ತುರುವೇಕೆರೆ: ತಾಲೂಕಿನ ಗಡಿಭಾಗದ ಸುಕ್ಷೇತ್ರ ರಂಗನಹಳ್ಳಿ ಶ್ರೀ ಶನೇಶ್ವರ ಸ್ವಾಮಿಯವರ 21 ನೇ ಜಾತ್ರಾ ಮಹೋತ್ಸವವು ಫೆ.12 ರಿಂದ 15 ರವರೆಗೆ ಬಹಳ ವಿಜೃಂಭಣೆಯಿ0ದ ನೆರವೇರಲಿದೆ ಎಂದು ರಂಗನಹಳ್ಳಿ ಶ್ರೀ ಶನೇಶ್ವರಸ್ವಾಮಿ ಸೇವಾ ಸಮಿತಿ ತಿಳಿಸಿದೆ.
ಸುಮಾರು ವರ್ಷಗಳಿಂದ ಬಹಳ ವೈಭವದಿಂದ ನಿರಂತರವಾಗಿ ಆಚರಿಸಿಕೊಂಡು ಬರುತ್ತಿರುವ ಶನೇಶ್ವರ ಸ್ವಾಮಿ ಜಾತ್ರಾ ಮಹೋತ್ಸವವು ತಾಲೂಕಿನಲ್ಲಿ ಪ್ರಸಿದ್ದಿ ಪಡೆದಿದ್ದು, ಈ ಬಾರಿ ನಡೆಯುವ 21 ನೇ ಜಾತ್ರಾ ಮಹೋತ್ಸವವು ಶ್ರೀ ಆಂಜನೇಯಸ್ವಾಮಿ, ಶ್ರೀ ದುರ್ಗಾಪರಮೇಶ್ವರಿ ಹಾಗೂ ಆದಿಪರಾಶಕ್ತಿ ಕಾಳಿಕಾದೇವಿಯವರ ಆಗಮನದೊಂದಿಗೆ ಶ್ರೀಶನೇಶ್ವರ ಸ್ವಾಮಿಯವರ ಮಹೋತ್ಸವವು ಧಾರ್ಮಿಕ ವಿಧಿ-ವಿಧಾನಗಳಿಂದ ವಿಜೃಂಭಣೆಯಿAದ ನೆರವೇರಲಿದೆ. ಫೆ. 12 ರಂದು ಸ್ವಾಮಿಗೆ ಪಂಚಾಮೃತ, ಅಷ್ಟೋತ್ತರ ಕುಂಕುಮಾರ್ಚನೆ ಮಹಮಂಗಳಾರತಿ ಹಾಗೂ ಶ್ರೀಕ್ಷೇತ್ರ ಮಲ್ಲಾಘಟ್ಟ ಕೆರೆಯಲ್ಲಿ ಸ್ವಾಮಿಗೆ ಗಂಗಾಸ್ನಾನ ನೆರವೇರಲಿದ್ದು, 13 ರಂದು ಜಾನಪದ ಕಲಾ ತಂಡಗಳೊAದಿಗೆ ಆಲ್ಬೂರು. ಅಣಪನಹಳ್ಳಿ. ಬಸವನಹಳ್ಳಿ. ರಂಗನಹಳ್ಳಿ. ಮಾಕನಹಳ್ಳಿ. ನೊಣವಿನಕೆರೆ. ಕಾಡಸಿದ್ದೇಶ್ವರ ಮಠ ಸೇರಿದಂತೆ ಸುತ್ತಮುತ್ತಲ ಹಳ್ಳಿಗಳಲ್ಲಿ ಉತ್ಸವಗಳು ನೆಡೆಯಲಿವೆ.
ಫೆ.14 ರಂದು ಲೋಕಕಲ್ಯಾಣ ಯಾಗ ಕ್ಷೇತ್ರಕ್ಕೆ ಆಗಮಿಸಿದ ಗ್ರಾಮ ದೇವತೆಗಳೊಂದಿಗೆ `ಅಗ್ನಿಕುಂಡ’ ಪ್ರವೇಶ, ಇದೇ ಸಂಜೆ ಪರಮಪೂಜ್ಯ ಪೀಠಾಧ್ಯಕ್ಷರಾದ ಡಾ. ಶ್ರೀನಿರ್ಮಲಾನಂದನಾಥ ಸ್ವಾಮಿ ಪೂಜ್ಯರ ಆಗಮನದೊಂದಿಗೆ ಧಾರ್ಮಿಕ ಕಾರ್ಯಕ್ರಮ ನೆಡೆಯಲಿದೆ. ರಾತ್ರಿ 10 ಗಂಟೆಗೆ ರಾಜ್ಯ ಮಟ್ಟದ ಪುರುಷರ ಹೊನಲು ಬೆಳಕಿನ (ಮ್ಯಾಟ್) ಕಬ್ಬಡಿ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ. ಸಂಜೆ `ಸಂಗೀತ ರಸಸಂಜೆ’ ಕಾರ್ಯಕ್ರಮ ಜರುಗಲಿದೆ.
(Visited 1 times, 1 visits today)