ತುಮಕೂರು: ನಗರದ ಸಮೀಪದ ಅಗಳಕೋಟೆಯಲ್ಲಿರುವ ಶ್ರೀ ಸಿದ್ದಾರ್ಥ ದಂತ ಕಾಲೇಜಿನ ಪ್ರೊಸ್ತೋಡಾಂಟಿಕ್ಸ್ ಮತ್ತು ಕ್ರೌನ್ & ಬ್ರಿಡ್ಜ್ ವಿಭಾಗ ಹಾಗೂ ಭಾರತೀಯ ಪ್ರಾಸ್ತೋಡಾಂಟಿಕ್ ಸೊಸೈಟಿಯ ಸಹಯೋಗದೊಂದಿಗೆ ಪ್ರೊಸ್ತೋಡಾಂಟಿಕ್ಸ್ ದಿನಾಚರಣೆಯ ಅಂಗವಾಗಿ ‘ಕೃತಕ ಹಲ್ಲುಗಳÀ ಜೋಡಣೆ ಮತ್ತು ಮುಖ ಸೌಂದರ್ಯದ ಪುನರ್ ಸ್ಥಾಪನೆ ಕುರಿತ’ ಎರಡು ದಿನಗಳ ರಾಜ್ಯಮಟ್ಟದ ಕಾರ್ಯಾಗಾರವನ್ನು ಯಶಸ್ವಿಯಾಗಿ ನಡೆಸಲಾಯಿತು.
ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಈ ಕಾರ್ಯಾಗಾರವನ್ನು ಸಾಹೇ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಕೆ.ಬಿ.ಲಿಂಗೇಗೌಡ ಅವರು ಉದ್ಘಾಟಿಸಿ, ಮುಖ ಸೌಂದರ್ಯದ ಪುನರ್ ಸ್ಥಾಪನೆ ಮತ್ತು ಹಲ್ಲುಗಳ ಬದಲಿ ಜೋಡಣೆಯಲ್ಲಿ ದಂತ ವೈದ್ಯರ ಪಾತ್ರ ಮುಖ್ಯವಾಗಿರುತ್ತದೆ. ಅವರು ಪರಿಣಿತಿಯಿಂದಾಗಿ ವಿಪತ್ತುಗಳಂದ ಹಾನಿಗೊಳಗಾದ ಹಲ್ಲುಗಳ ಬದಲಿಗೆ ಕೃತಕ ಹಲ್ಲುಗಳನ್ನು ಜೋಡಿಸಿ, ನಿರ್ವಹಿಸಲು ಮತ್ತು ದಂತ ಹದಗೆಡುವುದನ್ನು ತಡೆಯಲು ಆಧುನಿಕ ಚಿಕಿತ್ಸಾ ಕ್ರಮಗಳನ್ನು ಅನುಸರಿಸಿ ಚಿಕಿತ್ಸೆ ನೀಡುತ್ತಾರೆ ಎಂದರು.
ಕಾರ್ಯಾಗಾರದಲ್ಲಿ ಪ್ರಾಸ್ತವಿಕ ನುಡಿಗಳನ್ನಾಡಿದ ಶ್ರೀ ಸಿದ್ದಾರ್ಥ ದಂತ ಕಾಲೇಜಿನ ಪ್ರಾಂಶುಪಾಲರಾದ ಡಾ.ಪ್ರವೀಣ್ ಕುಡುವಾ, ದಂತ ಸಂರಕ್ಷಣೆಯಿAದ ಮುಖ ಸೌಂದರ್ಯ ಕಾಪಾಡಿಕೊಳ್ಳಲು ಸಾಧ್ಯ. ಒಂದು ವೇಳೆ ದುರಂತ ಮತ್ತು ಇನ್ನಿತರ ಅವಗಡಗಳಲ್ಲಿ ದಂತಗಳು ಹಾನಿಗೀಡಾದಾಗ, ಆಧುನಿಕ ಚಿಕಿತ್ಸಾ ಕ್ರಮಗಳನ್ನು ಮತ್ತು ಪದ್ದತಿಗಳನ್ನು ಅಳವಡಿಸಿಕೊಂಡು ಕೃತಕ ಹಲ್ಲುಗಳನ್ನು ಜೋಡಿಸಿ, ಪೂರ್ಣಮಟ್ಟದಲ್ಲಿ ಪೂರ್ಣಬಾಯಿ ಪುನರ್ವಸತಿ ಮಾಡುವ ನಿಟ್ಟಿನಲ್ಲಿ ತಜ್ಞ ದಂತ ವೈದ್ಯರ ಪಾತ್ರ ಹೇಗಿರುತ್ತದೆ ಎಂಬುದನ್ನು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲು ಈ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದರು. ಡೆಂಟಲ್ ಶಿಕ್ಷಣದ ನಿರಂತರ ಅಧ್ಯಯನದ ಭಾಗವಾದ ಈ ಎರಡು ದಿನದ ಕಾರ್ಯಾಗಾರದಲ್ಲಿ ದಂತವೈದ್ಯರು ಹಾಗೂ ಭಾರತೀಯ ಪ್ರಾಸ್ತೋಡಾಂಟಿಕ್ ಸೊಸೈಟಿಯ ಕರ್ನಾಟಕ ಶಾಖೆಯ ಅಧ್ಯಕ್ಷರು ಆದ ಡಾ.ಸುಪ್ರಿಯಾ ಮಾನ್ವಿ ಅವರು ‘ದಂತದ ನಗುವನ್ನು ಮರುಸ್ಥಾಪಿಸುವುದು-ಪ್ರೊಸ್ತೋಡಾಂಟಿಕ್ಸ್ ಪರಿಹಾರಗಳು’ ವಿಷಯ ಕುರಿತು ಮಾತನಾಡಿ, ದೀರ್ಘಕಾಲದ ಉರಿಯೂತದ ಪ್ರಮಾಣಿತ ಚಿಕಿತ್ಸಾ ಆಯ್ಕೆಗಳು, ಹಾನಿಗೊಳಗಾದ ದಂತದ ಭಾಗಗಳನ್ನು ಪುನಃಸ್ಥಾಪಿಸಲು ಅಳವಡಿಸಿಕೊಳ್ಳಬೆಕಾದ ಶಸ್ತ್ರಚಿಕಿತ್ಸೆ ಮತ್ತು ಕಸಿ ಮಾಡುವಿಕೆಯಂತಹ ಶಸ್ತ್ರಚಿಕಿತ್ಸೆ ಕುರಿತು ಮಾಹಿತಿ ನೀಡಿದರು.
ಕಾರ್ಯಾಗಾರದ ಆಯೋಜಕರು ಹಾಗೂ ಶ್ರೀ ಸಿದ್ಧಾರ್ಥ ದಂತ ಕಾಲೇಜಿನ ಪ್ರೊಸ್ತೋಡಾಂಟಿಕ್ಸ್ ಮತ್ತು ಕ್ರೌನ್ & ಬ್ರಿಡ್ಜ್ ವಿಭಾಗದ ಮುಖ್ಯಸ್ಥರಾದ ಡಾ.ಎಸ್. ಪದ್ಮಜಾ, ರಿಜಿಸ್ಟಾçರ್ ಡಾ.ಎಂ.ಝಡ್. ಕುರಿಯನ್, ಪರೀಕ್ಷಾ ನಿಯಂತ್ರಕ ಡಾ.ಗುರುಶಂಕರ್, ಡಾ. ಶ್ರೀನಿವಾಸ್, ಡಾ. ರಮೇಶ್ ಚೌಧರಿ, ಇದ್ದರು.
(Visited 1 times, 1 visits today)