ತುಮಕೂರು: ಮಡಿವಾಳ ಸಮಾಜ ಕುಲಕಸುಬಿನ ಜೊತೆಗೆ, ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ನೀಡಿ, ಅವರು ಸಹ ಉನ್ನತ ಹುದ್ದೆಗಳನ್ನು ಅಲಂಕರಿಸುವAತೆ ಮಾಡಬೇಕೆಂದು ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್ ತಿಳಿಸಿದ್ದಾರೆ.
ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರಪಾಲಿಕೆ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ,ಕಸಾಪ ಹಾಗೂ ಜಿಲ್ಲಾ ಮಡಿವಾಳ ಸಂಘ ಹಾಗೂ ವಿವಿಧ ಮಡಿವಾಳ ಸಮುದಾಯದ ಸಂಘಟನೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವೀರ ಗಣಾಚಾರಿ ಶ್ರೀಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಶ್ರೀಮಾಚಿದೇವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು,ಮಡಿವಾಳ ವೃತ್ತಿಯಲ್ಲಿಯೂ ಒಳ್ಳೆಯ ಆದಾಯವಿದೆ. ಇದನ್ನು ಮಾಡುವವರು ಮಾಡಲಿ, ಭಿನ್ನ ಕೆಲಸಗಳಿಗೆ ಹೋಗಬೇಕೆಂಬ ಯುವಜನರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಒತ್ತು ನೀಡಿ,ನಿಮ್ಮದೆ ಹಾಸ್ಟಲ್ ಜಾಗದಲ್ಲಿ ಮಕ್ಕಳಿಗೆ ಮಾರ್ಗದರ್ಶನ ನೀಡಿ,ಮೊದಲಿನಿಂದಲೂ ನಮ್ಮ ಕುಟುಂಬ ಮಡಿವಾಳ ಸಮಾಜದ ಜೊತೆಗಿದೆ.ಮುಂದೆಯೂ ನಿಮ್ಮ ಜೊತೆಗೆ ಇರಲಿದ್ದೇನೆ ಎಂಬ ಭರವಸೆಯನ್ನು ನೀಡಿದರು. ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಮಾತನಾಡಿ,12ನೇ ಶತಮಾನದಲ್ಲಿ ಸಮ ಸಮಾಜದ ಕನಸು ಕಂಡಿದ್ದ ಶಿವಶರಣರು ಅನುಭವ ಮಂಟಪದ ಮೂಲಕ ಜಾತಿ, ಧರ್ಮ, ಲಿಂಗ ತಾರತಮ್ಯ ವಿಲ್ಲದೆ ಎಲ್ಲರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಮಾಡಿದರು.ಅಂತಹವರಲ್ಲಿ ಶಿವಶರಣರ ದಂಡನಾಯಕ ಮಡಿವಾಳ ಮಾಚಿದೇವರು ಒಬ್ಬವೇದಿಕೆಯಲ್ಲಿ ಪಾಲಿಕೆ ಮಾಜಿ ಸದಸ್ಯ ವಿಷ್ಣುವರ್ಧನ,ಜಿಲ್ಲಾ ಮಡಿವಾಳ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ವೆಂಕಟರಾಮಯ್ಯ,ಉಪಾಧ್ಯಕ್ಷರಾದ ಆರ್.ಕೃಷ್ಣಮೂರ್ತಿ, ತಾಲೂಕು ಅಧ್ಯಕ್ಷ ಕೆಂಪನರಸಯ್ಯ, ಉಪಾಧ್ಯಕ್ಷ ಕೆ.ಎ.ಗೋವಿಂದ ರಾಜು,ಬಿ.ಚಿಕ್ಕಣ್ಣ,ಹೆಚ್.ದೇವೇಂದ್ರ, ಶಾಂತಕುಮಾರ್, ಆರ್.ಕೆಂಪರಾಮಯ್ಯ, ಬಿ.ಆರ್.ಚನ್ನಬಸವಣ್ಣ, ಟಿ.ಎಸ್.ಲೋಕೇಶ್, ಎಂ.ಎ.ಆನAದಮೂರ್ತಿ, ಎಸ್.ಕಾರಿಯಪ್ಪ, ಯದುಕುಮಾರ್,ಶ್ರೀಮತಿ ಅಂಬಿಕ, ಶ್ರೀಮತಿ ಮಂಜುಳ ಸೇರಿದಂತೆ ಹಲವರು ಉಪಸ್ಥಿತರಿದ್ದರು.

(Visited 1 times, 1 visits today)