ತುಮಕೂರು: ಭಾರತದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿ ಬಾಯಿ ಪುಲೆ ಅವರು ಹಲವು ವೈರುದ್ಯಗಳ ನಡುವೆಯೂ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುವ ಸಲುವಾಗಿ ಶಾಲೆ ತರೆದು ಮಹಿಳಾ ಲೋಕಕ್ಕೆ ಹೊಸ ಚೈತನ್ಯವನ್ನು ತುಂಬಿದ್ದಾರೆ ಎಂದು ತುಮಕೂರು ಗ್ರಾಮಾಂತರ ಶಾಸಕ ಬಿ.ಸುರೇಶಗೌಡ ಅಭಿಪ್ರಾಯಪಟ್ಟಿದ್ದಾರೆ.
ನಗರದ ಕನ್ನಡ ಭವನದಲ್ಲಿ ಮಾತೆ ಸಾವಿತ್ರಿ ಬಾಯಿ ಫುಲೆ ರಾಷ್ಟಿçÃಯ ಶಿಕ್ಷಕಿಯರ ಫೆಡರೇಷನ್, ನವದೆಹಲಿ, ಕರ್ನಾಟಕ ಸಾವಿತ್ರಿ ಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ), ರಾಜ್ಯ ಮತ್ತು ಜಿಲ್ಲಾ ಘಟಕವತಿಯಿಂದ ಹಮ್ಮಿಕೊಂಡಿದ್ದ ಸಾವಿತ್ರಿ ಬಾಯಿ ಪುಲೆ ಅವರ 194ನೇ ಜನ್ಮಜಯಂತಿ ಹಾಗೂ ಅಲ್ಪಸಂಖ್ಯಾತ ಸಮುದಾಯದ ಮೊದಲ ಶಿಕ್ಷಕಿ ಫಾತಿಮಾ ಶೇಖ್ ಜಯಂತಿ ಕಾರ್ಯಕ್ರಮಕ್ಕೆ ಇರ್ವರೂ ಶಿಕ್ಷಕಿಯರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳಾ ಶಾಲೆ ತೆರೆದ ಪರಿಣಾಮ ಹೆಣ್ಣು ಮಕ್ಕಳ ಬಾಳಿನಲ್ಲಿ ಹೊಸ ಮನ್ವಂತರ ಪ್ರಾರಂಭವಾಯಿತು ಎಂದರು.
ತಮ್ಮ 08ನೇ ವಯಸ್ಸಿಗೆ ಮದುವೆಯಾಗಿ, ಗಂಡನ ಸಹಾಯದಿಂದ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಶಾಲೆ ತೆರೆದ ಸಾವಿತ್ರಿ ಬಾಯಿ ಫುಲೆ,ಶಿಕ್ಷಣದಿಂದ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿ ಸಮಾಜದ ಮುಖ್ಯವಾಹಿನಿಗೆ ಬರಬಹುದು ಎಂದು 194 ವರ್ಷಗಳ ಹಿಂದೆಯೇ ಆಲೋಚನೆ ಮಾಡಿದ್ದ ಆ ತಾಯಿಯ ದೂರದೃಷ್ಟಿ ನಿಜಕ್ಕೂ ಮೆಚ್ಚುವಂತದ್ದು,ಅನಕ್ಷರತೆ, ಕಂದಾಚಾರ, ಮಹಿಳೆಯರನ್ನು ನಾಲ್ಕು ಗೋಡೆಗಳಿಗೆ ಸಿಮೀತಗೊಳಿಸಿದ್ದ ಕಾಲದಲ್ಲಿ ಆ ಎಲ್ಲಾ ಗೊಡೆಗಳನ್ನು ಕಡೆವಿ,ಹೆಣ್ಣು ಮಕ್ಕಳ ಶಿಕ್ಷಣದ ಆಸೆಗೂ ರಕ್ಕೆ ಕಟ್ಟಿದವರು ಸಾವಿತ್ರಿ ಬಾಯಿ ಫುಲೆ, ಅವರಿಗೆ ಬೆನ್ನೆಲುಬಾಗಿ ನಿಂತವರು ಅವರ ಪತಿ ಜೋತಿ ಬಾ ಫುಲೆ ಅವರು.ಇಂದಿನ ಮಹಿಳೆಯರು ಅವರನ್ನು ಅತ್ಯಂತ ಗೌರವದಿಂದ ಕಾಣಬೇಕಾಗಿದೆ ಎಂದು ಶಾಸಕ ಬಿ.ಸುರೇಶಗೌಡ ನುಡಿದರು.
