ಚಿಕ್ಕನಾಯಕನಹಳ್ಳಿ: ಪ್ರಧಾನಮಂತ್ರಿ ಸುರಕ್ಷಾಭೀಮ ವಿಮಾ ಯೋಜನೆಯಲ್ಲಿ ಕೇವಲರೂ.20 ತೊಡಗಿಸಿದರೆ ಆಕಸ್ಮಿಕ ಮರಣಕ್ಕೆ ರೂ.2ಲಕ್ಷ ದೊರೆಯಲಿದೆ ಎಂದು ಆರ್ಥಿಕ ಸಾಕ್ಷರಥಾ ಕೇಂದ್ರದ ಸಲಹೆಗಾರ ಆರ್.ಎಂ. ಕುಮಾರಸ್ವಾಮಿ ತಿಳಿಸಿದರು. ತಾಲ್ಲೂಕಿನ ಶೆಟ್ಟಿಕೆರೆ ಹೋಬಳಿ ದುಗಡಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಚಿಹಳ್ಳಿ ಗ್ರಾಮದಲ್ಲಿ ನಡೆದ ಜನಸುರಕ್ಷಾ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ ಕೇಂದ್ರ ಸರ್ಕಾರ ಸಾಮಾನ್ಯಜನರ ಅನುಕೂಲಕ್ಕಾಗಿ ಸಾಕ್ಷಷ್ಟು ಯೋಜನೆಗಳನ್ನು ನೀಡಿದೆ. ಬ್ಯಾಂಕ್ ಮೂಲಕ ರೈತರಿಗಾಗಿ ಕಿಸಾನ್ ಕ್ರೆಡಿಟ್ ಯೋಜನೆ, ಸ್ವಸಹಾಯ ಸಂಘಗಳಿಗೆ ಸಾಲ ಸೌಲಭ್ಯ ಹಾಗೂ ಸುಲಭಕಂತುಗಳ ಹಲವು ವಿಮಾಯೋಜನೆ ಸೌಲಭ್ಯ ನೀಡಿದೆ. ಇದರಲ್ಲಿ ಬ್ಯಾಂಕ್ ಮೂಲಕ ಕೇವಲ ರೂ.20 ಕಂತನ್ನು ಪ್ರಧಾನ ಮಂತ್ರಿ ಸುರಕ್ಷಾಭೀಮಯೋಜನೆಯಲ್ಲಿಆಕಸ್ಮಿಕ ಮರಣಕ್ಕೆ ರೂ. 2 ಲಕ್ಷ ನೀಡಲಾಗುತ್ತೆ ಎಂದರು. ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಯೋಜನೆಯಲ್ಲಿ 436ರೂ. ಕಂತು ಕಟ್ಟಿದರೆ ಸಹಜ ಸಾವುಗಳಿಗೂಸಹ ರೂ.2ಲಕ್ಷ ದೊರೆಯಲಿದೆ ಎಂದರು. ಇದೇ ಸಂದರ್ಭದಲ್ಲಿ ಮಹಾವೀರ್ ಜೈನ್ ಆಸ್ಪತ್ರೆಯ ಸಹಯೋಗದಲ್ಲಿ ಮಂಜುನಾಥ್ ಆರಾದ್ಯರವರ ನೇತೃತ್ವದಲ್ಲಿ ಆರೋಗ್ಯ ಉಚಿತ ತಪಾಸಣೆ ನಡೆಸಲಾಯಿತು. ತಪಾಸಣೆಯಲ್ಲಿ ಸಿಬ್ಬಂದಿಗಳಾದ ಉದಯಶಂಕರ್, ಪ್ರಸಾದ್, ಸುರೇಶ್,ಲೋಕೇಶ್, ಅಜಯ್‌ಕುಮಾರ್, ಚೈತ್ರ,ಹೇಮಾವತಿ, ಜನ್ನಿಫರ್ ಸಹಕರಿಸಿದರು.
(Visited 1 times, 1 visits today)