ತುಮಕೂರು: ಲೇಖಕ,ವಿಮರ್ಶಕ ಡಾ.ರವಿಕುಮಾರ್ ನೀ.ಹ.ಅವರ ಅವು ಅಂಗೇ ಕಥಾ ಸಂಕಲನದಲ್ಲಿರುವ ಕಥೆಗಳು ಅಂಚಿನ ಸಮುದಾಯಗಳ ದ್ವನಿಯಾಗಿವೆ ಎಂದು ಚಿಂತಕರಾದ ಡಾ.ಭಾರತಿದೇವಿ ಅಭಿಪ್ರಾಯಪಟ್ಟಿದ್ದಾರೆ.
ನಗರದ ಕನ್ನಡ ಭವನದಲ್ಲಿ ಜಲಜಂಬೂ ಲಿಂಕ್ಸ್, ತುಮಕೂರು, ಅರುಣೋದಯ ಸಹಕಾರ ಸಂಘ(ರಿ), ಜಿಲ್ಲಾ ಕಸಾಪ,ತುಮಕೂರು, ಕರ್ನಾಟಕ ಲೇಖಕಿಯರ ಸಂಘ(ರಿ), ತುಮಕೂರು ಅಲೇಖ್ಯ ಎಂಟರ್‌ಪ್ರೆöÊಸಸ್, ತುಮಕೂರು ಇವರು ಆಯೋಜಿಸಿಸದ್ದ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಹಾಗೂ ವಿಮರ್ಶಕ ಡಾ.ರವಿಕುಮಾರ್.ನೀ.ಹ. ಅವರ ಅವು ಅಂಗೇ ಕಥಾ ಸಂಕಲನ ಲೋಕಾರ್ಪಣೆ ಹಾಗು ಚರ್ಚೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು,ಅವು ಅಂಗೇ ಕಥಾ ಸಂಕಲನದಲ್ಲಿರುವ ಬಹುತೇಕ ಕಥೆಗಳು, ಅವರ ಸಂಶೋಧನಾ ಕೃತಿಗಳಾದ ಕುರಂಗರಾಯ, ಜಲಂಜAಭೂ ಕನ್ಯ,ಕಣ್ಣು ಧರಿಸಿ ಕಾಣಿರೋ ಇವುಗಳ ಮುಂದುವರೆದ ಭಾಗಗಳಂತೆ ಕಂಡು ಬರುತಿದ್ದು, ಸಮುದಾಯದ ದ್ವನಿಯನ್ನು ಬಿತ್ತಿರಿಸುತ್ತಿದ್ದು, ಸಾಂಸ್ಕೃತಿಕ ರಾಜಕಾರಣದಿಂದ ಕಣ್ಮೆರೆಯಾದ ನೆಲಮೂಲದ ಸಂಸ್ಕೃತಿಯನ್ನು ಮುನ್ನೆಲೆಗೆ ತರುವ ಪ್ರಯತ್ನವಾಗಿದೆ ಎಂದರು.
ಡಾ.ರವಿಕುಮಾರ್ ನೀ.ಹ.ಅವರ ಪ್ರತಿ ಕಥೆಯಲ್ಲಿಯೂ ತಾರತಮ್ಯ ಮುಕ್ತ ಸಮಾಜದ ಕನಸು ಇರುವುದನ್ನು ಕಾಣಬಹುದು.ಯಾತನೆ,ನೋವಿನಿಂದ ಕೂಡಿದ ಭೂತ ಕಾಲವನ್ನು ವರ್ತಮಾನದಲ್ಲಿ ಎದುರುಗೊಳ್ಳುವ ಪ್ರಯತ್ನ ಇದಾಗಿದೆ ಎಂದರು. ಅವು ಅಂಗೇ ಕಥಾ ಸಂಕಲನ ಕುರಿತು ಉದ್ಯೋನ್ಮುಖ ಕವಿ ನವೀನ್ ಪೂಜಾರಳ್ಳಿ, ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾ ಬಸವರಾಜು,ಡಾ.ಮೂರ್ತಿ ತಿಮ್ಮನಹಳ್ಳಿ ಮಾತನಾಡಿದರು. ವೇದಿಕೆಯಲ್ಲಿ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ, ಡಾ.ಮುಕುಂದ್, ಡಾ.ಹನುಮಂತರಾಯಪ್ಪ ಪಾಲಸಂದ್ರ, ಗುರುಪ್ರಸಾದ್ ಕಂಟಲಗೆರೆ, ಉಪಸ್ಥಿತರಿದ್ದರು.

(Visited 1 times, 1 visits today)