ ಸಿಂಗ್ ಸೇರಿದಂತೆ ಎಲ್ಲರಿಗೂ ಗೌರವ ಸಲ್ಲಿಸಬೇಕಾಗಿದೆ ಎಂದರು. ಮಂಜುನಾಥ್, ಕೆಂಪರಾಜು, ಅನಿಲ್, ಲೋಕೇಶ್ ಸ್ವಾಮಿ, ಕಾರ್ಮಿಕ ವಿಭಾಗದ ವಿ.ಎಸ್.ಸೈಯದ್ ದಾದಾಪೀರ, ನದೀಂ, ಶಿವಾಜಿ ಸೇರಿದಂತೆ ಹಲವರು ಭಾಗವಹಿಸಿದ್ದರು.
(Visited 1 times, 1 visits today)