ಹುಳಿಯಾರು: ರೈತರು ಸರ್ಕಾರದ ಕೃಷಿ ಹೊಂಡ, ಚೆಕ್ ಡ್ಯಾಮ್, ಉದಿಬದ ಮತ್ತಿತರರ ಅನುಕೂಲಗಳನ್ನು ಬಳಕೆ ಮಾಡಿಕೊಂಡು ಮಳೆಯ ನೀರನ್ನು ಇಂಗಿಸಲು ಮುಂದಾಗಬೇಕು ಎಂದು ಶಾಸಕ ಸಿ.ಬಿ.ಸುರೇಶ್‌ಬಾಬು ತಿಳಿಸಿದರು.
ಹುಳಿಯಾರು ಸಮೀಪದ ದೊಡ್ಡಎಣ್ಣೇಗೆರೆಯಲ್ಲಿ ಕೃಷಿ ಇಲಾಖೆಯಿಂದ ಜಲಾನಯನ ಡಬ್ಲೂö್ಯಡಿ ಸಿ 2 ಯೋಜನೆಯಲ್ಲಿ ಆಯೋಜಿಸಿದ್ದ ಮಣ್ಣು ಮತ್ತು ನೀರಿನ ಸಂರಕ್ಷಣೆ ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ತಾಲೂಕಿಗೆ ಈ ಹಿಂದೆ ವರ್ಷಕ್ಕೆ ಇನ್ನೂರರಿಂದ ಐನೂರು ಸ್ಪಿಂಕ್ಲರ್ ಸೆಟ್ ವಿತರಿಸಲಾಗುತ್ತಿತ್ತು. ಈಗ ಕಳೆದ 2 ವರ್ಷಗಳಿಂದ ಆರು ಸಾವಿರಕ್ಕೂ ಹೆಚ್ಚು ಸ್ಪಂಕ್ಲರ್ ಸೆಟ್‌ಗಳನ್ನು ರೈತರಿಗೆ ವಿತರಿಸಲಾಗಿದೆ. ಅದೂ ಯಾವ ಪಕ್ಷ, ಜಾತಿ ನೋಡದೆ ರೈತನೆನ್ನುವ ಪಹಣಿ ಒಂದನ್ನು ನೋಡಿ ವಿತರಿಸಲಾಗಿದೆ ಎಂದು ತಿಳಿಸಿದರು. ಗಣಿ ಬಾದಿತ ಪ್ರದೇಶದ ಅಭಿವೃದ್ದಿಗೆ ಮೀಸಲಿದ್ದ ಗಣಿ ಹಣದಲ್ಲಿ ತಾಲೂಕಿನ ಕೃಷಿ ಇಲಾಖೆಗೆ 57 ಕೋಟಿ, ರಸ್ತೆಗಳಿಗೆ 400 ಕೋಟಿ ರೂ. ಬಿಡುಗಡೆಯಾಗಿದೆ ಹಂದನಕೆರೆ ಹೋಬಳಿಗೆ ಭದ್ರ ನೀರು ಹರಿಸಲು ಈಗಾಗಲೆ ಎಂಜಿನಿಯರ್ ಅವರೊಂದಿಗೆ ಚರ್ಚಿಸಲಾಗಿದೆ ಎಂದರಲ್ಲದೆ ಮೈಕ್ರೋ ಫೈನಾನ್ಸ್ ಹಾವಳಿಗೆ ಕಡಿವಾಣ ಹಾಕಲು ರಾಜ್ಯದಲ್ಲೇ ಮೊದಲ ಬಾರಿಗೆ ಲೀಡ್ ಬ್ಯಾಂಕ್ ಮ್ಯಾನೇಜರ್ ನೇತೃತ್ವದಲ್ಲಿ ತಾಲೂಕಿನ ಬ್ಯಾಂಕ್ ಹಾಗೂ ಪೊಲೀಸ್ ಅಧಿಕಾರಿಗಳ ಸಭೆ ನಡೆಸಲಾಗಿದೆ ಎಂದು ತಿಳಿಸಿದರು. ಜಂಟಿ ಕೃಷಿನಿರ್ದೇಶಕರಾದ ರಮೇಶ್, ಉಪ ಕೃಷಿ ನಿರ್ದೇಶಕರಾದ ಹುಲಿರಾಜ್, ಸಹಾಯಕ ಕೃಷಿ ನಿರ್ದೇಶಕರಾದ ಶಿವರಾಜ್ ಕುಮಾರ್, ಗ್ರಾಮ ಪಂಚಾಯತಿ ಅಧ್ಯಕ್ಷರಾದ ತಾಯಮ್ಮ ಸೇರಿದಂತೆ ಮುನ್ನೂರಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.
ಹಂದನಕೆರೆ ಹೋಬಳಿಯ ರೈತರಿಗೆ ರಾಗಿ ಕಟಾವು ಯಂತ್ರ ಖರೀಧಿಸಲು 11 ಲಕ್ಷ ರೂ, ಪಿಎಂಎಫ್‌ಎAಇ ಯೋಜನೆಯಡಿ 40 ಕ್ಕೂ ಅಧಿಕ ರೈತರಿಗೆ ಎಣ್ಣೆಗಾಣ, ಸಿರಿಧಾನ್ಯ ಸಂಸ್ಕರಣಾ ಘಟಕ ನೀಡಲಾಗಿದೆ. ತಾಲೂಕಿನಲ್ಲಿ ಬೃಹತ್ ಸಿರಿಧಾನ್ಯ ಸಂಸ್ಕರಣಾ ಘಟಕಕ್ಕೆ 50 ಲಕ್ಷ ರೂ.ಗಳ ಸಹಾಯಧನ ಮಂಜೂರು ಮಾಡಲಾಗಿದೆ.
(Visited 1 times, 1 visits today)