ತುಮಕೂರು: ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ಸುರೇಶಗೌಡ,ಹಿರಿಯ, ಸಜ್ಜನ ಸಚಿವರಾದ ಡಾ.ಜಿ.ಪರಮೇಶ್ವರ್ ಅವರ ಬಗ್ಗೆ ತೀರಾ ಅವಹೇಳನಕಾರಿಯಾಗಿ ಮಾತನಾಡುವುದು ತರವಲ್ಲ. ಇದನ್ನು ನಾನು ಖಂಡಿಸುತ್ತೇನೆ. ತಮ್ಮ ಹೇಳಿಕೆ ಬಗ್ಗೆ ಕೊರಟಗೆರೆ ಮತ್ತು ತುಮಕೂರು ಗ್ರಾಮಾಂತರ ಕ್ಷೇತ್ರದ ಜನತೆಯ ಕ್ಷಮೆಯಾಚಿಸಬೇಕು ಎಂದು ಸಹಕಾರ ಸಚಿವರಾದ ಕೆ.ಎನ್.ರಾಜಣ್ಣ ಸಲಹೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಗೃಹ ಹಾಗು ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಡಾ.ಜಿ.ಪರಮೇಶ್ವರ್ ಒಬ್ಬರ ಬಗ್ಗೆ ಅಸಮಾಧಾನ ಇದ್ದರೆ ಅದನ್ನು ಬಹಿರಂಗವಾಗಿ ಎಂದು ವ್ತಕ್ತಪಡಿಸುವುದಿಲ್ಲ.ಐದು ಬಾರಿ ಶಾಸಕರಾಗಿ ಮಂತ್ರಿಯಾಗಿ, ಡಿಸಿಎಂ ಆಗಿ ಕೆಲಸ ಮಾಡಿದ ಅಂತಹ ವ್ಯಕ್ತಿಯನ್ನು ಹಿಯಾಳಿಸುವಂತೆ ಮಾತನಾಡುವುದು ಸರಿಯಲ್ಲ. ಟೀಕೆಗಳು ಇರಲಿ ಅದು ವಯುಕ್ತಿಕ ಮಟ್ಟಕ್ಕೆ ಇಳಿಯಬಾರದು. ಈ ನಿಟ್ಟಿನಲ್ಲಿ ಗ್ರಾಮಾಂತರ ಕ್ಷೇತ್ರದ ಹಾಲಿ ಮತ್ತು ಮಾಜಿ ಶಾಸಕರಿಬ್ಬರುವ ವೈಯುಕ್ತಿಕ ಮಟ್ಟದ ಆರೋಪ, ಪ್ರತ್ಯಾರೋಪ ಕೈಬಿಡಬೇಕು. ಟೀಕೆ ಸಂದರ್ಭದಲ್ಲಿ ಪದ ಬಳಕೆ ಇನ್ನೊಬ್ಬರಿಗೆ ನೋವಾಗದಂತೆ ಎಚ್ಚರ ವಹಿಸುವುದು ಸೂಕ್ತ ವೆಂದರು.
ತುಮಕೂರು ಗ್ರಾಮಾಂತರ ಕ್ಷೇತ್ರಕ್ಕೆ ತನ್ನದೇ ಆದ ಘನತೆ ಗೌರವವಿದೆ.1962 ರಿಂದಲೂ ಹೆಬ್ಬೂರು ಕ್ಷೇತ್ರವಾಗಿ ಜನರಿಗೆ ಪರಿಚಯ.ಲಕ್ಕಪ್ಪನವರು,ಗಂಗಾಭೋವಿರವರು,ವೈ.ಕೆ.ರಾಮಯ್ಯ,ಮುದ್ದಹನುಮೇಗೌಡ, ಹೆಚ್.ನಿಂಗಪ್ಪ ಅವರಂತವರು ಶಾಸಕರಾಗಿ ಕೆಲಸ ಮಾಡಿದ್ದಾರೆ.ಇದುವರೆಗೂ ಕ್ಷೇತ್ರದಲ್ಲಿ ಒಂದು ಗಲಭೆ ನಡೆದಿಲ್ಲ.ಅಂತಹ ಮತದಾರರಿರುವ ಕ್ಷೇತ್ರ.ಪಕ್ಷದ ಜೊತೆಗೆ, ಜಲಬೆಂಬಲದಿAದ ಗೆಲುವು ಆಗಿದೆ.ಹಾಲಿ ಮತ್ತು ಮಾಜಿ ಶಾಸಕರಿಬ್ಬರಿಗೂ ಸಂದರ್ಭೋಚಿತ ಸಹಾಯ ಮಾಡಿದ್ದೇನೆ. ವಯುಕ್ತಿಕ ಕಚ್ಚಾಟ ಬಿಡಿ,ಗೌರವದಿಂದ ನಡೆದುಕೊಳ್ಖಿ ಎಂದು ಇಬ್ಬರಿಗೂ ಕೆ. ಎನ್.ರಾಜಣ್ಣ ಸಲಹೆ ನೀಡಿದರು.
