ಕೊರಟಗೆರೆ: ಸಿಎಂ ಸಿದ್ದರಾಮಯ್ಯ ಕರ್ನಾಟಕ ಸರಕಾರದ 17ನೇ ಬಜೆಟ್ ಮಂಡನೆ ಮಾಡ್ತಾರೇ. ಬಜೇಟ್‌ನಲ್ಲಿ ಗ್ರಾಮೀಣ ಭಾಗದ ಅಭಿವೃದ್ದಿಗೆ ಹೆಚ್ಚಿನ ಅನುಧಾನ ನೀಡುವಂತೆ ಸಿಎಂಗೆ ನಾನು ಮನವಿ ಮಾಡಿದ್ದೇನೆ. ಗ್ಯಾರಂಟಿ ಯೋಜನೆಯ ಜೊತೆ ಗ್ರಾಮೀಣ ಭಾಗದ ಅಭಿವೃದ್ದಿಯು ಆಗಲಿದೆ. ಟೀಕೆ ಮಾಡೋರಿಗೆ ನಾನು ಅಭಿವೃದ್ದಿಯ ಉತ್ತರವನ್ನೇ ನೀಡೋಣ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು.
ಕೊರಟಗೆರೆ ತಾಲೂಕು ಚನ್ನರಾಯನದುರ್ಗ ಹೋಬಳಿ ಜೆಟ್ಟಿಅಗ್ರಹಾರ ಗ್ರಾಪಂ ವ್ಯಾಪ್ತಿಯ ಜಂಪೇನಹಳ್ಳಿ ಕ್ರಾಸಿನ ಬಳಿ ಪಿಡ್ಲೂö್ಯಡಿ ಇಲಾಖೆಯಿಂದ ಬುಧವಾರ ಏರ್ಪಡಿಸಲಾಗಿದ್ದ 26ಕೋಟಿ ವೆಚ್ಚದ ವಿವಿಧ ರಸ್ತೆ ಅಭಿವೃದ್ದಿ ಕಾಮಗಾರಿಗಳಿಗೆ ಗುದ್ದಲಿಪೂಜೆ ನೇರವೆರಿಸಿ ಮಾತನಾಡಿದರು.
ಬಜೇಟ್‌ನಲ್ಲಿ ತುಮಕೂರು ಜಿಲ್ಲೆ ಮತ್ತು ಕೊರಟಗೆರೆ ಕ್ಷೇತ್ರದ ನೀರಾವರಿ ಯೋಜನೆಗೆ ಹೆಚ್ಚಿನ ಅನುಧಾನ ಸೀಗಲಿದೆ. ಕೊರಟಗೆರೆ ಪಪಂಯನ್ನು ಪುರಸಭೆಯನ್ನಾಗಿ ಮಾಡಲು ಈಗಾಗಲೇ ಸರಕಾರ ಚಿಂತನೆ ನಡೆಸುತ್ತಿದೆ. ಜಂಪೇನಹಳ್ಳಿ ಕ್ರಾಸ್‌ನಲ್ಲಿ ಕುಡಿಯುವ ನೀರು, ಹೈಮಾಸ್ಕ್ ಲೈಟ್ ವ್ಯವಸ್ಥೆ ಮಾಡಿಸುತ್ತೇನೆ. ಸರಕಾರದಲ್ಲಿ ದುಡ್ಡಿಲ್ಲ ಅಭಿವೃದ್ದಿ ಕೆಲಸಗಳು ಆಗ್ತಿಲ್ಲ ಎಂಬ ತಪ್ಪು ಸಂದೇಶ ನೀಡ್ತಿದ್ದಾರೇ. 5ಗ್ಯಾರಂಟಿಯ ಬಗ್ಗೆ ಟೀಕೆ ಮಾಡಿದೋರು ಈಗ ಅದರ ಲಾಭ ಪಡೆಯುತ್ತಿಲ್ಲವೇ ಎಂದರು. ನಾನು ಕೊರಟಗೆರೆ ಕ್ಷೇತ್ರಕ್ಕೆ ಬಂದ ನಂತರ 5ನೇ ಸಲ ಮುಖ್ಯರಸ್ತೆ ಅಭಿವೃದ್ದಿ ಮಾಡ್ತಿದ್ದೀನಿ. ಗುಣಮಟ್ಟದ ಕಾಮಗಾರಿ ನಡೆಯದೇ ಪಿಡ್ಲೂö್ಯಡಿ ರಸ್ತೆಯು ದುಸ್ಥಿತಿಗೆ ತಲುಪಿದೆ. 5ವರ್ಷ ಗುತ್ತಿಗೆದಾರನೇ ರಸ್ತೆಯ ನಿರ್ವಹಣೆ ಮಾಡ್ಬೇಕು. ಇಲ್ಲವಾದ್ರೇ ನಾನು ಸುಮ್ಮನೇ ಇರೋದಿಲ್ಲ ಎಚ್ಚರಿಕೆ ಇರಲಿ ನಿಮಗೇಎಂದು ಹೇಳಿದರು. ಜಿಲ್ಲಾಧಿಕಾರಿ ಶುಭಕಲ್ಯಾಣ್, ಎಸ್ಪಿ ಅಶೋಕ್, ಕೊರಟಗೆರೆ ತಹಶೀಲ್ದಾರ್ ಮಂಜುನಾಥ.ಕೆ, ಪಿಡ್ಲೂö್ಯಡಿ ಎಇಇ ಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕೆರೆಶಂಕರ್, ಇದ್ದರು.
(Visited 1 times, 1 visits today)