ತುಮಕೂರು: ದಿಯಾ ಸಂಸ್ಥೆಯಿAದ ನಿಸ್ವಾರ್ಥ ಸೇವೆಯನ್ನು ಸಮಾಜಕ್ಕೆ ನೀಡುತ್ತಿದ್ದು ಇವರ ಕಾರ್ಯವೈಖರಿಯಿಂದ ಸಮಾಜದಲ್ಲಿ ಅನೇಕರಿಗೆ ನಿಸ್ವಾರ್ಥ ಸೇವೆ ಸಲ್ಲಿಸಲಿಕ್ಕೆ ಮಾದರಿಯಾಗಿದ್ದಾರೆ ಎಂದು ನಿವೃತ್ತರ ಮಹಾಮನೆ ಅಧ್ಯಕ್ಷರಾದ ಬಾ.ಹ. ರಮಾಕುಮಾರಿರವರು ತಿಳಿಸಿದರು. ನಗರದ ಕೆ. ಆರ್. ಬಡಾವಣೆಯಲ್ಲಿರುವ ದಿಯಾ ಚಾರಿಟಬಲ್ ಟ್ರಸ್ಟ್ ಇಂಡಿಯಾ ಕಚೇರಿ ಮುಂಭಾಗದಲ್ಲಿ ಹಿರಿಯ ನಾಗರಿಕರು ಮತ್ತು ವಿಕಲಚೇತನರಿಗೆ ಕಂಬಳಿ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ದಿಯಾ ಸಂಸ್ಥೆಯ ನಿಸ್ವಾರ್ಥ ಸೇವೆ ನನಗೆ ಸೇವೆ ಸಲ್ಲಿಸಲಿಕ್ಕೆ ಪ್ರೇರಣೆಯಾಗಿದ್ದು , ಟ್ರಸ್ಟ್ ನ ಸಂಸ್ಥಾಪಕರಾದ ಡಾ.ಇಮ್ಯಾನುಯಾಲ್ ಜಯಕುಮಾರ್ ಅವರ ಕುಟುಂಬ ಸಮೇತರಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವುದು ನನಗೆ ಖುಷಿ ತಂದಿದೆ ಎಂದರು.
ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆಯ ನಿರ್ದೇಶಕರಾದ ಶಿಲ್ಪ ದೊಡ್ಡಮನೆ ರವರು ಮಾತನಾಡಿ ಸಮಾಜದಲ್ಲಿ ಹಿರಿಯ ನಾಗರಿಕರು ಮತ್ತು ವಿಕಲಚೇತನರಿಗೆ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ದಿಯಾ ಚಾರಿಟಬಲ್ ಟ್ರಸ್ಟ್ ಇಂಡಿಯಾ ಏಕೈಕ ಸಂಸ್ಥೆಯಾಗಿದೆ. ನಮ್ಮ ಇಲಾಖೆಯಿಂದ ಕೆಲವರಿಗೆ ಮಾತ್ರ ಸೇವೆ ಒದಗಿಸಲಿಕ್ಕೆ ಸಾಧ್ಯ, ದಿಯಾ ಸಂಸ್ಥೆಯಿAದ ಎಲ್ಲಾ ಹಿರಿಯ ನಾಗರಿಕರು ಮತ್ತು ವಿಕಲಚೇತನರು ಸೇವೆಯನ್ನು ಪಡೆದುಕೊಳ್ಳುವಂತೆ ಮನವಿ ಮಾಡಿದರು.
ದಿಯಾ ಚಾರಿಟಬಲ್ ಟ್ರಸ್ಟ್ ಇಂಡಿಯಾ ಸಂಸ್ಥಾಪಕ ಡಾ. ಇಮ್ಯಾನುಯಾಲ್ ಜಯಕುಮಾರ್ ರವರು ಮಾತನಾಡಿ ಕಳೆದ 18 ವರ್ಷಗಳಿಂದ ದಿಯಾ ಸಂಸ್ಥೆಯ ಮೂಲಕ ಯಾವುದೇ ರೀತಿಯ ಆರ್ಥಿಕ ಸಹಾಯವಿಲ್ಲದಂತೆ ತಮ್ಮ ಸ್ವಂತ ದುಡಿಮೆಯ ಹಣದಲ್ಲಿ ನಿರಂತರ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಹಿರಿಯ ನಾಗರಿಕರು ಮತ್ತು ವಿಕಲಚೇತನರಿಗೆ ನಿರಂತರವಾಗಿ ಕಂಬಳಿ, ವೀಲ್ ಚೇರ್ ಹಾಗೂ ನಗರದಲ್ಲಿ ವಾಸವಿರುವ ಕಡುಬಡವರಿಗೆ ಉಚಿತ ಆಂಬುಲೆನ್ಸ್ ಸೇವೆಯನ್ನು ದಿಯಾ ಚಾರಿಟಬಲ್ ಟ್ರಸ್ಟ್ ಇಂಡಿಯಾದ ಮೂಲಕ ಸೇವೆಯನ್ನು ಒದಗಿಸುತ್ತಿದ್ದು, ಕನಿಷ್ಠ ಐದುನೂರು ಮಕ್ಕಳಿಗೆ ಉಚಿತ ಶಿಕ್ಷಣ ಮತ್ತು ವಸತಿ ವ್ಯವಸ್ಥೆಯನ್ನು ನೀಡುವುದು ನಮ್ಮ ಗುರಿಯಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ದಿಯಾ ಚಾರಿಟಬಲ್ ಟ್ರಸ್ಟ್ ಇಂಡಿಯಾ ನ ಕಾರ್ಯದರ್ಶಿ ಸುನಿತಾ ಡಾ. ಇಮ್ಯಾನುಯಾಲ್ ಜಯಕುಮಾರ್,ಇದ್ದರು.
(Visited 1 times, 1 visits today)