ತುಮಕೂರು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತಪ್ಪ ಮಾತನಾಡಿ,ಮಹಾರಾಷ್ಟçದ ಸತಾರ ಜಿಲ್ಲೆಯಲ್ಲಿ ಹುಟ್ಟಿದ ಸಾವಿತ್ರಿ ಬಾಯಿ ಫುಲೆ ಅಂದಿನ ಅನಿಷ್ಠ ಪದ್ದತಿಗಳಾದ ಬಾಲ್ಯ ವಿವಾಹಕ್ಕೆ ಬಲಿಯಾದರೂ ಛಲಬೀಡೆದೆ ಗಂಡನ ಸಹಾಯದಿಂದ ಶಿಕ್ಷಣ ಮುಂದುವರೆಸಿ,ಶಿಕ್ಷಕರ ತರಬೇತಿ ಪಡೆದು, ಮಹಿಳೆಯರಿಗಾಗಿ 18 ಶಾಲೆಗಳನ್ನು ತೆರೆದು, ಸಮಾಜದ ಅನಿಷ್ಠ ಪದ್ದತಿಗಳ ವಿರುದ್ದ ಹೋರಾಟದ ಸಮಾಜ ಸುಧಾರಕಿ. ಅಂದಿನ ಬ್ರಿಟಿಷ್ ಸರಕಾರ ಫಸ್ಟ್ ಲೇಡಿ ಟೀಚರ್ ಎಂಬ ಬಿರುದು ನೀಡಿ ಗೌರವಿಸುತ್ತದೆ. ಅವರ ದಾರಿಯಲ್ಲಿ ತಾವೆಲ್ಲರೂ ಮುನ್ನೆಡೆಯಬೇಕು ಎಂದರು.
ಕಾರ್ಯಕ್ರಮಕ್ಕೂ ಮುನ್ನ ಡಿಡಿಪಿಐ ಕಚೇರಿಯಿಂದ ಕನ್ನಡಭವನದವರೆಗೆ ಸಾವಿತ್ರಿ ಬಾಯಿ ಫುಲೆ ಮತ್ತು ಅಲ್ಪಸಂಖ್ಯಾತರ ಮೊದಲ ಶಿಕ್ಷಕಿ ಫಾತೀಮಾ ಶೇಖ್ ಅವರ ಭಾವಚಿತ್ರಗಳ ಮೆರವಣಿಗೆ ನಡೆಯಿತು.ವೇದಿಕೆಯಲ್ಲಿ ಡಯಟ್‌ನ ಉಪನಿರ್ದೇಶಕ ಮಂಜುನಾಥ್,ಹಿರಿಯ ಉಪನ್ಯಾಸಕಿ ಶಾಂತಲಾ, ಜಿ.ಪಂ. ಮುಖ್ಯ ಲೆಕ್ಕ ಪರಿಶೋಧಕ ನರಸಿಂಹಮೂರ್ತಿ, ಕರ್ನಾಟಕ ಸಾವಿತ್ರಿ ಬಾಯಿ ಫುಲೆ ಶಿಕ್ಷಕಿಯರ ಸಂಘದ ತುಮಕೂರು ಜಿಲ್ಲಾಧ್ಯಕ್ಷೆ ಹಾಗು ರಾಜ್ಯ ಸಹಕಾರ್ಯದರ್ಶಿ, ಉಪಸ್ಥಿತರಿದ್ದರು.

(Visited 1 times, 1 visits today)