ತುಮಕೂರೂ: ತಂತ್ರe್ಞÁನ ಪ್ರಾಭಲ್ಯವಿರುವ ಯುಗದಲ್ಲಿ ಸರ್ವವ್ಯಾಪಿಯಾಗಿರುವ ಮೊಬೈಲï ಫೋನುಗಳ ಅತಿಯಾದ ಬಳಕೆ ವಿದ್ಯಾರ್ಥಿಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ ಎಂಬ ಆತಂಕವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಂ.ಎನ್. ಚೇತನಕುಮಾರ್ ವ್ಯಕ್ತಪಡಿಸಿದರು.
ಅವರು ತುಮಕೂರಿನ ಬಾಲಭವನದಲ್ಲಿ ಬಾಲಭವನ ಸಮಿತಿ ಹಾಗೂ ಝೆನ್ ಟೀಮ್ ವತಿಯಿಂದ ಆಯೋಜಿಸಿದ್ದ ಮೈಸೂರು ರಂಗಾಯಣದ ಮೈ ಫ್ಯಾಮಿಲಿ ನಾಟಕವನ್ನು ಚೆಂಡೆ ಬಾರಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ಮೊಬೈಲ್ ಫೋನ್ ಗಳಿಂದ ಸಿಗುವ ಮನರಂಜನೆಯ ಆಕರ್ಷಣೆಯು ಏಕಾಗ್ರತೆಗೆ ಭಂಗ ತರುತ್ತದೆ ಎಂದ ಅವರು ಇದರಿಂದಾಗಿ ಮಕ್ಕಳ ಕಡಿಮೆ ಶೈP್ಷÀಣಿಕ ಕಾರ್ಯP್ಷÀಮತೆಗೆ ಕಾರಣವಾಗುತ್ತದೆ ಎಂದು ವಿಷಾದಿಸಿದರು.
ಮೊಬೈಲï ಫೋನ್ ಗಳ ಅತಿಯಾದ ಬಳಕೆ ವ್ಯಸನದಂತಹ ನಡಾವಳಿಕೆಗೆ ಕಾರಣವಾಗುತ್ತದೆ. ಹೀಗಾಗಿ ಯಾವ ವಯಸ್ಸಿನಲ್ಲಿ ಮಕ್ಕಳಿಗೆ ಮೊಬೈಲï ಫೋನ್ ನೀಡಬೇಕು ಎಂಬುದನ್ನು ಪೋಷಕರು ನಿರ್ಧರಿಸಬೇಕು ಎಂದು ಸಲಹೆ ನೀಡಿದರು. ಸಂವಹನಕ್ಕಾಗಿ ಅತಿಯಾದ ಮೊಬೈಲ್ ಅನ್ನು ಬಳಸುವುದರಿಂದ ಮಕ್ಕಳ ಮಾನಸಿಕ ಬೆಳವಣಿಗೆ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ವರ್ಚುವಲ್ ಸಂವಹನಗಳಲ್ಲಿ ಹೆಚ್ಚಿನ ಸಮಯವನ್ನು ಕಳೆಯುವುದರಿಂದ ಮುಖಾಮುಖಿ ಸಂವಹನದ ಅವಕಾಶಗಳನ್ನು ಮಕ್ಕಳು ಕಳೆದುಕೊಳ್ಳುತ್ತಿz್ದÁರೆ ಎಂದರು. ಮೊಬೈಲï ನ ಅತಿಯಾದ ಬಳಕೆ ಆತಂಕ, ಖಿನ್ನತೆ ಮತ್ತು ಒಂಟಿತನ ಸೇರಿದಂತೆ ವಿವಿಧ ಮಾನಸಿಕ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗಬಹುದು ಎಂದರು. ಸ್ಮಾರ್ಟ್ ಫೋನ್ ಗಳ ವ್ಯಾಪಕ ಬಳಕೆ ಶೈP್ಷÀಣಿಕ ಪ್ರಗತಿಗೆ ಸವಾಲು ಒಡ್ಡುತ್ತಿದೆ ಎಂದರು.
ಕೆಲವು ವರ್ಷಗಳ ಹಿಂದೆ ಮೊಬೈಲï ಉಳ್ಳವರ ಸೊತ್ತಾಗಿತ್ತು. ಆದರೆ ಈಗ ಮೊಬೈಲï ಚಿಣ್ಣರ ಆಟಿಕೆಯ ವಸ್ತುವಾಗಿ ಯುವಕರೊಡಗೂಡಿ ವಯೋವೃದ್ಧರವರೆಗೆ ದಿನ ಬಳಕೆ ವಸ್ತುವಾಗಿದೆ ಎಂದರು. ಒಂದು ಮೊಬೈಲï ಬಳಸುವ ಕೆಲ ವಿದ್ಯಾರ್ಥಿಗಳು ಈಗ ಎರಡೆರೆಡು ಮೊಬೈಲï ಗಳನ್ನು ಬಳಸುತ್ತಿz್ದÁರೆ ಎಂದರು.
ವೇದಿಕೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಪವಿತ್ರ ಆð.ಜಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿ¯್ಲÁ ನಿರೂಪಣಾಧಿಕಾರಿ ದಿನೇಶï ಆð.ಎಂ. ಉಪಸ್ಥಿತರಿದ್ದರು.

(Visited 1 times, 1 visits today)