ತುರುವೇಕೆರೆ: ತಾಲೂಕಿನ ಬಾಣಸಂದ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅದ್ಯಕ್ಷರಾಗಿ ದುಂಡದೊರೆರಾಜ್ ಹಾಗೂ ಉಪಾದ್ಯಕ್ಷರಾಗಿ ಕೋಡಿಹಳ್ಳಿ ಸಾವಿತ್ರಮ್ಮ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ದುಂಡ ದೊರೆರಾಜ್ ಅವರಿಗೆ 7 ಸದಸ್ಯರ ಮೂಲಕ ಆಯ್ಕೆಯಾದರು. ಅದರಂತೆ ಉಪಾದ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕೋಡಿಹಳ್ಳಿ ಸಾವಿತ್ರಮ್ಮ ಅವರಿಗೂ 7 ಸದಸ್ಯರ ಮೂಲಕ ಆಯ್ಕೆಯಾದ ಹಿನ್ನಲೆ ಅಧ್ಯಕ್ಷ ಸ್ಥಾನಕ್ಕೆ ದುಂಡ ದೊರೆರಾಜ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಕೋಡಿಹಳ್ಳಿ ಸಾವಿತ್ರಮ್ಮ ಆಯ್ಕೆಯಾಗಿದ್ದಾರೆಂದು ಚುನಾವಣಾದಿಕಾರಿಗಳು ಘೋಷಿಸಿದರು. ಚುನಾವಣಾದಿಕಾರಿಯಾಗಿ ಸಿಡಿಓ ಶ್ರೀನಿವಾಸ್ ಕರ್ತವ್ಯ ನಿರ್ವಹಿಸಿದರು.
ನೂತನ ಅದ್ಯಕ್ಷ, ಉಪಾಧ್ಯಕ್ಷ ಬೆಂಬಲಿಗರು ಸಿಹಿ ಹಂಚಿ ಪಠಾಕಿ ಸಿಡಿಸಿ ಸಂಬ್ರಮ ವ್ಯಕ್ತಪಡಿಸಿದರು. ಸಹಕಾರ ಸಂಘದ ನಿರ್ದೇಶಕರುಗಳಾದ ನಾಗರಾಜು, ಜಿ.ಸಿ.ನಿಜಗುಣಮೂರ್ತಿ, ಬೈರಪ್ಪಾಜಿ ಹೆಚ್.ಎಸ್., ಡಿ.ಆರ್.ಶಿವರಾಮಯ್ಯ. ಸಂತೋಷ್ ಕಂಟ್ಲಿ, ಮಾಜಿ ಸದಸ್ಯ ಹನುಮೇಗೌಡ, ಗ್ರಾ.ಪಂ.ಸದಸ್ಯರಾದ ದುಂಡ ನವೀನ್, ಬಾಣಸಂದ್ರ ಪ್ರಕಾಶ್, ಮುಖಂಡರಾದ ರಾಜಣ್ಣ, ಉಮೇಶ್, ಯೋಗೀಶ್, ಉದಯ್ ಕುಮಾರ್, ಶ್ರೀನಿವಾಸ್, ಅಶೋಕ್ ಕುಮಾರ್, ಮೇಲ್ವಿಚಾರಕರಾದ ಹರ್ಷ
ಸೇರಿದಂತೆ ಬ್ಯಾಂಕ್ ಸಿಬ್ಬಂದಿ ಹಾಗೂ ಇತರರು ಅಭಿನಂದಿಸಿದರು.
(Visited 1 times, 1 visits today)