ಲಿಂಕ್ ಕೆನಾಲ್‌ಗೆ ಸಂಪೂರ್ಣ ವಿರೋಧ:ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ಗೃಹ ಸಚಿವ ಡಾ.ಜಿ. ಪರಮೇಶ್ವರ್, ನಾನು ಸೇರಿದಂತೆ ಜಿಲ್ಲೆಯ ಎಲ್ಲಾ ಶಾಸಕರ ತೀವ್ರ ವಿರೋಧ ಇದೆ. ಸಂಪುಟ ಸಭೆಯಲ್ಲಿ ಚರ್ಚೆ ಮಾಡುವ ಸಂದರ್ಭದಲ್ಲೂ ಪರಮೇಶ್ವರ್ ಅವರು ಸಂಪೂರ್ಣ ವಿರೋಧ ವ್ಯಕ್ತಪಡಿಸಿದ್ದರು.ಆದರೆ ಲಿಂಕ್ ಕೆನಾಲ್ ಎಕ್ಸ್ಪ್ರೆಸ್ ಡಾ. ಜಿ. ಪರಮೇಶ್ವರ್ ಅವರು ಉಪಮುಖ್ಯಮಂತ್ರಿಯಾಗಿದ್ದಾಗ ಮಂಜೂರು ಮಾಡಿದ್ದರು. ನಂತರ ಯಡಿಯೂರಪ್ಪ ಸರಕಾರ ಬಂದಾಗ ಅದನ್ನು ರದ್ದುಪಡಿಸಿದ್ದರು. ಹಾಗಾಗಿ ಪ್ರಸ್ತುತ ಈ ಕಾಮಗಾರಿ ವಿಚಾರದಲ್ಲಿ ಪರಮೇಶ್ವರ್ ಅವರು ಕಟ್ಟು ಬಿದ್ದಿದ್ದಾರೆ.ಆದರೂ ಈಗಲೂ ಪರಮೇಶ್ವರ್ ಆದಿಯಾಗಿ ಈ ಲಿಂಕ್ ಕೆನಾಲ್ ಕಾಮಗಾರಿಗೆ ವಿರೋಧ ಇದ್ದು,ಯಾವುದೇ ಕಾರಣಕ್ಕೂ ನೀರು ಹರಿಯಲು ಬಿಡುವುದಿಲ್ಲ ಎಂದರು.
ಶೋಷಿತರ ಸಮಾವೇಶ:ರಾಜ್ಯದಲ್ಲಿ ಶೋಷಿತರ ಸಮಾವೇಶ ಮಾಡುವ ಸಂಬAಧ ಈಗಾಗಲೇ ವರಿಷ್ಠರ ಗಮನಕ್ಕೂ ತರಲಾಗಿದೆ. ಸಮಾವೇಶವನ್ನು ಮೈಸೂರು ಭಾಗದ ಬದಲಾಗಿ ಚಿತ್ರದುರ್ಗ,ಹುಬ್ಬಳ್ಳಿ,ಧಾವಣಗೆರೆ ಭಾಗದಲ್ಲಿ ಮಾಡುವ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ ಎಂದರು.
(Visited 1 times, 1 visits today)